ಬೀದರ: ನೆನೆಗುದಿಗೆ ಬಿದ್ದಿರುವ ಬೀದರ ನಾಗರಿಕ ವಿಮಾನಯಾನ ಆರಂಭಕ್ಕೆ ಹೆಚ್ಚಿನ ಕಾಳಜಿ ವಹಿಸುವುದಾಗಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಭರವಸೆ ನೀಡಿದ್ದಾರೆ.
ನೂತನ ಸಚಿವರಾದ ನಂತರ ಪ್ರಥಮಬಾರಿಗೆ ಜಿಲ್ಲೆಗೆ ಆಗಮಿಸಿದ ಅವರು ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಅಲ್ಲದೆ, ಜಿಲ್ಲೆಯ ಬಿಜೆಪಿ ಸಂಸದ ಭಗವಂತ ಖೂಬಾ ಜತೆಗೂಡಿ ಸರ್ಕಾರದ ಗಮನ ಸೆಳೆದು ಕೂಡಲೇ ವಿಮಾನಯಾನ ಆರಂಭಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲೆಯ ಈ ಹಿಂದಿನ ಮೈತ್ರಿ ಸರ್ಕಾರದ ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಕೆಲಸಗಳು ಮಾಡಿಲ್ಲ. ಈ ಹಿಂದೆ ಘೊಷಣೆಯಾದ ವಿವಿಧ ಕಾಮಗಾರಿಗೆಳು ನೆನೆಗುದಿಗೆ ಬಿದ್ದಿದ್ದು, ಕೂಡಲೇ ಅವುಗಳ ಕಾಮಗಾರಿ ಪೂರ್ಣಗೊಳ್ಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ನಾನು ಗೋ ಗಳನ್ನು ತಾಯಿ ಹಾಗೂ ದೇವರೆಂದು ಭಾವಿಸುತ್ತೆನೆ. ಆ ಕಾರಣ ನನ್ನಗೆ ಪಶು ಇಲಾಖೆ ಬಂದಿದೆ ಎಂದ ಅವರು, ಪಶು ಇಲಾಖೆಯ ಮೂಲಕ ಅಭಿವೃದ್ಧಿ ಕಾರ್ಯಗಳು ಮಾಡುವ ಯೋಜನೆಗಳು ರೂಪಿಸಲಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ಅಧಿಕಾರಿಗಳು ನೆಪ ಹೇಳುವಂತೆ ಇಲ್ಲ. ಇದೀಗ ಎಲ್ಲಾ ಅಧಿಕಾರಿಗಳು ಚುರುಕುತನದಿಂದ ಕೆಲಸ ನಿರ್ವಹಿಸುವಂತೆ ಸೂಚಿಸಲಾಗುವುದು. ತಪ್ಪು ಮಾಡುವ ಅಧಿಕಾರಿಗಳ ವಿರುದ್ದ ಕ್ರಮ ಕೂಡ ಕೈಗೊಳ್ಳುತ್ತೆನೆ ಎಂದು ಎಚ್ಚರಿಸಿದರು.
ಬಾಯಿ ತಪ್ಪಿದ ಸಚಿವ: ರಾಜ್ಯದ ಬಿಜೆಪಿ ಸರ್ಕಾರ ಮುಂದಿನ ಮೂರುವರೆ ವರ್ಷ ಸರ್ಕಾರ ನಡೆಸಲ್ಲಿದೆ ಎಂದು ಹೇಳುವ ಭರದಲ್ಲಿ ಮುಂದಿನ ಮೂರುವರೆ ತಿಂಗಳು ಸರ್ಕಾರ ಯಾವುದೇ ಸಮಸ್ಯೆ ಇಲ್ಲದೆ ನಡೆಯಲ್ಲಿದೆ ಎಂದು ನೂತನ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಯಿತಪ್ಪಿನಿಂದ ಹೇಳಿದ ಮಾತು ಸರಿ ಪಡಿಸಿಕೊಂಡು ಮುಂದಿನ ಮೂರುವರೆ ವರ್ಷಗಳ ಕಾಲ ಸರ್ಕಾರ ಸುಭ್ರವಾಗಿರುತ್ತೆ ಎಂದು ಹೇಳುವ ಮೂಲಕ ಸರಿಪಡಿಸಿಕೊಂಡರು.