Advertisement

ಬಂಡವಾಳ ಹೂಡಿಕೆಗೆ ರಾಜ್ಯ ಬೆಸ್ಟ್‌: ಕೃಷ್ಣಭೈರೇಗೌಡ

11:42 AM Jan 10, 2017 | |

ಬೆಂಗಳೂರು: ಶಿಕ್ಷಣ, ತಂತ್ರಜ್ಞಾನ, ಕೃಷಿ, ಆಹಾರ ಸಂಸ್ಕರಣೆ, ಕೈಗಾರಿಕಾ ವಲಯದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳಿಗೆ ರಾಜ್ಯ ದಲ್ಲಿ ವಿಫ‌ುಲ ಅವಕಾಶಗಳಿದ್ದು, ಬಂಡವಾಳ ಹೂಡಿಕೆ ಮಾಡಲು ಕೈಗಾರಿಕೋದ್ಯಮಿಗಳು ಮುಂದಾಗಬೇಕು ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಮನವಿ ಮಾಡಿದ್ದಾರೆ. 

Advertisement

ನಗರದ ಹೊರವಲಯದಲ್ಲಿನ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಕಳೆದ ಮೂರು ದಿನಗಳ ಪ್ರವಾಸಿ ಭಾರತ್‌ ದಿವಸ ಸಮಾವೇಶದಲ್ಲಿ ಸೋಮವಾರ ನಡೆದ ಕರ್ನಾಟಕದಲ್ಲಿ ಹೂಡಿಕೆ ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಮಿಗಳಿಗೆ ಹೂಡಿಕೆ ಮಾಡಲು ಇರುವ ಸೌಲಭ್ಯ-ಸವಲತ್ತುಗಳ ಕುರಿತು ಉದ್ಯಮಿಗಳಿಗೆ ಮಾಹಿತಿ ನೀಡಿದರು. 

ಸಿಲಿಕಾನ್‌ ವ್ಯಾಲಿ ಎಂದೇ ವಿಶ್ವದಲ್ಲಿ ಖ್ಯಾತಿಯಾಗಿರುವ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹೂಡಿಕೆ ಮಾಡಲು ಐಟಿ-ಬಿಟಿ ಕ್ಷೇತ್ರ ಮಾತ್ರವಲ್ಲ ಕೃಷಿ, ಆಹಾರ ಸಂಸ್ಕರಣೆ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಸಾಕಾಷ್ಟು ಅವಕಾಶಗಳಿವೆ. ಮುಂದಿನ 2020 ರ ವೇಳೆಗೆ ದೇಶದ ಕೃಷಿ ಸಂಸ್ಕರಣೆ ವಿಭಾಗದಲ್ಲಿ 900 ಶತಕೋಟಿ ಡಾಲರ್‌ ವಹಿವಾಟು ನಡೆಸುವ ನಿರೀಕ್ಷೆಯಿದೆ. ಈ ದಿಸೆಯಲ್ಲಿ 30 ರಿಂದ 35 ಶತಕೋಟಿ ಡಾಲರ್‌ ಹೂಡಿಕೆಯ ಅಗತ್ಯವಿದೆ. ಇದೇ ರೀತಿ ಕರ್ನಾಟಕದಲ್ಲೂ ಹೂಡಿಕೆ ತೊಡಗಿಸಲು ಅವಕಾಶ ಇರುವ ಹಿನ್ನೆಲೆಯಲ್ಲಿ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. 

ರಾಜ್ಯದ ಜಿಡಿಪಿ ಶೇ.7: ವಾಣಿಜ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ಆಯುಕ್ತ ಗೌರವ್‌ ಗುಪ್ತಾ ಮಾತನಾಡಿ, ರಾಜ್ಯದ ಜಿಡಿಪಿ ಶೇ 7ರ ಬೆಳವಣಿಯಾಗುತ್ತಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳ ಜತೆ ನೇರ ಸಂಪರ್ಕ ಹೊಂದಿರುವ ಸಿಲಿಕಾನ್‌ ಸಿಟಿ ಬೆಂಗಳೂರು ಆಗಿದೆ. ವಿವಿಧ ವಲಯಗಳಿಗೆ ಪ್ರತ್ಯೇಕ ನೀತಿ ಜಾರಿಗೊಳಿಸಲಾಗಿದೆ. ಕರ್ನಾಟಕ ಐಟಿ ಬಿಟಿ ಅಷ್ಟೇ ಅಲ್ಲದೇ ಕಾಫಿ ಮತ್ತು ಕಬ್ಬು ಬೆಳೆಯ ರಾಜಧಾನಿಯೂ ಸಹ ಆಗಿದೆ ಎಂದರು.

