Advertisement

ಗದ್ದಲದ ನಡುವೆಯೇ ಸಂವಿಧಾನದ ಚರ್ಚೆ ಆರಂಭ

11:45 PM Mar 03, 2020 | Lakshmi GovindaRaj |

ವಿಧಾನಸಭೆ: ದೊರೆಸ್ವಾಮಿ ಬಗ್ಗೆ ಯತ್ನಾಳ್‌ ನೀಡಿರುವ ಹೇಳಿಕೆ ಮೇಲಿನ ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸಿರುವ ಮಧ್ಯೆಯೇ ಸಂವಿಧಾನ ಕುರಿತಾದ ವಿಶೇಷ ಚರ್ಚೆಗೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ಕಲ್ಪಿಸಿದರು. ಈ ಮಧ್ಯೆ, ಸ್ಪೀಕರ್‌ ವಿರುದ್ಧವೇ ಕಾಂಗ್ರೆಸ್‌ ನಾಯಕರು ಘೋಷಣೆ ಕೂಗಿದರು.

Advertisement

ಕಾಂಗ್ರೆಸ್‌ ಶಾಸಕರ ಗದ್ದಲದ ನಡುವೆಯೇ ವಿಶೇಷ ಚರ್ಚೆಗೆ ಅವಕಾಶ ನೀಡಿದ ಅವರು, ಭಾರತ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಸಂವಿಧಾನವನ್ನು ಹೊಂದಿದೆ. ಎಲ್ಲ ಧರ್ಮ, ಜಾತಿ, ವಿಭಿನ್ನ ವರ್ಗಗಳು, ಭಾಷೆಗಳನ್ನು ಈ ದೇಶ ಒಳಗೊಂಡಿದೆ. ಬ್ರಿಟನ್‌ ಹಾಗೂ ಅಮೆರಿಕದ ಸಂವಿಧಾನಗಳು ಭಾರತದ ಸಂವಿಧಾನ ರಚನೆಗೆ ಪೂರಕವಾಗಿ ಅನೇಕ ವಿಷಯಗಳನ್ನು ಒದಗಿಸಿವೆ.

1922ರಲ್ಲಿ ಮಹಾತ್ಮಾ ಗಾಂಧೀಜಿಯವರು ಮೊದಲ ಬಾರಿಗೆ ಸಂವಿಧಾನ ರಚನಾ ಸಭೆಗೆ ಒತ್ತಾಯಿಸಿದ್ದರು. ನಂತರ, ಡಾ.ಬಾಬು ರಾಜೇಂದ್ರ ಪ್ರಸಾದ್‌ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಮಿತಿ ರಚಿಸಲಾಯಿತು. ಡಾ| ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನ ಕರಡು ಸಮಿತಿಗೆ ಅಧ್ಯಕ್ಷರಾಗಿದ್ದರು ಎಂದರು.

ಬಿ.ಎನ್‌.ರಾವ್‌ ಕರಡು: ಸಂವಿಧಾನ ರಚನೆ ಯಲ್ಲಿ ಕನ್ನಡಿಗರ ಪಾತ್ರವೂ ಮಹತ್ವದ್ದಾಗಿದ್ದು, ಮೂಲತ: ಮಂಗಳೂರಿನವರಾದ ಬಿ.ಎನ್‌.ರಾವ್‌ ಅವರು ಸಂವಿಧಾನ ರಚನಾ ಸಭೆಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಅವರು ರಚಿಸಿದ ಸಂವಿಧಾನದ ಮೂಲ ಕರಡು ಪ್ರತಿಯನ್ನು ಅಂಬೇಡ್ಕರ್‌ ಅವರ ನೇತೃತ್ವದಲ್ಲಿ ರಚಿಸಲಾದ ಸಂವಿಧಾನ ಕರಡು ಸಮಿತಿಗೆ ಸಲ್ಲಿಸಲಾಗಿತ್ತು.

ಈ ಮೂಲ ಕರಡನ್ನು ರಚನಾ ಸಭೆಯಲ್ಲಿ ಚರ್ಚಿಸಿ ಅಂಬೇಡ್ಕರ್‌ ಅವರ ಅಧ್ಯಕ್ಷತೆಯ ಸಮಿತಿಯಲ್ಲಿ ಚರ್ಚಿಸಿ ಸಂವಿಧಾನ ರಚಿಸಿದ್ದಾರೆ ಎಂದು ಹೇಳಿದರು. ಅಂಬೇಡ್ಕರ್‌ ಅವರ 125ನೇ ಜನ್ಮೋತ್ಸವದ ಅಂಗವಾಗಿ ನವೆಂಬರ್‌ 26ನ್ನು “ಸಂವಿಧಾನ ದಿನ’ ಎಂದು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ ಎಂದರು.

Advertisement

ಹಿಂದಿ ಅಧಿಕೃತ ಭಾಷೆ: ಭಾರತ ಸ್ವಾತಂತ್ರ್ಯ ಗೊಂಡ ನಂತರ ಬಹುಸಂಖ್ಯಾತ ಜನರು ಬಳಸುವ ಹಿಂದಿ ಭಾಷೆ, ಭಾರತೀಯ ಅಧಿಕೃತ ಭಾಷೆಯಾಗಿ ಅಂಗೀಕರಿಸಲ್ಪಟ್ಟಿತು. ಸಂವಿಧಾ ನದ 343ರಿಂದ 351ರ ವರೆಗಿನ ಅನುಚ್ಛೇದವು ಅಧಿಕೃತ ಭಾಷೆ, ಪ್ರಾದೇಶಿಕ ಭಾಷೆಗಳಿಗೆ ಸಂಬಂ ಧಿಸಿದ ಗೊತ್ತು ಗುರಿಗಳನ್ನು ವಿವರಿಸು ತ್ತದೆ. 3 ಸಾವಿರಕ್ಕಿಂತಲೂ ಹೆಚ್ಚು ಉಪ  ಭಾಷೆಗಳಿವೆ. ಇದು ದೇಶದ ಬಹುಭಾಷಾ ಸಾಂಸ್ಕೃತಿಕ ವೈವಿಧ್ಯತೆಯನ್ನು ತೋರಿಸುತ್ತದೆ ಎಂದರು.

ನಮ್ಮ ಸಂವಿಧಾನ ಸ್ವತಂತ್ರ ಮಾಧ್ಯಮ, ಪತ್ರಿಕಾವೃಂದ ಸರ್ಕಾರದ ನಾಲ್ಕನೇ ಅಂಗ ಎಂದು ಪ್ರಖ್ಯಾತವಾಗಿದೆ. ನಮ್ಮ ಗ್ರಾಮೀಣ ಸಂಸ್ಕೃತಿ ಅಪಾಯದ ಅಂಚಿನಲ್ಲಿದ್ದು, ಗ್ರಾಮ ಸಂಸ್ಕೃತಿ ಉಳಿಸಿಕೊಳ್ಳಬೇಕಾದ ತುರ್ತು ಕೆಲಸವಾಗಬೇಕಿದೆ ಎಂದರು.

ಸಂವಿಧಾನದ ಮೇಲಿನ ಚರ್ಚೆಯ ಸಂದರ್ಭದಲ್ಲಿಯೇ ಕಾಂಗ್ರೆಸ್‌ನವರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ರಾಜ್ಯದ ಜನ ನೋಡುತ್ತಿದ್ದಾರೆ. ನಿಮ್ಮ ನಡವಳಿಕೆಯ ಬಗ್ಗೆ ರಾಜ್ಯದ ಜನರು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತಾರೆ.
-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next