ನಾವು ಜಗತ್ತನ್ನು ಹೇಗೆ ಪರಿಭಾವಿಸುತ್ತೇವೆಯೋ ಹಾಗೆಯೇ ಜಗತ್ತು ನಮಗೆ ಕಾಣ ತೊಡಗುತ್ತದೆ ಎಂಬುದೊಂದು ಹಳೆಯ ಮಾತು. ಆದರೆ ಅದರೊಳಗಿನ ಸಣ್ತೀ ಮಾತ್ರ ಎಂದಿಗೂ ತಾಜಾವೇ. ಬಹುಶಃ ಇದನ್ನೇ ಇನ್ನೊಂದು ಅರ್ಥದಲ್ಲಿ ಹೇಳಿರುವಂಥದ್ದು, “ದೃಷ್ಟಿಯಂತೆ ಸೃಷ್ಟಿ’. ಎಷ್ಟೋ ಬಾರಿ ನಮಗೆ ದಿನಗಳು ಭಾರವೆನಿಸತೊಡಗುತ್ತವೆ. ಬೇಸರ ವೆಂಬುದು ದೊಡ್ಡ ಹೊರೆಯಾಗಿ ನಮ್ಮ ತಲೆ ಮೇಲೆ ಕುಳಿತಂತೆ ಭಾಸವಾಗುತ್ತದೆ. ಇರ ಬಹುದು, ದಿನದ ಯಾವುದೋ ಒಂದು ಕ್ಷಣದಲ್ಲಿ ಸಣ್ಣದೊಂದು ಕಹಿ ಘಟನೆ ಅಥವಾ ಅನುಭವ ಆಗಿರಬಹುದು. ಹಾಗಾದರೆ ಇಡೀ ಬದುಕು ಹಾಗೆ ಇದೆಯೇ ಎಂದು ಕೇಳಿದರೆ ಇಲ್ಲವೇ ಇಲ್ಲ ಎನ್ನುತ್ತಾರೆ ಮಹಾತ್ಮರು.
ಒಬ್ಬ ಮಾರುಕಟ್ಟೆಗೆ ಬಂದ. ಮನೆಯಲ್ಲಿ ಒಂದಿಷ್ಟು ತರ ಕಾರಿಗಳನ್ನು ತರಲು ಹೇಳಿ ದ್ದರು. ಕೈಯಲ್ಲಿ ಚೀಲವಿತ್ತು. ತರಕಾರಿ ಅಂಗಡಿ ಎದುರು ನಿಂತವ ಎಲ್ಲವನ್ನೂ ಸರಿ ಯಾಗಿ ದೃಷ್ಟಿಸತೊಡಗಿದ. ಟೊಮೆಟೋದಿಂದ ಹಿಡಿದು ಎಲ್ಲ ನಮೂ ನೆಯ ತರಕಾರಿಗಳಿದ್ದವು. ಕ್ಯಾರೆಟ್‌ನ ರಾಶಿ ನೋಡಿದ. ಒಂದೆರಡು ಕ್ಯಾರೆಟ್‌ಗಳಲ್ಲಿ ಸಣ್ಣ ಸಣ್ಣ ತೂತುಗಳು ಕಂಡು ಬಂದವು. ಬಹುಶಃ ಹಳೆಯದ್ದಾಗಿರಬೇಕು, ಅದಕ್ಕೇ ಕೊಳೆಯಲಾ ರಂಭಿಸಿದೆ. ಈಗಲೇ ಈ ಸ್ಥಿತಿ. ಮನೆಗೆ ತೆಗೆದುಕೊಂಡು ಹೋಗಿ ಎರಡು ದಿನ ಇಟ್ಟರೆ ಒಂದೂ ಪ್ರಯೋಜನಕ್ಕೆ ಬರಲಾರವು ಎಂದು ಕೊಂಡ. ಬೀನ್ಸ್‌ನ ಕಡೆ ತಿರುಗಿ, ತೊಟ್ಟು ಮುರಿದ. ಒಂದೇನೋ ಖುಷಿ ಕೊಟ್ಟಿತು (ಎಳಸಾಗಿತ್ತು). ಮತ್ತೂಂದು ಮರಿಯುವಾಗ ಸಾಧ್ಯವಾಗಲಿಲ್ಲ. ಬೀನ್ಸ್ ಬಲಿತಿದೆ ಎನ್ನಿಸಿತು. ಅರ್ಧ ಕೆ.ಜಿ.