Advertisement

ಮಕ್ಕಳ ಸಂಸತ್‌ಗೆ ಕೊಳೆಗೇರಿ ವಿದ್ಯಾರ್ಥಿನಿ

11:27 AM Nov 18, 2017 | Team Udayavani |

ಬೆಂಗಳೂರು: ರಾಜಾಜಿನಗರದ ಕೊಳೆಗೇರಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಕನಕ, ಮಕ್ಕಳ ದಿನಾಚರಣೆ ಅಂಗವಾಗಿ ನವೆಂಬರ್‌ 20ರಂದು ಯುನಿಸೆಫ್ ಸಂಸತ್‌ ಭವನದಲ್ಲಿ ಆಯೋಜಿಸಿರುವ ಮಕ್ಕಳ ಸಂಸತ್‌ ಕಾರ್ಯಕ್ರಮದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾಳೆ.

Advertisement

ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನಕ, ತನ್ನ ಕೊಳೇಗೇರಿ ಬದುಕಿನ ದುಸ್ಥಿತಿ ನೆನೆದು ಕಣ್ಣೀರಿಟ್ಟರು. “ಚಿಕ್ಕ ವಯಸ್ಸಿನಲ್ಲೇ ನನಗೆ ಕೆಲವರು ಲೈಂಗಿಕ, ದೈಹಿಕ, ಮಾನಸಿಕ ಕಿರುಕುಳ ನೀಡಿ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಆಗ ನನಗೆ ಜೀವನವೇ ಸಾಕೆನಿಸಿತ್ತು. ನನ್ನೊಬ್ಬಳ ಬದುಕಷ್ಟೇ ಅಲ್ಲ, ಇಡೀ ಕೊಳೆಗೇರಿ ಹೆಣ್ಣು ಮಕ್ಕಳ ಬದುಕೇ ಹೀಗೆ,’ ಎಂದು ಅಳಲು ತೊಡಿಕೊಂಡರು.

“ಕೊಳೆಗೇರಿ ಮಕ್ಕಳಿಗೆ ಅನುಕಂಪದ ಜತೆಗೆ ಮಕ್ಕಳ ಹಕ್ಕುಗಳ ರಕ್ಷಣೆಯ ತಿಳಿವಳಿಕೆ ಬೇಕಾಗಿದೆ. ಮಕ್ಕಳ ಕಳ್ಳ ಸಾಗಣೆ ಪ್ರಕರಣಗಳು ನಡೆಯುತ್ತಲೇ ಇವೆ. ಅಲ್ಲದೆ ಲೈಂಗೀಕ ದೌರ್ಜನ್ಯಕ್ಕೆ ಹೆಚ್ಚು ಮಕ್ಕಳು ಬಲಿಯಾಗುತ್ತಿದ್ದಾರೆ.ನನಗೆ ಇದೀಗ ಒಳ್ಳೆ ಅವಕಾಶ ಸಿಕ್ಕಿದ್ದು, ಈ ಬಗ್ಗೆ ಮಕ್ಕಳ ಸಂಸತ್‌ ಅಧಿವೇಶನದಲ್ಲಿ ದನಿ ಎತ್ತುತ್ತೇನೆ,’ ಎಂದರು.

ಬಾಲ ಕಾರ್ಮಿಕರನ್ನು ಗುರುತಿಸುವ ಸಮೀಕ್ಷೆ ವೇಳೆ ಸಿಕ್ಕ ಕನಕಳನ್ನು ಕರೆದೊಯ್ದ ಮತ್ತೀಕೆರೆಯ ಸ್ಪರ್ಶ ಟ್ರಸ್ಟ್‌, ಆಕೆಗೆ ಎಲ್ಲ ರೀತಿಯ ನೆರವು ನೀಡಿ ತಾಯಿಯ ರೀತಿಯಲ್ಲಿ ಪೋಷಿಸುತ್ತಿದೆ. ವಿಜ್ಞಾನಿಯಾಗಬೇಕು ಎಂಬುದು  ಕನಕಳ ಕನಸಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next