Advertisement
ಪ್ರಧಾನ ಮಂತ್ರಿ ಜೀವನ ಸುರಕ್ಷಾ ವಿಮಾ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಯಡಿ ಮರಣದ ಅನಂತರ ದಿನಗಳಲ್ಲಿ ಕುಟುಂಬವನ್ನು ಆಧರಿಸಲು ಅತ್ಯುತ್ತಮ ಯೋಜನೆಯೊಂದನ್ನು ಕೇಂದ್ರ ಸರಕಾರ ಒದಗಿಸಿದೆ. ಇತ್ತೀಚೆಗೆ ಕೆಲವು ಬದಲಾವಣೆಗಳನ್ನು ತರುವ ಮೂಲಕ ಮತ್ತಷ್ಟು ಸಾಮಾಜಿಕ ಭದ್ರತೆ ಒದಗಿಸಿದೆ.
Related Articles
Advertisement
ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್, ಅಂಚೆ ಕಚೇರಿ, ಡಿಸಿಸಿ ಬ್ಯಾಂಕ್, ಬ್ಯಾಂಕ್ ಮಿತ್ರ, ಸಿಎಸ್‌ಸಿ ಅಥವಾ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಮಾಡಬಹುದಾಗಿದೆ. ನಿಮ್ಮ ಖಾತೆಯಲ್ಲಿ ಹಣ ಇರುವ ಹಾಗೆ ನೋಡಿಕೊಂಡಲ್ಲಿ ಸಾಕು. ಈ ಮೇಲಿನ ಯಾವುದೇ ನೋಂದಣಿಗೆ ಹಣ ನೀಡುವ ಅವಶ್ಯವಿಲ್ಲ. ಮರಣ ಹೊಂದಿದ ವ್ಯಕ್ತಿಯ ವಾರಸುದಾರರಿಗೆ ಹಣ ಸಿಗಬೇಕಾದಲ್ಲಿ ಒಂದು ತಿಂಗಳ ಒಳಗೆ ಬ್ಯಾಂಕ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಇದಕ್ಕೆ ಬೇಕಾಗುವ ಅಗತ್ಯ ದಾಖಲೆಗಳು ಸ್ಥಳೀಯ ಗ್ರಾ.ಪಂ. ಮೂಲಕ ಸಿಗುವ ಮರಣ ಪ್ರಮಾಣ ಪತ್ರ, ವೈದ್ಯರು ಕೊಡುವ ಡೆತ್ ಸಮ್ಮರಿ, ಅಂಗವಿಕಲತೆಯ ಪ್ರಮಾಣಪತ್ರ, ಎಫ್‌ಐಆರ್ ಪಂಚನಾಮ ಆವಶ್ಯ. ಹಾವು ಕಚ್ಚಿ, ಮರದಿಂದ ಬಿದ್ದು, ಮರಬಿದ್ದು ಸಾವು ಇಂತಹ ಸಂದರ್ಭಗಳಲ್ಲಿ ಮರಣ ಪ್ರಮಾಣ ಪತ್ರ ಮತ್ತು ವೈದ್ಯರು ಕೊಡುವ ಪ್ರಮಾಣ ಪತ್ರ ಸಾಕಾಗುತ್ತದೆ. ವೈದ್ಯರು ಕೊಡುವ ಪ್ರಮಾಣ ಪತ್ರ, ವ್ಯಕ್ತಿ ಹೆಸರು, ಸ್ಥಳ, ಸಮುಯ, ಮರಣದ ಕಾರಣವನ್ನು ಬರೆಯಬೇಕಿದೆ. ಅಪಘಾತಗಳಿಂದ ಶಾಶ್ವತ ಅಂಗವೈಕಲ್ಯ ಉಂಟಾದರೆ, ಅಂಗ ಊನತೆ ಆಧಾರದ ಮೇಲೆ 1 ಲಕ್ಷ ರೂ. ಅಥವಾ 2 ಲಕ್ಷ ರೂ. ಕೈಸೇರಲಿದೆ.
ಫಲಾನುಭವಿಗಳ ವಿವರ :
ದ.ಕ. ಜಿಲ್ಲೆಯಲ್ಲಿ 8,96,086 ಮಂದಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಯ ಫಲಾನುಭವಿಗಳಿದ್ದು, 9,96,086 ಜೀವನ್ ಸುರûಾ ವಿಮಾ ಯೋಜನೆ ಮಾಡಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಈಗಾಗಲೆ 1,66,551 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ :
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಗೆ ಭಾರತೀಯ ನಾಗರಿಕನಾಗಿದ್ದು, 18ರಿಂದ 50 ವರ್ಷದ ಒಳಗೆ ಈ ಸೇರಿದರೆ 55 ವರ್ಷದ ತನಕ ಚಾಲ್ತಿಯಲ್ಲಿರುತ್ತದೆ. ವಿಮಾ ಕಂತು ವಾರ್ಷಿಕ 330 ರೂ. ಯಾವುದೇ ಕಾರಣಗಳಿಂದ ಮೃತಪಟ್ಟರೂ (ಆತ್ಮಹತ್ಯೆ ಮತ್ತು ಕೊಲೆಯನ್ನು ಹೊರತುಪಡಿಸಿ)ವಾರಸುದಾರರಿಗೆ 2 ಲಕ್ಷ ರೂ. ಸಿಗಲಿದೆ. ಒಬ್ಬ ವ್ಯಕ್ತಿ 2 ಯೋಜನೆಗಳಲ್ಲೂ ಭಾಗಿಯಾಗಬಹುದು. ಎರಡರಲ್ಲೂ ಶಾಶ್ವತ ಅಂಗವೈಕಲ್ಯತೆ ಪರಿಹಾರ ದೊರೆಯುತ್ತದೆ. ಎರಡರಲ್ಲೂ ಮರಣ ಹೊಂದಿದ ವ್ಯಕ್ತಿಯ ವಾರಸುದಾರರಿಗೆ 2+2=4 ಲಕ್ಷ ರೂ. ಪರಿಹಾರ ದೊರೆಯಲಿದೆ.
ರುಪೇ ಡೆಬಿಟ್‌ಗೂ ಮಾನ್ಯತೆ:
ರುಪೇ ಡೆಬಿಟ್ ಕಾರ್ಡ್ ಹೊಂದಿದ ವ್ಯಕ್ತಿ ಅಪಘಾತದಿಂದ ಮರಣ ಹೊಂದಿದಲ್ಲಿ ಆತನ ಆ ಕಾರ್ಡ್‌ನ್ನು ಬ್ಯಾಂಕ್‌ಗೆ ವಾರಸುದಾರರು ನೀಡಿದರೆ ನೇರವಾಗಿ 2 ಲಕ್ಷ ರೂ. ಪರಿಹಾರ ಲಭಿಸಲಿದೆ. ಬ್ಯಾಂಕ್‌ಗಳಲ್ಲಿ ಈಗಲೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಭಾರತದ ಪ್ರಜೆಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಯೋಜನೆಯಲ್ಲಿ ನಾವು ಕೈ ಜೋಡಿಸೋಣ. ಸಾರ್ವಜನಿಕರು ಸಂಪೂರ್ಣ ಮಾಹಿತಿ ಪಡೆದು ಸರಳ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಜಾಗೃತರಾಗಬೇಕು. –ಉಷಾ ನಾಯಕ್, ಆರ್ಥಿಕ ಸಮಾಲೋಚಕಿ ಆಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ, ಬೆಳ್ತಂಗಡಿ.
-ವಿಶೇಷ ವರದಿ