Advertisement

Parliament Case: ಮನೋರಂಜನ್‌ ತಾಯಿ, ಸಹೋದರಿ ಹೇಳಿಕೆ ದಾಖಲಿಸಿದ ದಿಲ್ಲಿ ಪೊಲೀಸರು

11:20 PM Dec 19, 2023 | Team Udayavani |

ಮೈಸೂರು: ಸಂಸತ್‌ ಭವನದಲ್ಲಿನ ಭದ್ರತಾ ಲೋಪ ಸಂಬಂಧ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮನೋರಂಜನ್‌ ಮನೆಗೆ ಮಂಗಳವಾರವೂ ಭೇಟಿ ನೀಡಿದ ದಿಲ್ಲಿ ಪೊಲೀಸ್‌ ವಿಶೇಷ ತನಿಖಾ ತಂಡ ವಿಚಾರಣೆ ಮುಂದುವರಿಸಿತು. ಬೆಳಗ್ಗೆ ಮನೋರಂಜನ್‌ ತಾಯಿ ಮತ್ತು ಸಹೋದರಿಯನ್ನು ಎರಡು ಗಂಟೆಗೂ ಹೆಚ್ಚು ಕಾಲ ಪೊಲೀಸರು ವಿಚಾರಣೆ ನಡೆಸಿದರು. ಪೊಲೀಸ್‌ ವಶದಲ್ಲಿರುವ ಮನೋರಂಜನ್‌ ನೀಡಿರುವ ಹೇಳಿಕೆ ಮತ್ತು ಆತನ ಪೋಷಕರು ನೀಡುತ್ತಿರುವ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿರುವುದರಿಂದ ಮನೋರಂಜನ್‌ ತಾಯಿ ಮತ್ತು ಸಹೋದರಿ ನೀಡಿರುವ ಹೇಳಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡರು.

Advertisement

ಪ್ರಕರಣದ ಮತ್ತೂಬ್ಬ ಆರೋಪಿ ಸಾಗರ್‌ ಶರ್ಮ ಎರಡು ಬಾರಿ ಮನೋರಂಜನ್‌ ನಿವಾಸಕ್ಕೆ ಬಂದಿರುವ ಬಗ್ಗೆ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಮನೋರಂಜನ್‌, ಸಾಗರ್‌ ಶರ್ಮ ಮೈಸೂರಿಗೆ ಬಂದೇ ಇಲ್ಲ ಎಂದು ವಿಚಾರಣೆ ವೇಳೆ ಹೇಳಿದ್ದಾನೆ. ಜೊತೆಗೆ ಮನೋರಂಜನ್‌ಗೆ ಯಾರು ಆರ್ಥಿಕ ಸಹಾಯ ಮಾಡುತ್ತಿದ್ದರು ಎಂಬ ಬಗ್ಗೆಯೂ ದಿಲ್ಲಿ ಪೊಲೀಸರಿಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಬ್ಯಾಂಕ್‌ ಸ್ಟೇಂಟ್‌ಮೆಂಟ್‌ ಪರಿಶೀಲನೆಗೆ ತನಿಖಾ ತಂಡ ಮುಂದಾಗಿದೆ.

ವಿಚಾರಣೆ ವೇಳೆ ಮನೋರಂಜನ್‌ ತಾಯಿ, ನಮ್ಮ ಮಗ ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಊಟ, ತಿಂಡಿ ನಿತ್ಯಕರ್ಮಗಳಿಗೆ ಮಾತ್ರ ಮನೆ ಒಳಗೆ ಬರುತ್ತಿದ್ದ. ಆತ ಮನೆಯಲ್ಲೇ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದ. ಮುದ್ದಿನಿಂದ ಬೆಳಸಿದ್ದೇ ಇದಕ್ಕೆಲ್ಲ ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next