Advertisement

ಶೃಂಗೇರಿ ಪೀಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ 

06:25 AM Nov 05, 2018 | Team Udayavani |

ಶೃಂಗೇರಿ: ಶ್ರೀ ಶಾರದಾಪೀಠದ 36 ನೇ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಗಳ ಸನ್ಯಾಸ ಸ್ವೀಕಾರ ದಿನದ ಅಂಗವಾಗಿ ಭಾನುವಾರ ಶ್ರೀ ಮಠದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

Advertisement

ಬೆಳಗ್ಗೆ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳು ಗುರುನಿವಾಸದಲ್ಲಿ ಶ್ರೀ ಚಂದ್ರಮೌಳೇಶ್ವರಸ್ವಾಮಿ, ಶ್ರೀಚಕ್ರ ಹಾಗೂ ರತ್ನಗರ್ಭ ಗಣಪತಿಗೆ ಪೂಜೆ ಸಲ್ಲಿಸಿದರು. ಶ್ರೀ ಶಾರದಾ ದೇಗುಲಕ್ಕೆ ಆಗಮಿಸಿ ಪೀಠದಲ್ಲಿರುವ ಹೊರಪ್ರಾಕಾರದ ಶ್ರೀವಿದ್ಯಾಶಂಕರ, ಶ್ರೀ ಸುಬ್ರಮಣ್ಯ ಸ್ವಾಮೀಜಿ, ಶ್ರೀ ಸುರೇಶ್ವರಾಚಾರ್ಯ, ಶ್ರೀವಾಗೀಶ್ವರಿ ದೇವಸ್ಥಾನ ಶ್ರೀ ಶಂಕರಾಚಾರ್ಯ, ಶ್ರೀ ತೋರಣಗಣಪತಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಶ್ರೀ ಶಾರದಾ ಸನ್ನಿ ಧಿಯಲ್ಲಿ ದೇವೀ ಸಪ್ತಶತಿ ಪಾರಾಯಣ, ಶ್ರೀಸೂಕ್ತ, ಪುರುಷ ಸೂಕ್ತ ಪಾರಾಯಣ ಹಾಗೂ ಮಹಾಮಂಗಳಾರತಿ ನೆರವೇರಿಸಿದರು. ಇವರೊಂದಿಗೆ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಹಾಜರಿದ್ದರು. ಇದಕ್ಕೂ ಮೊದಲು ಭಾರತೀತೀರ್ಥರು ಗುರುಭವನದಲ್ಲಿ ಶ್ರೀ ಚಂದ್ರಶೇಖರ ಭಾರತೀ, ಶ್ರೀ ಅಭಿನವ ವಿದ್ಯಾತೀರ್ಥಸ್ವಾಮೀಜಿಗಳ ಅಧಿಷ್ಠಾನಮಂದಿರದಲ್ಲಿ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next