Advertisement

ಅಂಡಮಾನ್‌ನಲ್ಲಿ ಇನ್ನು ಚುಕುಬುಕು ಸದ್ದು

03:45 AM Feb 07, 2017 | |

ಫೋರ್ಟ್‌ಬ್ಲೇರ್‌:  ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿ ಇಲ್ಲಿಯ ತನಕ ಬಸ್ಸು, ಹಡಗಿನ ಸಂಚಾರದ ಸದ್ದಷ್ಟೇ ಕಿವಿಗೆ ಬೀಳುತ್ತಿತ್ತು. ಇನ್ನು ಅಲ್ಲಿ ರೈಲ್ವೆ ಸದ್ದೂ ಮೊಳಗಲಿದೆ. ರೈಲ್ವೆ ಇಲಾಖೆ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದ ನಡುವೆ 240 ಕಿ.ಮೀ. ಉದ್ದದ ಬ್ರಾಡ್‌ ಗೇಜ್‌ ನಿರ್ಮಿಧಿಸಲು ಯೋಜನೆ ರೂಪಿಸಿದ್ದು, ಶೀಘ್ರದಲ್ಲೇ ಅನುಮತಿ ಸಿಗುವ ಸಾಧ್ಯತೆ ಇದೆ.

Advertisement

ಫೋರ್ಟ್‌ಬ್ಲೇರ್‌ ಎಕ್ಸ್‌ಪ್ರೆಸ್‌: ಫೋರ್ಟ್‌ ಬ್ಲೇರ್‌ ಮತ್ತು ದಿಗ್ಲಿಪುರ್‌ ನಡುವೆ ರೈಲು ಸಂಚಾರಕ್ಕೆ ಈ ಅನುಮೋದನೆ ಸಿಕ್ಕಿದೆ. ಪ್ರಸ್ತುತ ಉತ್ತರ ಅಂಡಮಾನ್‌ನಲ್ಲಿ 350 ಕಿ.ಮೀ. ವರೆಗೆ ಬಸ್ಸುಗಳು ಓಡಾಡುತ್ತಿದ್ದು, ಇದಕ್ಕೆ 14 ಗಂಟೆ ಬೇಕಾಗುತ್ತದೆ.  ಇದೇ ದೂರವನ್ನು ಹಡಗಿನಲ್ಲಿ ಕ್ರಮಿಸುವುದಾದರೆ 24 ಗಂಟೆಗಳು ಬೇಕಾಗುತ್ತವೆ. ಈ ದ್ವೀಪದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಿಮಾನ ವ್ಯವಸ್ಥೆಯೂ ಇಲ್ಲ. 

ಫೋರ್ಟ್‌ಬ್ಲೇರ್‌ ಮತ್ತು ದಿಗ್ಲಿಪುರ್‌ ನಡುವೆ ರೈಲ್ವೇ ಸಂಪರ್ಕ ಏರ್ಪಡುವುದರಿಂದ ಒಟ್ಟು ಪ್ರಯಾಣದ ಅವಧಿ ಕೇವಲ 3 ಗಂಟೆ ಸಾಕು ಎಂದು ಅಂದಾಜಿಸಲಾಗಿದೆ.

ಪ್ರವಾಸೋದ್ಯಮವನ್ನು ಕಣ್ಮುಂದೆ ಇಟ್ಟುಕೊಂಡೇ ರೈಲ್ವೇ ಇಲಾಖೆ ಈ ಯೋಜನೆಗೆ ಕೈಹಾಕಿದೆ. ರೈಲ್ವೇ ಇಲಾಖೆಯ ಜತೆಗೆ ಅಂಡಮಾನ್‌ ಮತ್ತು ನಿಕೋಬಾರ್‌ ಕೇಂದ್ರಾಡಳಿತ ಪ್ರದೇಶ ಸರಕಾರ ಶೇ.50 ರಷ್ಟು ಬಂಡವಾಳ ಹೂಡಲಿದೆ.

ಪ್ರವಾಸಿಗರು ಹೆಚ್ಚಳ?:  “ರೈಲ್ವೇ ಯೋಜನೆ ಸಾಕಾರಗೊಂಡರೆ ಈಗ ಬರುತ್ತಿರುವ ಪ್ರವಾಸಿಗರ ಸಂಖ್ಯೆ (4.5 ಲಕ್ಷ) ಹೆಚ್ಚಾಗಿ, ವರ್ಷಕ್ಕೆ 6 ಲಕ್ಷ ಮಂದಿ ಭೇಟಿ ನೀಡುವ ಸಾಧ್ಯತೆಯಿದೆ. ರೈಲ್ವೇ ಇಲಾಖೆಗೆ ಈ ಯೋಜನೆಯಿಂದ ಆಗುವ ಲಾಭವನ್ನೂ ಹೇಳಿದ್ದೇವೆ. ಮಿಗಿಲಾಗಿ ಭೌಗೋಳಿಕವಾಗಿ ಆಗುವ ನಷ್ಟದ ವಿವರವನ್ನೂ ಕೊಟ್ಟಿದ್ದೇವೆ’ ಎಂದು ದ್ವೀಪದ ಲೆಫ್ಟಿನೆಂಟ್‌ ಗವರ್ನರ್‌ ಜಗದೀಶ್‌ ಮುಖೀ ಹೇಳಿದ್ದಾರೆ. 2014ರಲ್ಲೇ ರೈಲ್ವೆ ಇಲಾಖೆ ಈ 
ಯೋಜನೆಗೆ ಮುಂದಾಗಿತ್ತಾದರೂ, ಕೇಂದ್ರ ಸರಕಾರ ಮತ್ತು ಕೇಂದ್ರಾಡಳಿತ ಪ್ರದೇಶದ ಸರಕಾರದ ನಡುವೆ ಮಾತುಕತೆ ಯಶಸ್ವಿಯಾಗಿರಲಿಲ್ಲ.

Advertisement

ಗೃಹ ಇಲಾಖೆ ಫ‌ುಲ್‌ ಖುಷ್‌ 
ರೈಲ್ವೇ ಇಲಾಖೆಯ ಈ ನಿರ್ಧಾರವನ್ನು ಕೇಂದ್ರ ಗೃಹ ಇಲಾಖೆ ಸ್ವಾಗತಿಸಿದೆ. “ಅಂಡಮಾನ್‌ ಭಾರತದ ಗಡಿ 
ಭಾಗದಲ್ಲಿ ಬರುವುದರಿಂದ ಇಲ್ಲಿನ ಸಾರಿಗೆ ಸೇವೆ ಸೇನೆಗೂ ಅನುಕೂಲವೇ ಆಗಲಿದೆ’ ಎಂದಿದೆ. ಕಾಶ್ಮೀರವನ್ನು ಲೇಹ್‌- ಲಡಾಕ್‌ ರಸ್ತೆ ಬೆಸೆದಂತೆ ಇದು ಕೂಡ ಮಹತ್ವದ ಯೋಜನೆ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next