Advertisement

“ಕುಷ್ಕ’ಚಿತ್ರದ “ಸಿಂಪಲ್‌ ಸಲುಗೆ…’ಹಾಡು ಬಂತು

01:15 PM Jun 11, 2019 | Lakshmi GovindaRaj |

ಫ‌ುಡ್‌ ಮೆನುವಿನಲ್ಲಿ “ಕುಷ್ಕ’ ಎಂಬ ಹೆಸರನ್ನು ಕೇಳಿರುತ್ತೀರಿ. ಈಗ “ಕುಷ್ಕ’ ಎನ್ನುವ ಹೆಸರಿನಲ್ಲೇ ಚಿತ್ರವೊಂದು ತೆರೆಗೆ ಬರುತ್ತಿದೆ. ಕಿರುತೆರೆಯ “ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಖ್ಯಾತಿಯ ನಟ ಚಂದು ಗೌಡ ಮತ್ತು ಇತ್ತೀಚೆಗಷ್ಟೇ ತೆರೆಕಂಡ ಯಶಸ್ವಿ ಚಿತ್ರ “ಕೆಮಿಸ್ಟ್ರಿ ಆಫ್ ಕರಿಯಪ್ಪ’ದ ಖ್ಯಾತಿಯ ಸಂಜನಾ ಆನಂದ್‌ ನಾಯಕ – ನಾಯಕಿಯಾಗಿ “ಕುಷ್ಕ’ ಚಿತ್ರದ ಮೂಲಕ ಆಡಿಯನ್ಸ್‌ ಮುಂದೆ ಬರುತ್ತಿದ್ದಾರೆ.

Advertisement

ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ನಿರತವಾಗಿರುವ “ಕುಷ್ಕ’ ಚಿತ್ರತಂಡ ಇತ್ತೀಚೆಗೆ ಚಿತ್ರದ “ಸಿಂಪಲ್‌ ಸಲುಗೆ…’ ಎನ್ನುವ ಹಾಡಿನ ಲಿರಿಕಲ್‌ ವೀಡಿಯೊವನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಹೀರೋ-ಹೀರೋಯಿನ್‌ ಮಧ್ಯೆ ಒಂದು ಸಿಂಪಲ್‌ ಸಲುಗೆ ಮೂಡಿದಾಗ ಬರುವಂತ ಡ್ನೂಯೆಟ್‌ ಹಾಡು ಇದಾಗಿದ್ದು, ಅಭಿಲಾಷ್‌ ಗುಪ್ತ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ವಿಜಯ್‌ ಪ್ರಕಾಶ್‌ ಹಾಗೂ ಸಾನ್ವಿ ಶೆಟ್ಟಿ ಧ್ವನಿಯಾಗಿದ್ದಾರೆ.

ರಾಮಕೃಷ್ಣ ರಾಣಗಟ್ಟಿ ಈ ಹಾಡಿಗೆ ಸಾಹಿತ್ಯವನ್ನು ಒದಗಿಸಿದ್ದಾರೆ. ಈ ಹಿಂದೆ “ಹೀಗೊಂದು ದಿನ’ ಚಿತ್ರವನ್ನು ನಿರ್ದೇಶಿಸಿದ್ದ ವಿಕ್ರಮ್‌ ಯೋಗಾನಂದ “ಕುಷ್ಕ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಇನ್ನು ಗುರು ಪ್ರಸಾದ್‌, ಶೋಭರಾಜ್‌, ಕೈಲಾಶ್‌ ಪಾಲ್‌ ಮೊದಲಾದವರು “ಕುಷ್ಕ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಚಿತ್ರವನ್ನು ಎರಡು-ಮೂರು ತಿಂಗಳಲ್ಲಿ ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next