ಬೆಂಗಳೂರಲ್ಲೇ ಅನಿಮೇಷನ್‌: ಮಾಹಿತಿ ತಂತ್ರಜಾnನ ಪ್ರಧಾನ ಕಾರ್ಯದರ್ಶಿ ಡಾ. ಮಂಜುಳಾ ಮಾತನಾಡಿ, ಅನಿಮೇಷನ್‌ ವಲಯದಲ್ಲಿ ಹೆಚ್ಚಿನ ಅವಕಾಶಗಳಿವೆ. ಬಾಲಿ ವುಡ್‌ ಸೇರಿ ಯಾವುದೇ ಚಲನಚಿತ್ರಗಳಿಗೆ ಬೆಂಗಳೂರಿನಲ್ಲಿ ಅನಿಮೇಷನ್‌ ಸ್ಪರ್ಶ ನೀಡಲಾಗುತ್ತದೆ. ಇಲ್ಲಿನ ತಂತ್ರಜಾnನ ಜಾಗತಿಕ ಹಂತಕ್ಕೆ ಬೆಳೆದಿದೆ. ರಾಜ್ಯದಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿದ್ದು, ಅದರಲ್ಲೂ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅವಕಾಶಗಳಿವೆ. ಈ ವಲಯದಲ್ಲಿ ಹೂಡಿಕೆಗೆ ಅವಕಾಶಗಳಿವೆ ಎಂದು ವಿವರಿಸಿದರು. 

Advertisement

ಬ್ರಿಟಿಷ್‌ ಪಾರ್ಲಿಮೆಂಟ್‌ ಸದಸ್ಯ ವೀರೇಂದ್ರ ಶರ್ಮಾ ಮಾತನಾಡಿದರು. ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್‌ ಮೀನಾ, ಟೆಕ್ನಿಕಲರ್‌ ಸಂಸ್ಥೆಯ ಅಧ್ಯಕ್ಷ ಬಿರೇನ್‌ ಘೋಷ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಎನ್‌ಆರ್‌ಐಗಳಿಗೆ ಆಹ್ವಾನ
ಭಾರತದ ಜತೆ ಕರ್ನಾಟಕವೂ ಅಭಿವೃ ದ್ಧಿಯ ಪಥದತ್ತ ನಡೆದಿದೆ. ದೇಶದ ಆರ್ಥಿಕ ಪ್ರಗತಿಗೆ ಗಣನೀಯ ಕೊಡುಗೆ ನೀಡುತ್ತಿದೆ. ಬಲಿಷ್ಠ ಕರ್ನಾಟಕ ನಿರ್ಮಾಣ 
ದಲ್ಲಿ ಅನಿವಾಸಿ ಭಾರತೀಯ ಸಮುದಾಯ ಜತೆಗೂಡಬೇಕು. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ವಿಫ‌ುಲ ಅವಕಾಶಗಳಿದ್ದು ಇದರ ಬಳಕೆ ಮಾಡಿಕೊಳ್ಳಬೇಕು. ರಾಜ್ಯಸರ್ಕಾ ರವು ಉದ್ಯಮ ಸ್ನೇಹಿ ನಿಯಮವಳಿ ಜತೆಗೆ ಎನ್‌ಆರ್‌ಐ ನೀತಿಯನ್ನು ಜಾರಿಗೊಳಿಸಿದೆ. ಬಂಡವಾಳ ಹೂಡಿಕೆಗಾಗಿ ಅನಿವಾಸಿ ಭಾರತೀಯ ಸಮುದಾಯಕ್ಕೆ ಕರ್ನಾಟಕವು ಮುಕ್ತ ಆಹ್ವಾನ ನೀಡುತ್ತದೆ. ಈ ಬಾರಿ ಪ್ರವಾಸಿ ಭಾರತೀಯ ದಿವಸ ಸಮಾವೇಶ ಜಗತ್ತಿನ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಲು ಕೇಂದ್ರ ಸರ್ಕಾರ ಅವಕಾಶ ಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. 20 ಸಾವಿರ ಪ್ರತಿನಿಧಿಗಳು ಈ ಸಮಾವೇಶಕ್ಕೆ ಸಾಕ್ಷಿಯಾಗಿರುವುದು ನನಗೆ ಅತೀವ ಸಂತಸ ತಂದಿದೆ. 
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಭಾರತ ವಿಶ್ವದಲ್ಲಿಯೇ ಟಾಪ್‌-5 ಗುರಿ: ಡಿ.ವಿ.ಸದಾನಂದಗೌಡ
ಬೆಂಗಳೂರು:
ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತ ದೇಶವನ್ನು ಟಾಪ್‌ 5ರ ಸಾಲಿನಲ್ಲಿ ನಿಲ್ಲಿಸುವುದರ ಜತೆಗೆ ಭಾರತೀಯ ಸಂಶೋಧನಾ ಸಂಸ್ಥೆಗಳನ್ನು ಹೊಸ ಕಲ್ಪನೆಯಡಿ ಅವಿಷ್ಕಾರ ಕೇಂದ್ರಗಳನ್ನಾಗಿ ಪರಿವರ್ತಿಸಿ ವಿಶ್ವದರ್ಜೆಗೇರಿಸುವ ಉದ್ದೇಶ ಹೊಂದಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ. 

