Advertisement

ಸಿಗಂದೂರು ಸೇತುವೆ ಕಾರ್ಯಕ್ಕೆ ವೇಗ

04:22 PM Jun 05, 2018 | |

ಸಾಗರ: ಈ ಭಾಗದ ಸಿಗಂದೂರು ಸೇತುವೆ ನಿರ್ಮಾಣಕ್ಕೆ ಬಿಜೆಪಿ ಸಿದ್ಧªವಾಗಿರುವುದನ್ನು ಗಮನಿಸಿದ ಜನರು ಹರತಾಳು ಹಾಲಪ್ಪ ಅವರನ್ನು ಗೆಲ್ಲಿಸಿದ್ದಾರೆ. ಈಗಾಗಲೇ ಸಿಗಂದೂರು ಸೇತುವೆ ರಾಷ್ಟ್ರೀಯ ಹೆದ್ದಾರಿಯ ನಂಬರ್‌ ನೀಡಿಕೆ ಆಗಿದೆ. ಮುಂದಿನ ಕಾರ್ಯಗಳು ನಡೆಯುತ್ತಿದೆ. ಜನರ ನಂಬಿಕೆಯಂತೆ ಮುಂಬರುವ ದಿನಗಳಲ್ಲಿ ಹಾಲಪ್ಪ ಅವರನ್ನು ದೆಹಲಿಗೆ ಕರೆದುಕೊಂಡು ಹೋಗಿ ಸಿಗಂದೂರು ಸೇತುವೆಯ ಕಾರ್ಯಕ್ಕೆ ವೇಗವನ್ನು ಹೆಚ್ಚಿಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

Advertisement

ನಗರದ ಭದ್ರಕಾಳಿ ಸಭಾಂಗಣದಲ್ಲಿ ಸೋಮವಾರ ಬಿಜೆಪಿ ವತಿಯಿಂದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ
ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಗರ ಕ್ಷೇತ್ರದಲ್ಲಿ ಹರತಾಳು ಗೆಲ್ಲುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಹಾಗೆ ಸೊರಬದಲ್ಲಿ ಕುಮಾರ್‌ ಬಂಗಾರಪ್ಪ ಅವರೂ ಸಹ ಗೆಲ್ಲುತ್ತಾರೆ ಎನ್ನುವುದು ಇರಲಿಲ್ಲ. ಆದರೆ ಎರಡೂ ಕ್ಷೇತ್ರವನ್ನು ಬಿಜೆಪಿ ಕಾರ್ಯಕರ್ತರು ಗೆಲ್ಲಿಸಿದ್ದಾರೆ ಎಂದರು.
 
ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನನ್ನ ಪರವಾಗಿ ಕೆಲಸ ಮಾಡುತ್ತಿದ್ದ ಒಂಬತ್ತಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ಮಾಡಿದವರ ವಿರುದ್ಧ ಪೊಲೀಸ್‌ ಇಲಾಖೆ ಕ್ರಮ
ತೆಗೆದುಕೊಳ್ಳುವ ಬದಲು ಹಲ್ಲೆಗೆ ಒಳಗಾದ ನಮ್ಮ ಕಾರ್ಯಕರ್ತರ ಮೇಲೆ ರೌಡಿಶೀಟ್‌ ಓಪನ್‌ ಮಾಡಿದೆ. ನೀತಿ ಸಂಹಿತೆ ಇರುವುದರಿಂದ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಲು ಆಗುತ್ತಿಲ್ಲ. ಕ್ಷೇತ್ರದ ಜನರು ದುರಾಡಳಿತಕ್ಕೆ ತಕ್ಕ ತೀರ್ಪು ನೀಡಿದ್ದಾರೆ ಎಂದರು.

ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್‌ ಮಾತನಾಡಿ, ಕುಮಾರಸ್ವಾಮಿ ಮಹಾಭಾರತದ ಉತ್ತರ ಕುಮಾರ. ಕಡಿಮೆ ಅಂಕ ತೆಗೆದುಕೊಂಡರೂ ರ್‍ಯಾಂಕ್‌ ಗಳಿಸಿದ್ದಾರೆ. ಹಾವು ಮತ್ತು ಮುಂಗುಸಿ ಸಾಂದರ್ಭಿಕವಾಗಿ ಒಂದಾಗಿವೆ. ಈ ಮೈತ್ರಿ ಹೆಚ್ಚು ದಿನ ಉಳಿಯುವುದಿಲ್ಲ. ಕಾಂಗ್ರೆಸ್‌ನವರಿಗೆ ಬಿಜೆಪಿ ಮೇಲೆ ಇರುವ ಭಯದಿಂದ 78 ಸ್ಥಾನ ಗೆದ್ದು ಜೆಡಿಎಸ್‌ ಎದುರು ಮಂಡಿಯೂರಿ ಕುಳಿತು ಕೊಂಡಿರುವುದು ನಾಚಿಕೆಗೇಡಿನ
ಸಂಗತಿ ಎಂದು ಲೇವಡಿ ಮಾಡಿದರು. 

ಮಾಜಿ ಶಾಸಕ ಬಿ.ಸ್ವಾಮಿರಾವ್‌ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನಾನು ಕಾಗೋಡು ವಿರುದ್ಧ ಮಾಡಿದ ಯಾವುದೇ ಆರೋಪವೂ ಸುಳ್ಳಲ್ಲ. ಕಾಗೋಡು ತಿಮ್ಮಪ್ಪ ಅವಧಿಯಲ್ಲಿ ವಿವಿಧ ಸಮಿತಿಯಲ್ಲಿ ಸದಸ್ಯರಾಗಿದ್ದವರು
ಗಂಟು ಹೊಡೆದಿದ್ದಾರೆ. ಇದಕ್ಕೆ ಜನರು ತಕ್ಕಪಾಠ ಕಲಿಸಿದ್ದಾರೆ. ನಾನು ಶಾಸಕನಾಗಿದ್ದಾಗ ಶಿವಮೊಗ್ಗದಲ್ಲಿ 20 ಹರಿಜನ ಕುಟುಂಬಕ್ಕೆ ತಲಾ 2 ಎಕರೆ ಜಮೀನು ಮಂಜೂರು ಮಾಡಿದ್ದೇನೆ. 

ಅದನ್ನು ಕಾಗೋಡು ತಮ್ಮ ಉದ್ದೇಶಕ್ಕೆ ಬಳಸಿಕೊಂಡಿರುವುದು, ಶರಾವತಿ ಮುಳುಗಡೆ ಸಂತ್ರಸ್ತರಿಗೆ ನೀಡಿದ ಜಮೀನನ್ನು ತಮ್ಮ ಉದ್ದೇಶಕ್ಕೆ ಬಳಸಿಕೊಂಡಿರುವುದು ಸತ್ಯವಾದ ಸಂಗತಿ. ಜನರಿಗೆ ಈ ಸತ್ಯವನ್ನು ಹೇಳಿದ್ದರಿಂದಲೇ ಜನರು ಕಾಗೋಡು ತಿಮ್ಮಪ್ಪಗೆ ಸರಿಯಾದ ಪಾಠ ಕಲಿಸಿದ್ದಾರೆ ಎಂದರು.