ಗಾಗಿ ಪ್ರತಿಯೊಂದೂ ಹೆಕ್ಕಲಾ ದೀತೇ? ಸಾಧ್ಯವೇ ಇಲ್ಲ ಎಂದು ಅದನ್ನೂ ಬಿಟ್ಟು ಟೊಮೆಟೋ ಕಡೆ ನೋಡಿದ. ಅಲ್ಲೂ ಹಾಗೆಯೇ. ಒಂದು ಬುಟ್ಟಿಯಲ್ಲಿ ಕೆಲವು ಟೊಮೆಟೋಗಳು ಹಾಳಾಗಿರುವಂತೆ ಅವ ನಿಗೆ ಭಾಸವಾಯಿತು. ಒಂದನ್ನು ಮುಟ್ಟಿದ. ನಿಜ, ಸ್ವಲ್ಪ ಪೆಟ್ಟಾದ ಪರಿಣಾಮ ಟೊಮೆಟೋ ಮೆದುವಾಗಿತ್ತು. ಬೇಸರವಾಯಿತು. ಇದು ಯಾವ ನಮೂನೆಯ ಒಳ್ಳೆಯ ಅಂಗಡಿ ಎಂದುಕೊಂಡು ಸಿಟ್ಟಿನಿಂದ, “ಏನಯ್ನಾ, ಕೊಳೆತದ್ದು, ಹಾಳಾದ ತರಕಾರಿಗಳೇ ನಿನ್ನಲ್ಲಿ ಇರುವುದೇ?’ ಎಂದು ಕೇಳಿದ. ಅದಕ್ಕೆ ನಗುತ್ತಾ ತರಕಾರಿಯವ, “ಇಲ್ಲ ಸ್ವಾಮಿಗಳೇ. ತರಕಾರಿಗಳು ಚೆನ್ನಾಗಿವೆಯಲ್ಲ?’ ಎಂದು ಎರಡು ಟೊಮೆಟೋ ತೆಗೆದು ತೋರಿಸಿದ.
ನಿನಗೆ ಮಾತ್ರ ಅದು ಸಿಗು ವುದು. ನಾನು ಸುಮಾರು ಹೊತ್ತಿನಿಂದ ಎಲ್ಲ ತರಕಾರಿ ಗಳನ್ನೂ ನೋಡಿದೆ. ಒಂದೋ ಬಲಿತಿದೆ, ಇಲ್ಲವೇ ಕೊಳೆತಿದೆ ಎಂದು ಬೇಸರ ದಿಂದ ಮಾರುತ್ತರ ಕೊಟ್ಟ ಆ ವ್ಯಕ್ತಿ. ವಾದ ಹೆಚ್ಚಾಗುತ್ತಿರುವಂತೆ ಕಂಡಾಗ ತರಕಾರಿಯವ, ಸ್ವಾಮೀ, ಒಂದು ಬುಟ್ಟಿಯಲ್ಲಿ ಎರಡು ಟೊಮೆಟೋ ಹಾಳಾಗಿ ರಬಹುದು. ಹಾಗೆಂದು ಬುಟ್ಟಿಯಲ್ಲಿರುವ ಎಲ್ಲ ಟೊಮೆಟೋ ಹಾಳಾಗಿದೆಯೇ? ಯಾಕೆ ಹಾಳಾದದ್ದನ್ನೇ ಹುಡುಕುತ್ತೀರಿ. ನಾನು ನಿಮಗೆ ಒಳ್ಳೆಯದನ್ನೇ ಕೊಡುವೆ ಎಂದು ಹೆಕ್ಕತೊಡಗಿದ. ಇವನಿಗೆ ಏನೂ ಹೇಳಲಾಗಲಿಲ್ಲ, ಸುಮ್ಮನಾದ.
ನಾವು ಹಲವು ಬಾರಿ ಹೀಗೆಯೇ ಮಾಡು ತ್ತೇವೆ ಆ ತರಕಾರಿ ಕೊಳ್ಳುವವನ ಹಾಗೆ. ಒಂದು ದಿನದ ಒಂದು ಕ್ಷಣ ಬೇಸರ ತಂದಿ ರಬಹುದು. ಹಾಗೆಂದು ಇಡೀ ದಿನ ಬೇಸರ ಮಾಡಿಕೊಂಡರೆ ಹೇಗೆ ಮತ್ತು ಅಗತ್ಯ ವಿದೆಯೇ? ಖಂಡಿತಾ ಇಲ್ಲ. ಒಂದು ವೇಳೆ ಒಂದು ದಿನವೇ ಹಾಳಾಯಿತೆಂದುಕೊಳ್ಳಿ, ಅದೂ ಸರಿ. ಹಾಗೆಂದು ಇಡೀ ಬದುಕು ಹಾಳಲ್ಲವಲ್ಲ.
ದುಃಖದ ಹಿಂದೆ ಸುಃಖ-ಸಂತಸ ಇದ್ದೇ ಇರುತ್ತದೆ. ಅದಕ್ಕೆ ಕಾಯಬೇಕಷ್ಟೇ. ಕಾಯು ತ್ತಲೇ ಬದುಕೋಣ, ಅದೂ ಸಂತಸವೇ.
(ಸಾರ ಸಂಗ್ರಹ)