Advertisement

ರಾಜ್ಯದ ಮಾಫಿಯಾ ಆಡಳಿತಕ್ಕೆ ಅಂತ್ಯ

01:55 PM Mar 06, 2018 | Harsha Rao |

ಉಡುಪಿ: ಕರ್ನಾಟಕದಲ್ಲಿರುವ ಮಾಫಿಯಾ ಆಡಳಿತವನ್ನು ಕಿತ್ತೂಗೆಯುತ್ತೇವೆ. ಅತ್ಯಲ್ಪ ಅವಧಿಯಲ್ಲಿ ದೇಶದ ಮೂಲೆಮೂಲೆಯ ರಾಜ್ಯಗಳಲ್ಲಿ ಕಮಲವನ್ನರಳಿಸಿದ ಬಿಜೆಪಿ ಮುಂದಕ್ಕೆ ಕರ್ನಾಟಕದಲ್ಲೂ ಅಧಿಕಾರವನ್ನು ನಡೆಸಲಿದೆ ಎಂದು ಬಿಜೆಪಿ ಅಖೀಲ ಭಾರತ ಪ್ರಧಾನ ಕಾರ್ಯದರ್ಶಿ,ರಾಜ್ಯ ಚುನಾವಣಾ ಉಸ್ತುವಾರಿ ಮುರಲೀಧರ ರಾವ್‌ ಅವರು ಹೇಳಿದರು.

Advertisement

ಸೋಮವಾರ ಕಿನ್ನಿಮೂಲ್ಕಿ ಬಸ್‌ ನಿಲ್ದಾಣದ ಸಮೀಪ ನಡೆದ ಬಿಜೆಪಿಯ ಜನಸುರಕ್ಷಾ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೂ ಕಾರ್ಯಕರ್ತರನ್ನು ಗುರುತಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ. ಮಾಫಿಯಾ ಗೂಂಡಾಗಳನ್ನು, ದೇಶದ್ರೋಹಿಗಳನ್ನು ಈ ಸರಕಾರ ರಕ್ಷಿಸುತ್ತಿದೆ. ರಾಜ್ಯದಲ್ಲಿ ಸುರಕ್ಷೆ ಇಲ್ಲ. ಅನ್ಯಾಯ, ಶೋಷಣೆ ಹೆಚ್ಚುತ್ತಲಿದೆ. ದೇಶಭಕ್ತಿಯ ಕೆಲಸ, ಗೋರಕ್ಷಣೆ, ಧರ್ಮ ರಕ್ಷಣೆ ಮಾಡುವವರನ್ನು ರಾಜ್ಯ ಕಾಂಗ್ರೆಸ್‌ ಸರಕಾರ ಟಾರ್ಗೆಟ್‌ ಮಾಡುತ್ತಿದೆ. ಎಸ್‌ಡಿಪಿಐ, ಪಿಎಫ್ಐ, ಕೆಎಫ್ಡಿ ಸಂಘಟನೆಗಳ ಜತೆಗೆ ಸಿದ್ದರಾಮಯ್ಯ ನವರಿಗೆ ಪಾಲುದಾರಿಕೆ ಇದೆ. ಆದರೆ ಭದ್ರ ನೆಲೆಯಲ್ಲಿರುವ ಬಿಜೆಪಿ, ಆರೆಸ್ಸೆಸ್‌ ಸಿದ್ದರಾಮಯ್ಯ ನವರಿಗೆ ತಮ್ಮ ಶಕ್ತಿ ತೋರಿಸಿಕೊಡಲಿದೆ ಎಂದರು.

ಕಾಂಗ್ರೆಸ್‌ ಫೇಲ್‌; ಜೈಲಿಗೆ ಹೋಗುವ ಕಾಲ
ಕಾಂಗ್ರೆಸ್‌ ಆಡಳಿತ ಕರ್ನಾಟಕದಲ್ಲೂ ಫೇಲ್‌ ಆಗಿದೆ. ಭ್ರಷ್ಟಾಚಾರ ಮಿತಿಮೀರಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಿಂದ ಇಳಿಯುತ್ತಲೇ ಅದರ ನಾಯಕರು ಒಬ್ಬೊಬ್ಬರಾಗಿ ಜೈಲಿಗೆ ಹೋಗಲಿದ್ದಾರೆ. ಸಿದ್ದರಾಮಯ್ಯ, ರಾಹುಲ್‌ ಗಾಂಧಿ ಜತೆಯಾಗಿ ಕರ್ನಾಟಕದಲ್ಲಿ ಪ್ರಚಾರ ಮಾಡಿದಷ್ಟು ಬಿಜೆಪಿಗೆ ಲಾಭಕರ. ರಾಹುಲ್‌ ಹೋದಲ್ಲೆಲ್ಲ ಬಿಜೆಪಿ ಗೆದ್ದಿದೆ ಎಂದು ಮುರಲೀಧರ ರಾವ್‌ ಹೇಳಿದರು.

