Advertisement

ಕಿನಾರೆಯ “ಕೋಳಿ’ಹಾಡು ಬಂತು

10:52 AM Jun 11, 2018 | |

“ಭರ್ಜರಿ’ ಚಿತ್ರದ ನಂತರ ಧ್ರುವ ಸರ್ಜಾ ಅವರ ಹೊಸ ಸಿನಿಮಾದ ಸುದ್ದಿಗಳು ಓಡಾಡುತ್ತಲೇ ಇದ್ದವು. ಈ ನಡುವೆ ಅವರು “ಪೊಗರು’ ಮಾಡುತ್ತಾರೆಂಬ ಸುದ್ದಿಯೂ ಬಂತು. ಇದು ಅವರ ಸಿನಿಮಾ ಸುದ್ದಿಗಳಾದರೆ, “ಭರ್ಜರಿ’ ನಂತರ ಧ್ರುವ ಸರ್ಜಾ ಅದೆಷ್ಟೋ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಡಿಯೋ ಬಿಡುಗಡೆ, ಟೀಸರ್‌ ಬಿಡುಗಡೆ ಮಾಡಿ, ಹೊಸಬರಿಗೆ ಬೆನ್ನು ಪ್ರೋತ್ಸಾಹಿಸಿದ್ದಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಕಿನಾರೆ’.

Advertisement

“ಕಿನಾರೆ’ ಎಂಬ ಹೊಸಬರ ಸಿನಿಮಾವೊಂದು ತಯಾರಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ. ದೇವರಾಜ್‌ ಪೂಜಾರಿ ಈ ಸಿನಿಮಾದ ನಿರ್ದೇಶಕರು. ಈಗ ಚಿತ್ರದ ಹಾಡೊಂದನ್ನು ಧ್ರುವ ಸರ್ಜಾ ಬಿಡುಗಡೆ ಮಾಡಿದ್ದಾರೆ. ದೇವರಾಜ್‌ ಪೂಜಾರಿ ಬರೆದಿರುವ “ಹೋಯ್ತಲ್ಲೋ ಕೋಳಿ ಓಡಿ ಹೋಯ್ತಲ್ಲೋ …’ ಎಂಬ ಹಾಡನ್ನು ಧ್ರುವ ಸರ್ಜಾ ಬಿಡುಗಡೆ ಮಾಡಿದ್ದಾರೆ.

ಈ ಮೂಲಕ ಹಾಡುಗಳ ಬಿಡುಗಡೆಗೆ ಧ್ರುವ ಚಾಲನೆ ನೀಡಿದ್ದಾರೆ. ಚಂದನ್‌ ಶೆಟ್ಟಿ ಹಾಡಿರುವ ಈ ಹಾಡು ಡ್ಯಾನ್ಸ್‌ ನಂಬರ್‌ ಆಗಿದ್ದು, ಈಗಾಗಲೇ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ. ಜೂನ್‌ ತಿಂಗಳು ಪೂರ್ತಿ ವಾರಕ್ಕೊಂದರಂತೆ ಒಬ್ಬೊಬ್ಬರಿಂದ ಹಾಡುಗಳನ್ನು ಬಿಡುಗಡೆ ಮಾಡಿಸುವ ಯೋಚನೆ ಕೂಡಾ ಚಿತ್ರತಂಡಕ್ಕಿದೆ.

ಬಿ.ಆರ್‌.ಸುರೇಂದ್ರನಾಥ್‌ ಸಂಗೀತ ಚಿತ್ರಕ್ಕಿದ್ದು, ರೆಡ್‌ ಆ್ಯಪಲ್‌ ಮತ್ತು ಅದಿತಿ ಫಿಲಂಸ್‌ ಬ್ಯಾನರ್‌ನಡಿ ತಯಾರಾಗಿರುವ ಈ ಸಿನಿಮಾ ಜುಲೈನಲ್ಲಿ ತೆರೆಕಾಣಲಿದೆ. ಸತೀಶ್‌ ರಾಜ್‌, ಗೌತಮಿ ಜಾದವ್‌ ಚಿತ್ರದ ನಾಯಕ- ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಕರಾವಳಿ ಸುತ್ತಮುತ್ತ ನಡೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next