Advertisement

ಅಂಗನವಾಡಿ ಕಾರ್ಯಕರ್ತೆಯರ ಕೈ ಸೇರಿಲ್ಲ ಸ್ಮಾರ್ಟ್‌ಫೋನ್‌

12:30 AM Feb 07, 2020 | mahesh |

ಮಂಗಳೂರು: ಕೆಲಸದ ಒತ್ತಡ ಕಡಿಮೆಗೊಳಿಸುವುದು ಮತ್ತು ಪಾರದರ್ಶಕ ವ್ಯವಸ್ಥೆ ಜಾರಿಗಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸರಕಾರ ನೀಡಲುದ್ದೇಶಿಸಿದ್ದ ಸ್ಮಾರ್ಟ್‌ ಫೋನ್‌ ಇನ್ನೂ ಅವರ ಕೈ ಸೇರಿಲ್ಲ. ಒತ್ತಡ ನಿವಾರಣೆಯಾಗುವ ನಿರೀಕ್ಷೆಯಲ್ಲಿದ್ದ ಅವರು ನಿರಾಶೆಗೊಳಗಾಗಿದ್ದಾರೆ.

Advertisement

ಅಂಗನವಾಡಿ ಕಾರ್ಯಕರ್ತೆಯರು ಸರಕಾರದ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ಶ್ರಮಿಸುತ್ತಾರೆ. ಇದ ರೊಂದಿಗೆ ಅಂಗನವಾಡಿಗೆ ಬರುವ ಮಕ್ಕಳಿಗೆ ಕಲಿಸುವ ಹೊಣೆಗಾರಿಕೆ ಇದ್ದೇ ಇರುತ್ತದೆ. ಆದ್ದರಿಂದ ದಿನವಿಡೀ ಅವರಿಗೆ ಕೆಲಸದ ಒತ್ತಡವಿರುತ್ತದೆ.

ಈ ಹಿನ್ನೆಲೆಯಲ್ಲಿ ಕಾರ್ಯಕರ್ತೆ ಯರು “ಸ್ನೇಹ’ ಆ್ಯಪ್‌ ಆಧಾರಿತವಾಗಿ ಆನ್‌ಲೈನ್‌ ಮೂಲಕವೇ ಎಲ್ಲ ಕೆಲಸಗಳನ್ನು ನಿಭಾಯಿಸಬೇಕೆನ್ನುವ ನಿಟ್ಟಿನಲ್ಲಿ ಮುಂದಿನ ಎರಡು ವಾರದೊಳಗೆ ಸ್ಮಾರ್ಟ್‌ ಫೋನ್‌ ನೀಡಲಾಗುವುದು ಎಂದು ಕಳೆದ ಜನವರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹೇಳಿದ್ದರು. ಆದರೆ ಒಂದು ತಿಂಗಳಾ ದರೂ ಸ್ಮಾರ್ಟ್‌ಫೋನ್‌ ಅಂಗನವಾಡಿ ಕಾರ್ಯಕರ್ತೆಯರ ಕೈ ಸೇರಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಇಲಾಖೆಯ ದ.ಕ. ಜಿಲ್ಲಾ ಉಪನಿರ್ದೇಶಕ ಉಸ್ಮಾನ್‌ ಅವರು, “ಸ್ಮಾರ್ಟ್‌ಫೋನ್‌ ನೀಡುವ ಚಿಂತನೆ ಇರುವುದು ಹೌದು, ಆದರೆ ಯಾವಾಗ ಸಿಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next