Advertisement
ಚಿಕ್ಕಬಳ್ಳಾಪುರ: ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ವಾಚಮಾಗೋಚರವಾಗಿ ಬೈದಾಡಿಕೊಂಡು ರಾತ್ರೋ ರಾತ್ರಿ ಅಧಿಕಾರಕ್ಕಾಗಿ ಒಂದಾಗಿ ಮೈತ್ರಿ ಸರ್ಕಾರ ರಚಿಸಿದವು. ಅದರಲ್ಲಿ ಒಬ್ಬ ಮುಖ್ಯಮಂತ್ರಿ, ಒಬ್ಬ ಉಪ ಮುಖ್ಯಮಂತ್ರಿ ಹಾಗೂ ಇನ್ನೊಬ್ಬ ಸೂಪರ್ ಮುಖ್ಯಮಂತ್ರಿ ಆಗಿದ್ದತಂಹ ಮಂತ್ರಿ ಮಂಡಲಕ್ಕೆ ಸಾಕ್ಷಿಯಾಗಿ ರಾಜ್ಯ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸಿದ್ದರಿಂದ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಯಿತು. ಸೂಪರ್ ಸಿಎಂ ಯಾರೆಂದು ನಿಮ್ಮಗೆಲ್ಲಾ ಗೊತ್ತಿರುವ ಸಂಗತಿ ಎಂದು ಪರೋಕ್ಷವಾಗಿ ಮಾಜಿ ಸಿಎಂ ಹೆಚ್‌ಡಿಕೆ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೆಸರು ಹೇಳದೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಾಗ್ಧಾಳಿ ನಡೆಸಿದರು.
Related Articles
Advertisement
ನಿಮಗೆ ಏನು ಬೇಕೋ ಕೇಳಿ ಸುಧಾಕರ್‌ರನ್ನು ಗೆಲ್ಲಿಸಿ – ಸಿಎಂ: ನಿಮಗೆ ಏನು ಬೇಕೋ ಕೇಳಿ ಎಲ್ಲವನ್ನು ಕೊಡಲು ಸಿದ್ಧನಿದ್ದೇನೆ. ಈಗಾಗಲೇ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೇನೆ. ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಹೊಸ ತಾಲೂಕಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುತ್ತೇನೆ. ಜಿಲ್ಲೆಗೆ ನೀರಾವರಿ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಮಂಚೇನಹಳ್ಳಿಯಲ್ಲಿ ಸುಧಾಕರ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಮೆಡಿಕಲ್ ಕಾಲೇಜು ಜಿಲ್ಲೆಗೆ ಬಂದಿದೆ. ಜತೆಗೆ 3-4 ಸಾವಿರ ಮಂದಿಗೆ ನಿವೇಶನ ಲಭಿಸಿದೆ. ಇದೆಲ್ಲಾವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರತ್ಯೇಕ ತಾಲೂಕು ಮಾಡಿಸಿದ್ದಕ್ಕೆ ಒಂದು ಮತ ಕೂಡ ಆಚೀಚೆ ಹೋಗದಂತೆ ಎಲ್ಲಾ ವರ್ಗದವರು ಒಟ್ಟಾಗಿ ಸುಧಾಕರ್‌ಗೆ ಮತ ಹಾಕಿ ಗೆಲ್ಲಿಸಬೇಕೆಂದು ಯಡಿಯೂರಪ್ಪ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಅಗತ್ಯವಿರುವ ಸೌಲಭ್ಯ ಕಲ್ಪಿಸಿ, ನೀರಾವರಿ ಸೌಲಭ್ಯ ಹೆಚ್ಚಿಸಿ, ಕೆರೆ ಕಟ್ಟೆ ತುಂಬಿಸಿ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಿಸುವ ಕೆಲಸ ಮಾಡಿಸುತ್ತೇನೆ. ಉಪ ಚುನಾವಣೆಯಲ್ಲಿ ಬಿಜೆಪಿ 15ಕ್ಕೆ 15 ಕ್ಷೇತ್ರ ಗೆಲ್ಲುವ ವಿಶ್ವಾಸ ನಮಗಿದೆ ಎಂದರು.
ಈ ಉಪ ಚುನಾವಣೆ ಬರಲಿಕ್ಕೆ ಡಾ.ಕೆ.ಸುಧಾಕರ್ ಮಾಡಿದ ತ್ಯಾಗದ ಫಲವಾಗಿ ಇಂದು ಯಡಿಯೂರಪ್ಪರನ್ನು ಮುಖ್ಯಮಂತ್ರಿಯಾಗಿ ನೋಡುವ ಸೌಭಾಗ್ಯ ಕಾಣುತ್ತಿದ್ದೇವೆ. ರಾಜ್ಯದ ರಕ್ಷಣೆಗಾಗಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಲು ನಾವು ಡಾ.ಕೆ.ಸುಧಾಕರ್‌ರ ರಾಜೀನಾಮೆಗೆ ಪ್ರೋತ್ಸಾಹ ಮಾಡಿದವರಲ್ಲಿ ನಾನು ಒಬ್ಬ. ಇದನ್ನು ಸಂತೋಷದಿಂದ ನಿಮ್ಮ ಮುಂದೆ ಒಪ್ಪಿಕೊಳ್ಳುತ್ತೇನೆ. -ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