ಸಿದ್ದು ಲಾಟರಿ ಸಿಎಂ: ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಸಿದ್ದರಾಮಯ್ಯ ಲಾಟರಿ ಸಿಎಂ. ಆಕಸ್ಮಿಕವಾಗಿ ಕಳೆದ ಬಾರಿ ಬಿಜೆಪಿ, ಕೆಜೆಪಿ ಹೋಳಾಗಿ ಅದರ ಪರೋಕ್ಷ ಲಾಭ ಕಾಂಗ್ರೆಸ್‌ಗೆ ಆಗಿತ್ತು. ಇದರಿಂದಲೇ ಸಿದ್ದುಗೆ ಲಾಟರಿ ಹೊಡೆಯಿತು ಎಂದರು. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಮಸೂದೆಯನ್ನು ಪ್ರಥಮ ಅಧಿವೇಶನದಲ್ಲಿ ಮೊದಲಾಗಿ ಮಂಡಿಸಲಿದ್ದೇವೆ. ಜನರ ಸುರಕ್ಷೆಗಾಗಿ ಬಿಜೆಪಿ ಸರಕಾರ ಬರಲಿದೆ ಎಂದರು.

Advertisement

ಅಂಬಾಗಿಲಿನಲ್ಲಿ  ಶೋಭಾ ಚಾಲನೆ
ಸಂಸದೆ ಶೋಭಾ ಕರಂದ್ಲಾಜೆ ಅವರು ಅಂಬಾಗಿಲಿ ನಲ್ಲಿ ಜನ ಸುರಕ್ಷಾ ಯಾತ್ರೆಗೆ ಚಾಲನೆ ನೀಡಿದರು.ಕೋಟ ಶ್ರೀನಿವಾಸ ಪೂಜಾರಿ, ಜಯಪ್ರಕಾಶ್‌ ಹೆಗ್ಡೆ, ಕೆ.ರಘುಪತಿ ಭಟ್‌, ಭಾರತಿ ಶೆಟ್ಟಿ, ದಿನಕರ ಬಾಬು,ಶೀಲಾ ಕೆ. ಶೆಟ್ಟಿ, ಉದಯ್‌ ಕುಮಾರ್‌ ಶೆಟ್ಟಿ, ಯಶ್‌ಪಾಲ್‌ ಸುವರ್ಣ, ಶ್ಯಾಮಲಾ ಕುಂದರ್‌, ನಳಿನಿ ಪ್ರದೀಪ್‌ ರಾವ್‌, ಬಿ.ಎನ್‌. ಶಂಕರ ಪೂಜಾರಿ, ಸುಪ್ರಸಾದ್‌ ಶೆಟ್ಟಿ, ಸಂಧ್ಯಾ ರಮೇಶ್‌, ಕುಯಿಲಾಡಿ ಸುರೇಶ್‌ ನಾಯಕ್‌, ಕಿರಣ್‌ ಕುಮಾರ್‌, ಪ್ರತಾಪ್‌ ಹೆಗ್ಡೆ ಮಾರಾಳಿ, ಶ್ರೀಶ ನಾಯಕ್‌ ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪ್ರಸ್ತಾವನೆಗೈದರು. ಕಮಲಾಕ್ಷ ಹೆಬ್ಟಾರ್‌ ಸ್ವಾಗತಿಸಿದರು. ಕುತ್ಯಾರ್‌ ನವೀನ್‌ ಶೆಟ್ಟಿ ನಿರೂಪಿಸಿದರು. ನಗರಾಧ್ಯಕ್ಷ ಪ್ರಭಾಕರ ಪೂಜಾರಿ ವಂದಿಸಿದರು.

ಕುಂದಾಪುರ, ಉಪ್ಪುಂದದಲ್ಲಿ
ಕುಂದಾಪುರದಲ್ಲಿ ನಡೆದ ಜನಸುರಕ್ಷಾ ಯಾತ್ರೆಗೆ ಸಂಗಮ್‌ ಬಳಿ ಕೇಂದ್ರ ಸಚಿವೆ ಮೇನಕಾ ಗಾಂಧಿ, ಸಂಸದೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು. ಹೊಸ ಬಸ್‌ ನಿಲ್ದಾಣವಾಗಿ ಶಾಸ್ತ್ರಿ ಸರ್ಕಲ್‌ ವರೆಗೆ ಮೆರವಣಿಗೆ ನಡೆಯಿತು. ಶಾಸಿŒ ಸರ್ಕಲ್‌ನಲ್ಲಿ ನಡೆದ ಸಭೆಯಲ್ಲಿ ಮುರಲೀಧರ್‌ ರಾವ್‌, ಈಶ್ವರಪ್ಪ ಮಾತನಾಡಿದರು. ಕೋಟ ಶ್ರೀನಿವಾಸ ಪೂಜಾರಿ, ವಿ. ಸುನಿಲ್‌ ಕುಮಾರ್‌, ಜಯಪ್ರಕಾಶ್‌ ಹೆಗ್ಡೆ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಭಾರತಿ ಶೆಟ್ಟಿ, ಕಿರಣ್‌ ಕೊಡ್ಗಿ, ಕಾಡೂರು ಸುರೇಶ್‌ ಶೆಟ್ಟಿ, ಸದಾನಂದ ಇದ್ದರು.

ಉಪ್ಪುಂದದಲ್ಲಿ ವಿಪಕ್ಷ ನಾಯಕ ಈಶ್ವರಪ್ಪ ಮಾತನಾಡಿದರು. ಬಿ.ಎಂ. ಸುಕುಮಾರ್‌ ಶೆಟ್ಟಿ ಸಹಿತ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next