Advertisement

ರಾಜ್ಯದ ಪ್ರಥಮ ತೆಂಗು ಸಂಸ್ಕರಣಾ ಘಟಕ ಇಂದು ಲೋಕಾರ್ಪಣೆ

02:08 PM Sep 18, 2020 | Suhan S |

ಚಾಮರಾಜನಗರ: ತೆಂಗು ಬೆಳೆಗಾರರಿಗೆ ನೆರವಾಗಲು ಸ್ಥಾಪಿತವಾದ ಚಾಮರಾಜನಗರ ತಾಲೂಕು ತೆಂಗು ಬೆಳೆಗಾರರ  ಸಂಸ್ಕರಣಾ ಮತ್ತು ಮಾರಾಟ ಸಹಕಾರ ಸಂಘವು 9 ಕೋಟಿ ರೂ.ವೆಚ್ಚದಲ್ಲಿ ಸಹಕಾರ ತತ್ವದಡಿ ಸ್ಥಾಪಿಸಿರುವ ರಾಜ್ಯದಮೊದಲ ತೆಂಗಿನ ಪುಡಿ ಉತ್ಪಾದನಾ ಘಟಕ (ತೆಂಗು ಸಂಸ್ಕರಣಾ ಘಟಕ) ಶುಕ್ರವಾರ ಲೋಕಾರ್ಪಣೆಗೊಳ್ಳಲಿದೆ.

Advertisement

ತಾಲೂಕಿನ ಪ್ರಮುಖ ಬೆಳೆಗಳಲ್ಲೊಂದಾದ ತೆಂಗಿಗೆ ಬೆಲೆಯಿಲ್ಲದೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇಂಥ ಪರಿಸ್ಥಿತಿಯಲ್ಲಿ ತೆಂಗು ಬೆಳೆಗಾರರಿಗೆ ನೆರವಾಗಲು ಚಾಮರಾಜನಗರ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣಾ ಮತ್ತು ಮಾರಾಟಸಹಕಾರ ಸಂಘವನ್ನು 2002ರ ಜನವರಿಯಲ್ಲಿ ಅಸ್ತಿತ್ವಕ್ಕೆ ತರಲಾಗಿತ್ತು.

ತೆಂಗಿನಪುಡಿ: 405 ಸದಸ್ಯರಿಂದ ಆರಂಭವಾಗಿ, ಪ್ರಸ್ತುತ1,124 ಸದಸ್ಯರನ್ನು ಸಂಘ ಹೊಂದಿದೆ. ತೆಂಗಿನ ಬೆಲೆ ಪದೇ ಪದೆ ಕುಸಿತವಾಗುತ್ತಿದ್ದು, ರೈತರಿಂದ ತೆಂಗು ಸಂಗ್ರಹಿಸಿ, ತೆಂಗಿನ ಉತ್ಪನ್ನವಾದ ತೆಂಗಿನಪುಡಿಯನ್ನು ಸಂಸ್ಕರಿಸಿ ಮಾರಾಟಮಾಡಲು ಸಹಕಾರ ಸಂಘ ಯೋಜನೆ ಹಾಕಿಕೊಂಡಿತು. ತಾಲೂಕಿನ ಕಾಳನ ಹುಂಡಿ ರಸ್ತೆಯ ಮುಣಚನಹಳ್ಳಿಯಲ್ಲಿ ಪ್ರತಿದಿನ 50 ಸಾವಿರ ತೆಂಗಿನ ಕಾಯಿಯನ್ನು ಸಂಸ್ಕರಿಸುವಸಾಮರ್ಥ್ಯದ ತೆಂಗಿನಪುಡಿ ಉತ್ಪಾದನಾ ಘಟಕವನ್ನು 9 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿದೆ.

ತೆಂಗು ಪ್ರಾತ್ಯಕ್ಷಿಕ ಯೋಜನೆ: ಈ ಯೋಜನೆಯಿಂದ ಪ್ರತ್ಯಕ್ಷ- ಪರೋಕ್ಷವಾಗಿ 250 ಜನರಿಗೆ ಉದ್ಯೋಗ ದೊರಕಲಿದೆ. ಈಗಾಗಲೇ ಪ್ರಾಯೋಗಿಕ ಚಾಲನೆ ಸಹ ನೀಡಲಾಗಿದೆ. ತಾಲೂಕಿನಲ್ಲಿಇದುವರೆಗೆ 1,780 ಎಕರೆ ಪ್ರದೇಶದಲ್ಲಿ ತೆಂಗು ಪ್ರಾತ್ಯಕ್ಷಿಕ ಯೋಜನೆ ಹಮ್ಮಿಕೊಂಡು ತೆಂಗಿನ ಕಾಯಿ ಉತ್ಪಾದಕತೆ ಹೆಚ್ಚಿಸಿದೆ. ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುವುದು, ತೆಂಗು ಬೆಳೆ ಬಗ್ಗೆ ಜಾಗೃತಿ ಶಿಬಿರ, ಮರ ಹತ್ತುವ ತರಬೇತಿ ಕಾರ್ಯಕ್ರಮಗಳನ್ನು ನಡೆಸಿದೆ. ತೆಂಗು ಬೆಳೆಯ ಅಭಿವೃದ್ಧಿಗೆ ಏನೇನು ಕಾರ್ಯಕ್ರಮಗಳನ್ನು ಕೈಗೊಳ್ಳಬಹುದೋ ಅದೆನ್ನೆಲ್ಲಾ ಜಾರಿಗೊಳಿಸಲು ಶ್ರಮಿಸುತ್ತಿದೆ.

ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಎ.ಎಂ. ಮಹೇಶಪ್ರಭು ಈ ಸಹಕಾರ ಸಂಘದ ಅಧ್ಯಕ್ಷರು ಮತ್ತು ಸಂಸ್ಕರಣಾ ಘಟಕದ ರೂವಾರಿ. ಶಾಂತಮಲ್ಲಪ್ಪ ಪ್ರಧಾನ ಕಾರ್ಯದರ್ಶಿ ಮತ್ತು ಲೆಕ್ಕಾಧಿಕಾರಿಯಾಗಿದ್ದಾರೆ. ಆಡಳಿತ ಮಂಡಳಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಸೇರಿ 10 ಮಂದಿ ಸದಸ್ಯರಿದ್ದಾರೆ. ಇಂದು ಘಟಕ ಉದ್ಘಾಟನೆ: ಚಾಮರಾಜನಗರದ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದಿಂದ ನಿರ್ಮಿಸಲಾಗಿರುವ ತೆಂಗು ಸಂಸ್ಕರಣ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ಶುಕ್ರವಾರ ಮಧ್ಯಾಹ್ನ 12ಕ್ಕೆ ಕಾಳನಹುಂಡಿ ರಸ್ತೆಯ ಮುಣಚನಹಳ್ಳಿ ತೆಂಗು ಸಂಸ್ಕರಣ ಘಟಕದಲ್ಲಿ ಹಮ್ಮಿಕೊಳ್ಳಲಾಗಿದೆ.

Advertisement

ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಕಾರ್ಯಕ್ರಮದ ಉದ್ಘಾಟಿಸುವರು. ಹಿರಿಯ ಗಾಂಧಿವಾದಿ ಪ. ಮಲ್ಲೇಶ್‌ ವಿಶ್ವ ರೈತಚೇತನ ಪೊ›.ಎಂ.ಡಿ ನಂಜುಂಡಸ್ವಾಮಿ ಅವರ ಪ್ರತಿಮೆ ಅನಾವರಣಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ, ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತೆಂಗು ಸಂಸ್ಕರಣ ಘಟಕ ಉದ್ಘಾಟಿಸುವವರು. ಸಹಕಾರ ಸಚಿವರು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಎಸ್‌.ಟಿ. ಸೋಮಶೇಖರ್‌ ತೆಂಗು ಉತ್ಪನ್ನ ಬಿಡುಗಡೆಗೊಳಿಸಲಿದ್ದಾರೆ. ಶಾಸಕ ಸಿ. ಪುಟ್ಟರಂಗ ಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ. ಅಶ್ವಿ‌ನಿ ಅಧ್ಯಕ್ಷತೆ ವಹಿಸುವರು.

1 ಕೇಜಿ ತೆಂಗಿನ ಕಾಯಿಗೆ 34 ರೂ. :  ಸಹಕಾರ ಸಂಘವು ಸದಸ್ಯರಿಂದ ಈಗಾಗಲೇ ತೆಂಗಿನಕಾಯಿ ಗಳನ್ನು ಖರೀದಿಸುತ್ತಿದೆ. ಬೆಳೆಗಾರರು ತಮ್ಮದೇ ಸಾಗಾಣಿಕೆಯಲ್ಲಿ ತೆಂಗಿನ ಕಾಯಿ ಗಳನ್ನು ಘಟಕಕ್ಕೆ ನೀಡಬೇಕು. ಸುಲಿದಿರುವ ಒಂದು ಕೇಜಿ ತೆಂಗಿನ ಕಾಯಿಗೆ 34 ರೂ. ದರವನ್ನು ಬೆಳೆಗಾರರಿಗೆ ನೀಡಲಾಗು ತ್ತದೆ. ಮಾರನೆಯ ದಿನವೇ ಬೆಳೆಗಾರರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಈ ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರ 3.5 ಕೋಟಿ ರೂ. ಮಂಜೂರು ಮಾಡಿತ್ತು. ಮತ್ತೆ ಈ ಅವಧಿಯಲ್ಲಿ ಯಂತ್ರೋಪಕರಣ ಸ್ಥಾಪನೆಗೆ 3 ಕೋಟಿ ರೂ. ಬಡ್ಡಿ ರಹಿತ ಸಾಲ ನೀಡಿದೆ. ತೆಂಗು ಅಭಿವೃದ್ಧಿ ಮಂಡಳಿ ಈ ಯೋಜನೆಗೆ 50 ಲಕ್ಷ ರೂ. ಸಹಾಯಧನ ಮಂಜೂರು ಮಾಡಿದೆ. ತೆಂಗು ಬೆಳೆಗಾರರ ಸಹಕಾರ ಸಂಘದ ಸದಸ್ಯರ ಶೇರು ಹಣ 35 ಲಕ್ಷ ರೂ. ವಿನಿಯೋಗಿಸಲಾಗಿದೆ.

 

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next