Advertisement

ಕಾಯಕಲ್ಪಗೊಳ್ಳದ ಕಂಡ್ಲೂರು ರುದ್ರಭೂಮಿ

08:24 PM Sep 22, 2019 | Sriram |

ಬಸ್ರೂರು: ಕಂಡ್ಲೂರಿನ ಉರ್ದು ಶಾಲೆ ಸಮೀಪ ಒಂದು ರುದ್ರಭೂಮಿ ಇದ್ದು ಆ ಸ್ಥಳ ಸರಿಯಾಗಿ ಇಲ್ಲದಿರುವುದರಿಂದ ಈ ರುದ್ರಭೂಮಿ ಸುಮಾರು 30 ವರ್ಷಗಳ ಹಿಂದೆ ಗುರುವಿನ ಕಲ್ಲು ದಾರಿ ಸಮೀಪ ಹೆಂಚಿನ ಕಾರ್ಖಾನೆ ಹತ್ತಿರದ ಜಾಗಕ್ಕೆ ಸ್ಥಳಾಂತರವಾಯಿತು.

Advertisement

ಇದು ಮೊದಲು ಕೇವಲ ಮೊಗವೀರ ಕಳುವಿನ ಕುಟುಂಬಕ್ಕೆ ಸೀಮಿತವಾಗಿತ್ತು.ಇದಕ್ಕೆ ಒಂದು ಸಮಿತಿಯೂ ನೇಮಕವಾಗಿತ್ತು. ಆದರೆ ಕಾಲಕ್ರಮೇಣ ಕಾರ್ಖಾನೆ ಸಮೀಪದ ಈ ರುದ್ರಭೂಮಿಯಲ್ಲಿ ಬೇರೆ ಬೇರೆ ಜಾತಿಯವರು ಸೇರಿ ಹಿಂದೂ ರುದ್ರಭೂಮಿಯಾಗಿ ಪರಿವರ್ತನೆಯಾಯಿತು.

ದುರಂತವೆಂದರೆ ಕಳೆದ 30 ವರ್ಷಗಳಿಂದ ಇಲ್ಲಿದ್ದ ಹಿಂದೂ ರುದ್ರಭೂಮಿಯ ಜಾಗದ ಕಾಗದ ಪತ್ರದ ದಾಖಲೆ ವಿಲೇವಾರಿಯಾಗಲಿಲ್ಲ! ಇದರ ಅಭಿವೃದ್ಧಿಗಾಗಿ ಸಮಿತಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಧ್ಯಕ್ಷರು, ಕಾರ್ಯದರ್ಶಿಗಳ ನೇಮಕವೂ ಆಗಿಲ್ಲ.

ಏನೂ ಇಲ್ಲದ ಶ್ಮಶಾನ
ಈಗ ಇರುವ ಈ ಹಿಂದೂ ರುದ್ರಭೂಮಿಯಲ್ಲಿ ಶವವನ್ನು ಇರಿಸುವ ಕಬ್ಬಿಣದ ಪೆಟ್ಟಿಗೆ ತುಂಡಾಗಿದೆ. ಕಂಬಗಳಿದ್ದರೂ ಮಾಡು ಬೀಳುವ ಸ್ಥಿತಿಯಲ್ಲಿವೆ. ಶವವನ್ನು ದಹಿಸಲು ಕಟ್ಟಿಗೆಯೂ ಇಲ್ಲಿಲ್ಲ. ಈ ರುದ್ರಭೂಮಿಯನ್ನು ನೋಡಿಕೊಳ್ಳಲು ಯಾರೊಬ್ಬರ ನೇಮಕವೂ ಆಗಿಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ ಕಂಡ್ಲೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಹಿಂದೂ ರುದ್ರಭೂಮಿಯ ಅವ್ಯವಸ್ಥೆಯನ್ನು ಯಾರೂ ಕೇಳುವವರಿಲ್ಲವಾಗಿದೆ!

ಇನ್ನಷ್ಟು ಅಭಿವೃದ್ಧಿ ಕಾರ್ಯ
ಕೆಲವು ವರ್ಷಗಳ ಹಿಂದೆ ಕಂಡ್ಲೂರಿನ ರುದ್ರಭೂಮಿಗೆ ಗ್ರಾ.ಪಂ. ಅನುದಾನದಲ್ಲಿ ಮಾಡನ್ನು ನಿರ್ಮಿಸಲಾಗಿದೆ. ಬೈಂದೂರಿನ ಮಾಜಿ ಶಾಸಕರು ಈ ಬಗ್ಗೆ ಮೂರು ಲಕ್ಷ ರೂ. ಅನುದಾನ ನೀಡಲಾಗುವುದು ಎಂದಿದ್ದಾರೆ. ಆದರೆ ಕಂಡ್ಲೂರು ರುದ್ರಭೂಮಿಯ ಜಾಗದ ದಾಖಲೆ ಇನ್ನೂ ಸರಿಯಾಗಿಲ್ಲ. ಸಮಿತಿಯವರು ಆ ಕೆಲಸ ಮಾಡಬಹುದು. ಗ್ರಾ.ಪಂ.ನ ಮುಂದಿನ ಕ್ರಿಯಾಯೋಜನೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು.
-ಗೌರಿ ಆರ್‌. ಶ್ರೀಯಾನ್‌, ಅಧ್ಯಕ್ಷೆ, ಗ್ರಾ.ಪಂ. ಕಾವ್ರಾಡಿ.

Advertisement

ಶೀಘ್ರ ಸರಿಪಡಿಸಿ
ಶವ ಇರಿಸುವ ಕಬ್ಬಿಣದ ಪೆಟ್ಟಿಗೆ ತುಂಡಾಗಿ ಮಾಡು ಅವೈಜ್ಞಾನಿಕವಾಗಿದೆ. ಸುತ್ತಲ ತಡೆಗೋಡೆ ಬಿದ್ದಿದೆ. ಇದನ್ನು ಸರಿಪಡಿಸುವವರು ಯಾರು?
-ಚಂದ್ರ ಮೊಗವೀರ, ಕಂಡ್ಲೂರು

-ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next