Advertisement

Bheema Bad Boys: ವಿಜಯ್ ನಿರ್ದೇಶನದ ‘ಭೀಮ’ ಹಾಡು ಇಂದು ಬಿಡುಗಡೆ

11:53 AM Sep 18, 2023 | Team Udayavani |

“ಸಲಗ’ ಸಿನಿಮಾ ಮೂಲಕ ನಿರ್ದೇಶಕರಾಗಿಯೂ ಯಶಸ್ಸು ಕಂಡಿದ್ದ ವಿಜಯ್‌ “ಭೀಮ’ ಎಂಬ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆಯ ಹಂತಕ್ಕೆ ಬಂದಿದೆ.

Advertisement

ಚಿತ್ರವನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂಬ ಆಸೆ ಚಿತ್ರತಂಡದ್ದು. ಈ ಹಿನ್ನೆಲೆಯಲ್ಲಿ ಚಿತ್ರದ ತಯಾರಿ ಜೋರಾಗಿ ನಡೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್‌, ಟೀಸರ್‌, ಮ್ಯೂಸಿಕ್‌ ಬಿಟ್‌ಗಳು ಹಿಟ್‌ಲಿಸ್ಟ್‌ ಸೇರಿದೆ. ಈಗ ಚಿತ್ರದ ಮತ್ತೂಂದು ಹಾಡು ಇಂದು ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ಅದು “ಬ್ಯಾಡ್‌ ಬಾಯ್ಸ್’. ಈ ಮೂಲಕ ಭೀಮನ ಸೌಂಡ್‌ ಕೂಡಾ ಜೋರಾಗಲಿದೆ.

ರ್ಯಾಪರ್‌ಗಳಾದ ರಾಹುಲ್‌ ಡಿಟೊ, ಎಂ.ಸಿ.ಬಿಜ್ಜು ಹಾಗೂ ನಾಗಾರ್ಜುನ ಶರ್ಮಾ ಸೇರಿಕೊಂಡು ಸಾಹಿತ್ಯ ರಚಿಸಿರುವ “ಬ್ಯಾಡ್‌ ಬಾಯ್ಸ… ಆನ್‌ ದಿ ಸ್ಟ್ರೀಟ್‌’ ಎಂಬ ಹಾಡನ್ನು ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಿದೆ ಚಿತ್ರತಂಡ. ಚರಣ್‌ ರಾಜ್‌ ಈ ಚಿತ್ರದ ಸಂಗೀತ ನಿರ್ದೇಶಕರು. ಈ ಹಾಡಿಗೆ ರಾಹುಲ್‌ ಡಿಟೊ, ಎಂ.ಸಿ.ಬಿಜ್ಜು ದನಿಯಾಗಿದ್ದಾರೆ. ಹಾಡು ಕೂಡಾ ರ್ಯಾಪರ್‌ ಶೈಲಿಯೊಂದಿಗೆ ಮೂಡಿಬಂದಿದೆ.

ಇನ್ನು, ಭೀಮ ಕೂಡಾ ಒಂದು ಗಂಭೀರ ಹಾಗೂ ಪ್ರೇಕ್ಷಕರಿಗೆ ಇಷ್ಟವಾಗುವ ವಿಷಯವನ್ನಿಟ್ಟುಕೊಂಡು ಮಾಡುತ್ತಿರುವ ಸಿನಿಮಾ ಎನ್ನಲಾಗಿದೆ. ಈ ಕಥೆಗಾಗಿ ಸುಮಾರು ಎಂಟು ತಿಂಗಳಿಗೂ ಹೆಚ್ಚು ತಮ್ಮನ್ನು ವಿಜಯ್‌ ತೊಡಗಿಸಿಕೊಂಡು, ಎಲ್ಲವನ್ನು ಪಕ್ಕಾ ಮಾಡಿಕೊಂಡಿ ದ್ದಾರೆ. ಅಂದಹಾಗೆ, ಈ ಚಿತ್ರವನ್ನು ಕೃಷ್ಣ ಸಾರ್ಥಕ್‌ ಹಾಗೂ ವಿತರಕ ಜಗದೀಶ್‌ ಗೌಡ ನಿರ್ಮಾಣ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next