Advertisement

Elections; ಲೋಕ ಚುನಾವಣೆಗೆ ಸಜ್ಜು ರಾಜ್ಯ ಬಿಜೆಪಿ ತಂಡ ಸಿದ್ಧ

01:04 AM Dec 24, 2023 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕಗೊಂಡ ಒಂದೂಕಾಲು ತಿಂಗಳ ಅನಂತರ ಪಕ್ಷದ ಪದಾಧಿಕಾರಿಗಳ ಬದಲಾವಣೆಯೂ ಆಗಿದೆ. ಅದರಲ್ಲಿ ಹಿರಿಯ ರಿಗಿಂತ ಹೆಚ್ಚು ಯುವಕರಿಗೆ ಆದ್ಯತೆ ಕೊಡಲಾಗಿದೆ.

Advertisement

ಹೊಸದಿಲ್ಲಿಯಲ್ಲಿ ಬೀಡುಬಿಟ್ಟಿದ್ದ ವಿಜಯೇಂದ್ರ ಪದಾಧಿಕಾರಿಗಳ ಪಟ್ಟಿ ಯನ್ನು ಅಂತಿಮಗೊಳಿಸಿಕೊಂಡು ಬರು ವಲ್ಲಿ ಯಶಸ್ವಿಯಾಗಿದ್ದಾರೆ. ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿರುವಂತೆ ಪಕ್ಷ ಸಂಘಟನೆಯೆಡೆಗೆ ಗಮನ ಕೊಟ್ಟಿರುವ ಅವರು ತಮ್ಮ ತಂಡವನ್ನು ಬಲಪಡಿಸಿಕೊಂಡಿದ್ದಾರೆ.

ಒಟ್ಟು 32 ಮಂದಿಗೆ ಪಟ್ಟಿಯಲ್ಲಿ ಅವಕಾಶ ನೀಡಲಾಗಿದೆ. ಜತೆಗೆ ವಿವಿಧ ಮೋರ್ಚಾಗಳ ಅಧ್ಯಕ್ಷರೂ ಬದಲಾಗಿದ್ದಾರೆ. ಹೊಸ ಮುಖಗಳಿಗೆ ಮಣೆ ಹಾಕಿದ್ದು, ಹೊಸ ತಂಡದೊಂದಿಗೆ ಜೆಡಿಎಸ್‌ನೂ° ಜತೆಗಿಟ್ಟುಕೊಂಡು ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳನ್ನೇ ಗೆಲ್ಲಿಸಬೇಕು. ಆ ಮೂಲಕ ಪ್ರಧಾನಿ ಮೋದಿ ಕೈ ಬಲಪಡಿಸಬೇಕೆಂಬ ಕರೆಯನ್ನೂ ವಿಜಯೇಂದ್ರ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪದಾಧಿಕಾರಿಗಳ ಬದಲಾವಣೆಯಾಗಿದ್ದು ಹಿರಿಯರು, ಹಳಬರಿಗೆ ಬಹುಪಾಲು ಕೊಕ್‌ ನೀಡಲಾಗಿದೆ.

ಸೋತವರಿಗೆ ಅವಕಾಶ
ಹತ್ತು ಮಂದಿ ಉಪಾಧ್ಯಕ್ಷರ ಪೈಕಿ ಶಾಸಕರಾಗಿ ಗೆದ್ದಿರುವ ಭೈರತಿ ಬಸವರಾಜ್‌ ಬಿಟ್ಟು ಸೋತ ಬಹುತೇಕರಿಗೆ ಅವಕಾಶ ನೀಡಲಾಗಿದೆ. ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಮುರುಗೇಶ್‌ ನಿರಾಣಿ ಅವರನ್ನೂ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ.