Advertisement

ಸೊರಬ ಕ್ಷೇತ್ರ ಶಾಸಕ ಕುಮಾರ ಬಂಗಾರಪ್ಪ, ಜಿಲ್ಲಾಧ್ಯಕ್ಷ ಎಸ್‌.ರುದ್ರೇಗೌಡ, ಸಂಘ ಪರಿವಾರದ ಪ್ರಮುಖರಾದ
ಅ.ಪು.ನಾರಾಯಣಪ್ಪ, ಮಾಜಿ ಸಂಸದ ಬಿ.ವೈ. ರಾಘವೇಂದ್ರ, ಟಿ.ಡಿ.ಮೇಘರಾಜ್‌, ಬಿ.ಕೆ. ಶ್ರೀನಾಥ್‌ ಭದ್ರಾವತಿ, ಚೇತನರಾಜ್‌ ಕಣ್ಣೂರು, ಶರಾವತಿ ಸಿ.ರಾವ್‌, ರಾಜಶೇಖರ ಗಾಳಿಪುರ, ಪಾಣಿರಾಜಪ್ಪ, ಸಂತೋಷ್‌ ಶೇಟ್‌, ಎಸ್‌.
ಎಲ್‌.ಮಂಜುನಾಥ್‌, ನಾಗರತ್ನ, ದೇವೇಂದ್ರಪ್ಪ, ರಘುಪತಿ ಭಟ್‌ ಇನ್ನಿತರರಿದ್ದರು. ನಂದಿನಿ ಬಸವರಾಜ್‌ ಪ್ರಾರ್ಥಿಸಿದರು. ಆರ್‌.ಶ್ರೀನಿವಾಸ್‌ ಸ್ವಾಗತಿಸಿದರು. ಪ್ರಸನ್ನ ಕೆರೆಕೈ ಪ್ರಾಸ್ತಾವಿಕ ಮಾತನಾಡಿದರು. ವ.ಶಂ.ರಾಮಚಂದ್ರ ಭಟ್‌ ವಂದಿಸಿದರು. ಕೆ.ಆರ್‌.ಗಣೇಶಪ್ರಸಾದ್‌ ನಿರೂಪಿಸಿದರು.

“ಮೈತ್ರಿ’ ಜನತಂತ್ರ ವ್ಯವಸ್ಥೆಗೆ ಅಪಮಾನ
ಶಿವಮೊಗ್ಗ:
ಅಲ್ಪ ಮತಗಳಿಸಿದ ಎರಡು ಪಕ್ಷಗಳು ಸೇರಿ ಸರ್ಕಾರ ರಚಿಸುವ ಮೂಲಕ ಜನತಂತ್ರ ವ್ಯವಸ್ಥೆಗೆ ಅಪಮಾನ ಮಾಡಲಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಗೌರವವಿದ್ದಲ್ಲಿ ಸರ್ಕಾರವನ್ನು ವಜಾಗೊಳಿಸಿ
ಪುನಃ ಜನರ ಮುಂದೆ ಹೋಗೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸವಾಲು ಹಾಕಿದರು.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅತಿ ಹೆಚ್ಚು ಸ್ಥಾನ ಗಳಿಸಿದ ಬಳಿಕವೂ ಸರ್ಕರ ರಚನೆ ಮಾಡಲು ಬಿಜೆಪಿ ಸಾಧ್ಯವಾಲಿಲ್ಲ. ಬಿಜೆಪಿಗೆ ಯಾವ ರೀತಿ ಅನ್ಯಾಯವಾಗಿದೆ ಎಂದು ಜನರಿಗೆ ಗೊತ್ತಿದೆ. ಹೀಗಾಗಿ ಪುನಃ ಜನರ ಎದುರು ಹೋಗೋಣ. ಸರ್ಕಾರವನ್ನು ವಿಸರ್ಜಿಸಿ ಎಂದು ಹೇಳಿದರು.
 
