Advertisement

ಜಾರಿ ಬೀಳುತ್ತಿವೆ ಕಾರು,ರಿಕ್ಷಾ,ಸ್ಕೂಟರ್ ಗಳು

08:48 PM May 22, 2019 | Team Udayavani |

ವಾಮಂಜೂರು: ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ ಸಮೀಪದ ರಸ್ತೆಯಲ್ಲಿ ಕಸ ಸಾಗಿಸುವ ವಾಹನಗಳ ತ್ಯಾಜ್ಯ ನೀರು ರಸ್ತೆಗೆ ಸುರಿಸುತ್ತಿರುವುದರಿಂದ ವಾಹನ ಸಂಚಾರ ಸಂಚಕಾರವಾಗಿದೆ. ಮುಖ್ಯವಾಗಿ ದ್ವಿಚಕ್ರ ವಾಹನಗಳು ಜಾರಿ ಬೀಳುವ ಅಪಾಯವಿದೆ.

Advertisement

ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಾಹನಗಳಲ್ಲಿ ತಂದು ಕಸವನ್ನು ಸುರಿಯಲಾಗುತ್ತಿದೆ. ಈ ವಾಹನಗಳು ತೆರೆದ ಸ್ಥಿತಿ ಯಲ್ಲಿದ್ದು, ಇದರಿಂದ ವಾಸನೆ ಎಲ್ಲೆಡೆ ವ್ಯಾಪಿಸುತ್ತದೆ. ಅಲ್ಲದೆ ಹಸಿ ಕಸಗಳ ವಾಸನೆ ಮಿಶ್ರಿತ ನೀರು ರಸ್ತೆಗೆ ಸುರಿಯು ತ್ತಿರುವುದರಿಂದ ರಸ್ತೆಯಲ್ಲಿ ಸಾಗುವ ದ್ವಿಚಕ್ರ ವಾಹನ ಸವಾ ರರು ಜಾರಿ ಬೀಳುತ್ತಿದ್ದಾರೆ. ರಸ್ತೆಯಲ್ಲಿ ತ್ಯಾಜ್ಯ ನೀರು ಸುರಿದು ಕಪ್ಪು ಬಣ್ಣದ ಪದರ ನಿರ್ಮಾಣವಾಗಿದೆ. ಇದಕ್ಕೆ ನೀರು ಸೇರಿದರೆ ಇದು ಇನ್ನಷ್ಟು ಅಂಟಂಟಾಗಿ ವಾಹನಗಳು ಜಾರು ತ್ತಿವೆ.

ಕಾರು, ರಿಕ್ಷಾದಂತಹ ವಾಹನಗಳು ವೇಗವಾಗಿ ಬರುವಾಗ ಜಾರುವ ಅನೇಕ ಘಟನೆಗಳು ಈಗಾಗಲೇ ನಡೆದಿವೆ. ಬೈಕ್‌, ಸ್ಕೂಟರ್ ಗಳು ಪಲ್ಟಿ ಹೊಡೆಯುತ್ತಿವೆ. ಹೀಗಾಗಿ ಇಲ್ಲಿ ಅತ್ಯಂತ ಜಾಗರೂಕತೆಯಿಂದ ನಿಧಾನವಾಗಿ ಚಲಿಸಬೇಕಾ ಗುತ್ತದೆ. ರಸ್ತೆ ಅಗಲವಾಗಿದೆ ಎಂದು ವೇಗವಾಗಿ ಹೋದರೆ ಅಪಾಯ ಗ್ಯಾರಂಟಿ.

ಕಸ ಸಾಗಿಸುವ ವಾಹನಗಳು ತೆರೆದ ಸ್ಥಿತಿ ಯಲ್ಲಿ ಕಸ ಸಾಗಿಸುವುದರಿಂದಲೇ ಅದರ ತ್ಯಾಜ್ಯದ ನೀರು ರಸ್ತೆಗೆ ಸುರಿಯುತ್ತದೆ. ಅಲ್ಲದೆ ವಾಹನಗಳಲ್ಲಿರುವ ಕೊಳೆತ ಕಸ ದಿಂದ ಕೆಟ್ಟ ವಾಸನೆಯೂ ಬೀರುತ್ತದೆ. ಹೀಗಾಗಿ ಕಸ ಸಾಗಾಟದ ವಾಹನ ಮಾಲಕರಿಗೆ ಎಚ್ಚರಿಕೆ ನೀಡಿ ಕ್ರಮ ಕೈ ಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಹೊಗೆಯಾಡುತ್ತಲೇ ಇದೆ ಡಂಪಿಂಗ್‌ ಯಾರ್ಡ್‌
ಸದ್ಯಕ್ಕೆ ಡಂಪಿಂಗ್‌ ಯಾರ್ಡ್‌ನಲ್ಲಿ ಹೊತ್ತಿಕೊಂಡ ಬೆಂಕಿ ಹತೋಟಿಗೆ ಬಂದಿದ್ದರೂ ಹೊಗೆ ಮಾತ್ರ ಇನ್ನೂ ಇದೆ. ಕಸದ ಮೇಲೆ ಮಣ್ಣು ಸುರಿದಿರುವುದರಿಂದ ಒಳಗಡೆ ರಾಸಾಯನಿಕ ಸಂಯೋಜನೆಗೊಂಡು ಮಣ್ಣಿನ ಮೇಲಿಂದ ಹೊಗೆ ಬರುತ್ತಿರುವುದು ನಿಂತಿಲ್ಲ. ರಾತ್ರಿ ವೇಳೆ ಇದರ ತೀವ್ರತೆ ಹೆಚ್ಚಾಗಿರುತ್ತದೆ. ಮಂಗಳವಾರ ರಾತ್ರಿಯೂ ಹೊಗೆ ಜಾಸ್ತಿ ಇತ್ತು ಎನ್ನುತ್ತಾರೆ ಸ್ಥಳೀಯರು.

Advertisement

ಮಳೆ ಸುರಿದರೆ ಸಮಸ್ಯೆ
ಮತ್ತಷ್ಟು ಹೆಚ್ಚಳ
ಮಳೆಗಾಲದಲ್ಲಿ ನೀರು ರಸ್ತೆಯಲ್ಲಿ ಅಂಟಿದ ತ್ಯಾಜ್ಯಕ್ಕೆ ಸೇರುವುದರಿಂದ ಇದು ಇನ್ನು ಅಪಾಯಕಾರಿಯಾಗಿದೆ. ಮೊದಲೇ ತ್ಯಾಜ್ಯ ನೀರು ಬಿದ್ದು ಅಂಟಾಗಿರುವ ರಸ್ತೆಯಲ್ಲಿ ತ್ಯಾಜ್ಯದ ನೀರು ಮತ್ತಷ್ಟು ಸ್ಥಳಕ್ಕೆ ವ್ಯಾಪಿಸಿಕೊಳ್ಳುತ್ತದೆ. ಇದ ರಿಂದ ಸಮಸ್ಯೆ ಮತ್ಥಷ್ಟು ಹೆಚ್ಚಳವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next