ನಾಲ್ವರು ಪ್ರಧಾನ ಕಾರ್ಯದರ್ಶಿಗಳ ಪೈಕಿ ಮಾಜಿ ಸಚಿವ ಸುನಿಲ್‌ ಕುಮಾರ್‌ ಬಿಟ್ಟು ಉಳಿದಂತೆ ಪರಾಭವಗೊಂಡವರಿಗೆ ಸ್ಥಾನ ಸಿಕ್ಕಿದೆ. ಚುನಾವಣೆಗೆ ಸ್ಪರ್ಧಿಸದ ಕೆಲವರಿಗೂ ಅವಕಾಶ ದೊರೆತಿದ್ದು, ಹಿರಿಯ ರಾಜಕಾರಣಿಗಳ ಮಕ್ಕಳಿಗೂ ಸ್ಥಾನಮಾನ ಸಿಕ್ಕಿದೆ.

Advertisement

ರಾಜ್ಯ ಉಪಾಧ್ಯಕ್ಷರು
ಮುರುಗೇಶ್‌ ನಿರಾಣಿ – ಬಾಗಲಕೋಟೆ, ಭೈರತಿ ಬಸವರಾಜ್‌-ಬೆಂಗಳೂರು, ರಾಜುಗೌಡ ನಾಯಕ್‌-ಯಾದಗಿರಿ, ಎನ್‌. ಮಹೇಶ್‌, ಚಾಮರಾಜನಗರ, ಅನಿಲ್‌ ಬೆನಕೆ-ಬೆಳಗಾವಿ, ಹರತಾಳು ಹಾಲಪ್ಪ-ಶಿವಮೊಗ್ಗ, ರೂಪಾಲಿ ಸಂತೋಷ್‌ ನಾಯಕ್‌-ಉತ್ತರ ಕನ್ನಡ, ಡಾ| ಬಸವರಾಜ ಕೇಲಗಾರ – ಹಾವೇರಿ, ಮಾಳವಿಕಾ ಅವಿನಾಶ್‌-ಬೆಂಗಳೂರು, ಎಂ. ರಾಜೇಂದ್ರ – ಮೈಸೂರು.

ರಾಜ್ಯ ಪ್ರಧಾನ ಕಾರ್ಯದರ್ಶಿಗಳು
ವಿ. ಸುನಿಲ್‌ ಕುಮಾರ್‌- ಉಡುಪಿ, ಪಿ. ರಾಜೀವ್‌ – ಬೆಳಗಾವಿ, ಎನ್‌. ಎಸ್‌. ನಂದೀಶ್‌ ರೆಡ್ಡಿ – ಬೆಂಗಳೂರು, ಜೆ. ಪ್ರೀತಮ್‌ ಗೌಡ – ಹಾಸನ.

ರಾಜ್ಯ ಕಾರ್ಯದರ್ಶಿಗಳು
ಶೈಲೇಂದ್ರ ಬೆಲ್ದಾಳೆ- ಬೀದರ್‌, ಡಿ. ಎಸ್‌. ಅರುಣ್‌- ಶಿವಮೊಗ್ಗ, ಬಸವರಾಜ ಮತ್ತೀಮೋಡ್‌ – ಕಲಬುರ್ಗಿ, ಸಿ. ಮುನಿರಾಜು – ಚಿಕ್ಕಬಳ್ಳಾಪುರ, ವಿನಯ್‌ ಬಿದರೆ – ತುಮಕೂರು, ಕ್ಯಾಪ್ಟನ್‌ ಬ್ರಿಜೇಶ್‌ ಚೌಟ – ದಕ್ಷಿಣ ಕನ್ನಡ, ಶರಣು ತಳ್ಳಿಕೇರಿ – ಕೊಪ್ಪಳ, ಕು. ಲಲಿತಾ ಅನಾಪುರ – ಯಾದಗಿರಿ, ಡಾ. ಲಕ್ಷ್ಮೀ ಅಶ್ವಿ‌ನ್‌ ಗೌಡ – ಮಂಡ್ಯ, ಅಂಬಿಕಾ ಹುಲಿನಾಯ್ಕರ್‌ – ತುಮಕೂರು.

Advertisement

Udayavani is now on Telegram. Click here to join our channel and stay updated with the latest news.

Next