Advertisement

ರಾಜ್ಯದ ಜನಪರ-ಜನಪ್ರಿಯ ಬಜೆಟ್‌: ವಿಶೇಷ ಪ್ರಚಾರಾಂದೋಲನಕ್ಕೆ ಚಾಲನೆ

03:39 PM Apr 17, 2017 | |

ಮಡಿಕೇರಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಸರಕಾರದ 2017-18ನೇ ಸಾಲಿನ ಜನಪರ ಜನಪ್ರಿಯ ಬಜೆಟ್‌ ಕಾರ್ಯಕ್ರಮಗಳ ಮಾಹಿತಿ ಒಳಗೊಂಡ ವಿಶೇಷ ಪ್ರಚಾರಾಂದೋಲನಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್‌ ಕುಮಾರ್‌ ಅವರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.  

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್‌ ತಿಂಗಳಲ್ಲಿ ಮಂಡಿಸಿದ ಬಜೆಟ್‌ನ ಪ್ರಮುಖ ಅಂಶಗಳ ಮಾಹಿತಿಯನ್ನು  ಜಿಲ್ಲೆಯ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬಜೆಟ್‌ ವಿಶೇಷ ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಹೋಬಳಿ ಕೇಂದ್ರಗಳು ಹಾಗೂ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ವಾರ್ತಾ ಇಲಾಖೆಯಿಂದ ಹೊರತರಲಾಗಿರುವ ಪುಸ್ತಕಗಳನ್ನು ವಿತರಿಸುವುದು, ಸರಕಾರ ಘೋಷಿಸಿರುವ ಜನಪರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. 

ಅನ್ನಭಾಗ್ಯ ಯೋಜನೆಯಡಿ 7 ಕೆ.ಜಿ.ಗೆ ಅಕ್ಕಿ ಹೆಚ್ಚಳ, ವಿದ್ಯಾರ್ಥಿಗಳಿಗೆ 5 ದಿನ ಕ್ಷೀರಭಾಗ್ಯ ಯೋಜನೆಯಡಿ ಹಾಲು ವಿತರಣೆ, ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ, ಶೌಚಾಲಯ ನಿರ್ಮಾಣ, ಪ್ರತೀ ಜಿಲ್ಲಾ ಕೇಂದ್ರದಲ್ಲಿ ಗಾಂಧೀ ಭವನ ನಿರ್ಮಾಣ ಮತ್ತಿತರ ಮಾಹಿತಿಯನ್ನು ಕ್ಷೇತ್ರ ಪ್ರಚಾರ ವಾಹನ ಒಳಗೊಂಡಿದೆ ಎಂದು ವಾರ್ತಾಧಿಕಾರಿ ಚಿನ್ನಸ್ವಾಮಿ ತಿಳಿಸಿದ್ದಾರೆ. 

ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ. ವಿಶೇಷ ರಸ್ತೆ ಪ್ಯಾಕೇಜ್‌ಗಾಗಿ 50 ಕೋಟಿ ರೂ., ನಗರದಲ್ಲಿ ವಿಮಾನ ಇಳಿದಾಣ ನಿರ್ಮಾಣ, 3ಡಿ ಕಿರು ತಾರಾಲಯ ಸ್ಥಾಪನೆ, ವಿರಾಜಪೇಟೆಯಲ್ಲಿ ನೂತನ ಕಾರಾಗೃಹ ನಿರ್ಮಾಣ, ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ರಕ್ತವಿದಳ ಕೇಂದ್ರ ಸ್ಥಾಪನೆ, ಮಾಗಡಿ-ಹುಲಿಯೂರು ದುರ್ಗಾ-ನಾಗಮಂಗಲ-ಕೆ.ಆರ್‌. ಪೇಟೆ- ಸೋಮವಾರಪೇಟೆ ಮಾರ್ಗ-ಕೆಶಿಪ್‌ ರಸ್ತೆ ಅಭಿವೃದ್ಧಿಗೆ ಕ್ರಮ ಹೀಗೆ ಬಜೆಟ್‌ನಲ್ಲಿ ಹಲವು ಕಾರ್ಯ ಕ್ರಮಗಳನ್ನು ಜಿಲ್ಲೆಗೆ ವಿಶೇಷ ಕೊಡುಗೆ ನೀಡಲಾಗಿದೆ.  

ರೈತರಿಗೆ ಕೃಷಿ ಸಾಲ, ಕೃಷಿ ಕ್ಷೇತ್ರದ ಹಳೇ ಯೋಜನೆಗೆ ಒತ್ತು, ಹಳೇ ಯೋಜನೆಯಡಿ ಹೊಸ ಬೆಳಕು, ಎಲ್ಲ ಗ್ರಾ.ಪಂ.ಗಳಿಗೆ ಉಚಿತ ವೈಪೈ, ಹಾಗೆಯೇ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಮನಸ್ವಿನಿ, ಮೈತ್ರಿ, ವಸತಿ ಭಾಗ್ಯ, ಪಶುಭಾಗ್ಯ, ನಿರ್ಮಲಭಾಗ್ಯ ಇವುಗಳನ್ನು ಮುಂದುವರಿಸಿಕೊಂಡು ಹೋಗುವುದು ಹೀಗೆ ನಾನಾ ಕಾರ್ಯಕ್ರಮಗಳ ಮಾಹಿತಿಯ ವಿಶೇಷ ಅಭಿಯಾನ ಹಮ್ಮಿಕೊಳ್ಳಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next