ರಾಜ್ಯದಲ್ಲಿ ಅಪ್ಪ ಮಕ್ಕಳು ಸೇರಿಕೊಂಡು ರೈತರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ ನಾಡಿನ ಜನರಿಗೆ ಅಪಮಾನ ಮಾಡುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ ಚುನಾವಣೆ ಎದುರಿಸಿದ್ದ ಕುಮಾರಸ್ವಾಮಿಯವರು ಇದೀಗ ಮಾತು ತಪ್ಪುತ್ತಿದ್ದಾರೆ. ಧರ್ಮಸ್ಥಳಕ್ಕೆ ಹೋಗಿ ಸಣ್ಣ ಹಾಗೂ ಅತಿಸಣ್ಣ ರೈತರ ಸಾಲ ಮನ್ನಾ ಮಾಡುತ್ತೇನೆ ಎನ್ನುತ್ತಿದ್ದಾರೆ. ಹಿಂದೆ ರಾಜ್ಯದ ಜನ ಮುಲಾಜಿನಲ್ಲಿದ್ದೇನೆ ಎಂದು ಹೇಳುತ್ತಿದ್ದ ಅವರು ಇದೀಗ ಕಾಂಗ್ರೆಸ್‌ ಮುಲಾಜಿನಲ್ಲಿದ್ದೇನೆ ಎನ್ನುವ ಮೂಲಕ ಮತದಾರರಿಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಎಚ್‌.ಡಿ.ಕುಮಾರಸ್ವಾಮಿ ತಾನು ಅದೃಷ್ಟದ ಮುಖ್ಯಮಂತ್ರಿ ಎಂದಿದ್ದರು. ಇದೀಗ ರಾಜ್ಯದ ಜನತೆ ಆಯ್ಕೆ
ಮಾಡಿದ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಮತದಾರರನ್ನು ಅಪಮಾನ ಮಾಡಿದ್ದಾರೆ. ನಾಡಿನ ಜನರಿಗೆ ಮೋಸ ಮಾಡಿದ ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿಯವರು ಈ ಕೂಡಲೇ ರಾಜ್ಯದ ಜನರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.

ಸಣ್ಣ ರೈತರ ಸಾಲವನ್ನು ಈ ಹಿಂದಿನ ಸರ್ಕಾರವೇ ಮನ್ನಾ ಮಾಡಿದೆ. ಹೊಸದಾಗಿ ನಿಮ್ಮ ಯೋಜನೆ ಏನು ಎಂಬುದನ್ನು ಜನರಿಗೆ ಹೇಳಬೇಕು. ಈಗ ಹೇಳುತ್ತಿರುವ ಹೊಸ ಯೋಜನೆಯಿಂದ ನೂರಕ್ಕೆ ಐದು ಜನರಿಗೂ ಉಪಯೋಗವಾಗುವುದಿಲ್ಲ. ನಾನು ಇಪ್ಪತ್ತು ದಿನ ಕಾಯುತ್ತೇನೆ. ಯೋಜನೆ ಹೇಗೆ ಅನುಷ್ಠಾನಗೊಳಿಸುತ್ತಾರೆ ಎಂಬುದನ್ನು ನೋಡಿ ಬಳಿಕ ಹೋರಾಟದ ರೂಪುರೇಷೆ ರೂಪಿಸುತ್ತೇನೆ ಎಂದರು. ಪದವೀಧರ ಶಿಕ್ಷಕರ ಕ್ಷೇತ್ರದ
ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರಚಾರ ನಡೆಸಿದ್ದೇನೆ. ಆರು ವಿಧಾನಪರಿಷತ್‌ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಮಲ್‌ ಹಾಸನ್‌ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು ಯಾರು ಯಾರನ್ನೂ ಬೇಕಾದರೂ ಭೇಟಿ ಮಾಡಬಹುದು ಅದು ಅವರಿಗೆ ಬಿಟ್ಟಿದ್ದು ಎಂದರು.

 ನೀರು ಬಿಡುಗಡೆ: ನಮ್ಮಲ್ಲಿ ಚನ್ನಾಗಿ ಮಳೆಯಾಗುತ್ತಿದೆ. ಕೆಆರ್‌ಎಸ್‌ ಜಲಾಶಯದ ಮಟ್ಟ ನೋಡಿಕೊಂಡು ಟ್ರಿಬ್ಯುನಲ್‌ ತೀರ್ಮಾನದಂತೆ ನೀರು ಬಿಡಲು ತೊಂದರೆಯಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next