ಪ್ರವಾಸಿ ಭಾರತ್‌ ದಿವಸ್‌ ಸಮಾವೇಶದಲ್ಲಿ “ಅನಿವಾಸಿ ಭಾರತೀಯ ತಜ್ಞರ ಸದ್ಬಳಕೆ ಮತ್ತು ಅವಿಷ್ಕಾರಕ್ಕೆ ಪ್ರೋತ್ಸಾಹ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಲವು ಅತ್ಯುತ್ತಮ ಭಾರತೀಯ ಸಂಶೋಧನಾ ಸಂಸ್ಥೆಗಳಿವೆ. ಅವುಗಳ ಕೊಡುಗೆ ದೇಶಕ್ಕೆ ಅಪಾರವಾಗಿದ್ದು, ಅವುಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಅತ್ಯಾಧುನಿಕ ಅವಿಷ್ಕಾರಗಳನ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು. ಮಲೇಷಿಯಾ ಪ್ರಧಾನಮಂತ್ರಿಯ ವಿಶೇಷ ವಕ್ತಾರ ಡಟೋಸೆರಿ ಉತ್ತಮಸಾಮಿ ವೆಲ್ಲು ಮಾತನಾಡಿದರು.

ಅನಿವಾಸಿ ಭಾರತೀಯರ ಶ್ರೇಯೋಭಿದ್ಧಿಗಾಗಿ ಶ್ರಮಿಸಬೇ ಕಿರುವ ಎನ್‌ಆರ್‌ಐ ಸಂಘಟನೆಗಳು ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವಿದೇಶ ದಲ್ಲಿ ನೆಲೆಸಿರುವ ಭಾರತೀಯರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಬಗೆಹರಿಸುವ ಕೆಲಸಗಳನ್ನು ಎನ್‌ಆರ್‌ಐ ಸಂಘಟನೆಗಳು ಮಾಡಬೇಕು. ಅದರೆ, ವಿದೇಶದಲ್ಲಿ ಎನ್‌ಆರ್‌ಐ ಸಂಘಟನೆಗಳು ಈ ನಿಟ್ಟಿನಲ್ಲಿ ಸಮರ್ಪಕವಾಗಿ ಕೆಲಸ ಮಾಡುವಲ್ಲಿ ವಿಫ‌ಲವಾಗಿವೆ. ಇದು ದೇಶದ ನಡು ವಿನ ಸಂಬಂಧ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.
-ವಿ.ಕೆ.ಸಿಂಗ್‌, ಕೇಂದ್ರ ವಿದೇಶಾಂಗ ಇಲಾಖೆ ರಾಜ್ಯ ಸಚಿವ  

ವಿದೇಶದಲ್ಲಿ ಹೆಚ್ಚುತ್ತಿದೆ ಭಾರತೀಯರ ಪುಂಡಾಟಿಕೆ!
ರಾಜ್ಯದಲ್ಲಿ ದಕ್ಷಿಣ ಆಫ್ರಿಕಾ ಸೇರಿದಂತೆ ಇತರೆ ರಾಷ್ಟ್ರಗಳ ಯುವಕ-ಯುವತಿಯರು ಗ್ಯಾಂಗ್‌ವೊಂದನ್ನು ಕಟ್ಟಿಕೊಂಡು ಪುಂಡಾಟ ನಡೆಸುವಂತೆ ಅಮೆರಿಕ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿಯೂ ಭಾರತೀಯ ಯುವಕ- ಯುವತಿಯರು ಗ್ಯಾಂಗ್‌ವೊಂದನ್ನು ಕಟ್ಟಿಕೊಂಡು ಹಾವಳಿ ನಡೆಸುತ್ತಿರುವುದು ಹೆಚ್ಚಾಗಿದೆ ಎಂದು ಹೇಳುವ ಮೂಲಕ ಶ್ರೀಧರ್‌ ಎಂಬುವವರು ಗಮನ ಸೆಳೆದರು.

ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಶ್ರೀಕಾಂತ್‌ ಅವರು ಮಾತನಾಡಿ, ಆರು ಜನರ ಪೈಕಿ ಒಬ್ಬರು ಬಡತನ ರೇಖೆಗಿಂತ ಕೆಳಗಿದ್ದಾರೆ. ಇವರ ಜೀವನೋಪಾಯಕ್ಕಾಗಿ ಅಪರಾಧ ಕೃತ್ಯ ಮತ್ತು ಗಾಂಜಾದಂತಹ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗುತ್ತಿದ್ದಾರೆ. ಇದರ ನಿಯಂತ್ರಣಕ್ಕಾಗಿ ಧರ್ಮಗುರುಗಳ ಉಪದೇಶಗಳನ್ನು ತಿಳಿಸಿ ಮನಪರಿವರ್ತನೆ ಮಾಡಬೇಕಿದೆ. ಧರ್ಮಗುರುಗಳನ್ನು ವಿದೇಶಗಳಿಗೆ ಕಳುಹಿಸಿ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next