Advertisement
ಬೆಂಗಳೂರು: ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು-2005 ಆಧಾರಿತವಾಗಿ ರಚನೆಯಾಗಿರುವ ರಾಜ್ಯದ ಒಂದರಿಂದ ಹತ್ತನೇ ತರಗತಿಯವರೆಗಿನ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ, ಒಂಭತ್ತು ಮತ್ತು ಹತ್ತನೇ ತರಗತಿಯ ಕನ್ನಡ ತೃತೀಯ ಭಾಷೆ ಪಠ್ಯ ಪುಸ್ತಕ ಮತ್ತು ಆರರಿಂದ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳ ಪರಿಷ್ಕರಣೆಗೆ ರಾಜ್ಯ ಸರಕಾರ ಸಮಿತಿ ರಚಿಸಿದೆ.
Related Articles
Advertisement
ಹಾಗೆಯೇ ಸರಕಾರಕ್ಕೆ ಮಾಸಿಕ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಸಂಯೋಜಕರಿಗೆ ಸರಕಾರ ಸೂಚಿಸಿದೆ. ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಸದಸ್ಯರಾಗಿ ಬೆಂಗಳೂರಿನ ಡಾ| ಬಿ.ಸಿ. ನಾಗೇಂದ್ರ ಕುಮಾರ್, ಚಿಕ್ಕದೇವೇಗೌಡ, ನೇತ್ರಾವತಿ, ನರಸಿಂಹ ಮೂರ್ತಿ ಬಿ.ಕೆ., ವಿಶ್ವನಾಥ್ ಜಿ.ಎಸ್., ಗಂಗಾವತಿಯ ಅಜಮೀರ ನಂದಾಪುರ, ಮದ್ದೂರಿನ ಸುಶೀಲಾ, ಶಿರಸಿಯ ಅಕ್ಷತಾ ಅವರನ್ನು ನೇಮಕ ಮಾಡಲಾಗಿದೆ.
ಕನ್ನಡ ದ್ವಿತೀಯ ಭಾಷೆ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಸದಸ್ಯರನ್ನಾಗಿ ಬೆಂಗಳೂರಿನ ಡಾ| ಬಿ. ಪಾಪಣ್ಣ, ಅನಿತಾ, ಈರಪ್ಪ ಮಹಾಲಿಂಗಪುರ, ರಶ್ಮಿ, ಪವಿತ್ರಾ, ಚಿಕ್ಕಮಗಳೂರಿನ ಡಾ| ಗಣೇಶ್, ಬೆಳಗಾವಿಯ ಡಾ| ಗಜಾನಂದ್, ಮೈಸೂರಿನ ರವೀಶ್ ಕುಮಾರ್ ಅವರನ್ನು ನೇಮಿಸಲಾಗಿದೆ. ಕನ್ನಡ ತೃತೀಯ ಭಾಷೆಯ ಪರಿಷ್ಕರಣ ಸಮಿತಿಗೆ ಬೆಂಗಳೂರಿನ ಮಮತಾ ಭಾಗವತ್, ತುಮಕೂರಿನ ಶಿವಣ್ಣ ಹೆಂದೊರೆ ಅವರನ್ನು ಆಯ್ಕೆ ಮಾಡಲಾಗಿದೆ.
ಸುಳ್ಯದ ಡಾ| ಪ್ರದೀಪ ಕೆಂಚನೂರ್ ನೇಮಕ6 ಮತ್ತು 7ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣೆಗೆ ಮೈಸೂರಿನ ಡಾ| ಕೃಷ್ಣಾ ಹೊಂಬಾಳೆ, ಸುಳ್ಯದ ಡಾ| ಪ್ರದೀಪ ಕೆಂಚನೂರ್, ಚಿಕ್ಕಬಳ್ಳಾಪುರದ ಡಾ| ಕೋಡಿ ರಂಗಪ್ಪ, ಬೆಳಗಾವಿಯ ದಾನಮ್ಮ ಜಳಕಿ, ಗುಬ್ಬಿಯ ವಸೀಮ್ ಅನ್ವರ್ ಅವರನ್ನು ನೇಮಿಸಲಾಗಿದೆ. 8, 9 ಮತ್ತು 10 ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣೆಗೆ ಚಿತ್ರದುರ್ಗದ ಡಾ| ಗಂಗಾಧರ್ ಪಿ.ಎಸ್., ತುಮಕೂರಿನ ಪ್ರೊ| ಬಿ. ಶೇಖರ್, ಬೆಳಗಾವಿಯ ಎ.ಬಿ. ವಗ್ಗರ, ಬೆಂಗಳೂರಿನ ಡಾ| ಶ್ರೀನಿವಾಸ ಯಡವಾಣಿ, ಮೊಹನ್ ಕುಮಾರಿ ಎಸ್., ಕನಕಪುರದ ತಬುಸ್ಸಮ್ ಫಾತಿಮ, ಶಿರಾದ ಪಿ.ಎಂ. ಕಾಗಿನಕರ್, ನೆಲಮಂಗಲದ ಶಾಹಿನಾ ಅಲ್ಲಾಪುರ ಅವರನ್ನು ನೇಮಕ ಮಾಡಲಾಗಿದೆ.