Advertisement
ನಗರದಲ್ಲಿ ಗುರುವಾರ ಬಿಜಿಪಿ ಶಾಸಕರಾದ ಬಿ.ಸಿ. ನಾಗೇಶ್, ಮಸಾಲೆ ಜಯರಾಮ್, ಜಿ.ಬಿ.ಜ್ಯೋತಿ ಗಣೇಶ್ ಒಳಗೊಂಡ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಚುನಾವಣೆ ಮುಗಿದಿದ್ದರೂ ಮೇ 26ರ ವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇದೆ ಎಂದು ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಆದರೆ, ಜಿಲ್ಲೆಯಲ್ಲಿ ಬರಗಾಲ ತೀವ್ರವಾಗಿದೆ. ಈಗಿನ ಚುನಾವಣಾ ನೀತಿ ಸಂಹಿತೆ ಕಾನೂನು ನೋಡಿದರೆ ತುರ್ತು ಪರಿಸ್ಥಿತಿ ನೆನಪಾಗುತ್ತದೆ ಎಂದರು.
Related Articles
Advertisement
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆ ಬಗ್ಗೆ ಗಮನ ಕೊಡುತ್ತಿಲ್ಲ. ಕಳೆದ ಒಂಭತ್ತು ತಿಂಗಳಲ್ಲಿ ಒಂದು ಬಾರಿ ಸಭೆ ನಡೆಸುವುದನ್ನು ಹೊರತು ಪಡಿಸಿದರೆ ಮತ್ಯಾ ವುದೇ ಪ್ರಗತಿ ಪರಿಶೀಲನಾ ಸಭೆ ನಡೆಸಿಲ್ಲ. ಅವರಿಗೆ ರಾಜಕೀಯ ಬಿಟ್ಟರೆ ಬೇರೆ ಬೇಕಿಲ್ಲ. ಜಿಲ್ಲೆಯ ಬರಗಾಲ ಸ್ಥಿತಿ ಇದ್ದರೂ ಯಾವುದೇ ರೀತಿಯಗಮನಹರಿಸುತ್ತಿಲ್ಲ ಎಂದು ನುಡಿದರು.
35 ಹಳ್ಳಿಗಳ ಸ್ಥಿತಿ ಹೀನಾಯ: ಶಾಸಕ ಮಸಾಲೆ ಜಯರಾಮ್ ಮಾತನಾಡಿ, ಅಂತರ್ಜಲ ಕುಸಿತದಿಂದ 1200 ಅಡಿ ಆಳ ಬೋರ್‌ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಒಂದುಕಡೆ ನೀರಿಲ್ಲದೆ ತೆಂಗು- ಅಡಕೆ ತೋಟಗಳು ಒಣಗುತ್ತಿದ್ದರೆ, ಮತ್ತೂಂದೆಡೆ ಬಿರುಗಾಳಿಗೆ 400-600 ತೆಂಗಿನ ಮರಗಳ ಸುಳಿಗಳು ಬಿದ್ದುಹೋಗಿವೆ. ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮ್ಗಳು ನೆಲಕ್ಕುರುಳಿವೆ. ಸರಿಪಡಿಸಲು ಅಧಿಕಾರಿಗಳು ಬರುತ್ತಿಲ್ಲ. ಇದಕ್ಕೂ ನೀತಿ ಸಂಹಿತೆ ಅಡ್ಡಿ ಯಾಗಿದೆ. ತಾಲೂಕಿನ 35 ಹಳ್ಳಿಗಳ ಸ್ಥಿತಿ ಹೀನಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾಚಿಕೆಗೇಡಿನ ಸ್ಥಿತಿ: ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ಅಧಿಕಾರಿಗಳು ತುಂಬಾ ಅನಿವಾರ್ಯ ಸಂದರ್ಭವನ್ನು ಬಿಟ್ಟರೆ ಮತ್ಯಾವುದೇ ಕಾರಣಕ್ಕೂ ಶಾಸಕರ ಜತೆ ದೂರವಾಣಿ ಮೂಲಕವೂ ಸಂಪರ್ಕದಲ್ಲಿರ ಬಾರದೆಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಹೀಗಾದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾದರೂ ಹೇಗೆ? ಇದು ಪ್ರಜಾಪ್ರಭುತ್ವದ ನಾಚಿಕೆಗೇಡಿನ ಸ್ಥಿತಿಯಾಗಿದೆ ಎಂದರು.
ಜೂನ್‌ವರೆಗೂ ನೀರು: ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ನಗರದಲ್ಲಿ ಸುಮಾರು 500 ಬೋರ್‌ವೆಲ್ಗಳಿವೆ. ಅದರಲ್ಲಿ ಸುಮಾರು 140ಕ್ಕೂ ಹೆಚ್ಚು ಬೋರ್‌ವೆಲ್ಗಳು ನಿಂತು ಹೋಗಿವೆ. ಮೈದಾಳ ಕೆರೆಯಲ್ಲಿ 80 ಎಂಸಿಎಫ್ಟಿ, ಬುಗುಡನಹಳ್ಳಿ ಕರೆಯಲ್ಲಿ 70 ಎಂಸಿಎಫ್ಟಿ ನೀರಿದೆ. ಜೂನ್‌ವರೆಗೂ ನೀರುಕೊಡ ಬಹುದು. ಪಾಲಿಕೆಯಲ್ಲಿ ಏಳು ಟ್ಯಾಂಕರ್ ಮಾತ್ರ ಇವೆ. ಹೆಚ್ಚು ಟ್ಯಾಂಕರ್ ಮೂಲಕ ನೀರುಕೊಡುವ ವ್ಯವಸ್ಥೆ ಮಾಡಿ ನೀರಿನ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿಜಿಲ್ಲಾ ಬಿಜೆಪಿ ಕಾರ್ಯ ದರ್ಶಿ ಹೆಬ್ಟಾಕ ರವಿಶಂಕರ್, ಟಿ.ಆರ್.ಸದಾಶಿವಯ್ಯ ಸೇರಿದಂತೆ ಹಲವರು ಇದ್ದರು.