Advertisement
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಂಬಕರ್ಣನ ಅಣ್ಣ ಅಥವಾ ತಮ್ಮ ಇರಬೇಕು. ಸದಾ ನಿದ್ದೆಯಲ್ಲೇ ಇರುತ್ತಾರೆ. ಈಗ ಎಚ್ಚರಾಗಿ, ಎರಡೇ ನಿಮಿಷದಲ್ಲಿ ಬಿ.ಎಸ್.ವೈ ವಿರುದ್ಧ ರಾಜಕೀಯ ದುರುದ್ದೇಶದಿಂದ ದೂರು ದಾಖಲಿಸಿದ್ದಾರೆ. ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿದ್ದರೂ, ಯಾಕೆ ತನಿಖೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
Related Articles
Advertisement
ಸೇಡಿಗೆ ಮತ್ತೂಂದು ಹೆಸರೇ ಸಿಎಂ: ವಿಧಾನ ಪರಿಷತ್ ಸದಸ್ಯ ವಿ. ಸೋಮಣ್ಣ ಮಾತನಾಡಿ, ಸೇಡಿಗೆ ಮತ್ತೂಂದು ಹೆಸರಾಗಿರುವ ಸಿದ್ದರಾಮಯ್ಯನವರು ಮಾಡಿರುವ ಕುತಂತ್ರ ಬಟ್ಟ ಬಯಲಾಗಿದೆ. ಎಸಿಬಿಯನ್ನು ದುರ್ಬಳಕೆ ಮಾಡಿ, ಲೋಕಾಯುಕ್ತಕ್ಕೆ ದಿಕ್ಕು ದೆಸೆ ಇಲ್ಲದಂತೆ ಮಾಡಿದ್ದೀರಿ. ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಅಪಾದನೆ ಮಾಡಿ, ಜನರ ಭಾವನೆಯನ್ನು ಕೆರಳಿಸುತ್ತಿದ್ದೀರಿ. 35 ವರ್ಷದಲ್ಲಿ ರಾಜ್ಯದ ಯಾವ ಮುಖ್ಯಮಂತ್ರಿಯೂ ಇಂಥ ಕೀಳು ಮಟ್ಟದ ರಾಜಕಾರಣ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಬಾಯಲ್ಲಿ ಹೇಳವುದು ಭಗದ್ಗೀತೆ, ಆದರೆ ಮಾಡುವುದು ಕೀಳುಮಟ್ಟದ ಕೆಲಸ ಎಂದು ದೂರಿದರು.
ಅರ್ಕವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇ ವರದಿ ನೀಡಿದ್ದೇನೆ. ಅದನ್ನು ತೀರ್ಮಾನಿಸಲು ಕಾಚಾಚಾರಕ್ಕೆ ಒಂದು ಆಯೋಗ ರಚನೆ ಮಾಡಲಾಗಿದೆ. ಎಸಿಬಿ ಅಧಿಕಾರಿಗಳಿಗೆ ಆಶ್ವಾಸನೆ ನೀಡಿ, ಅವರನ್ನು ತಮ್ಮ ಕೈಗೊಂಬೆಯಾಗಿ ಮಾಡಿಕೊಂಡಿದ್ದಿರಿ. ಪೊಲೀಸ್ ಅಧಿಕಾರಿಗಳು ನಿಮ್ಮ ಮನೆಯ ಸೊತ್ತಾಗಿದ್ದಾರೆ. ನಿಮ್ಮ ಕೀಳು ನಡವಳಿಕೆ ಇನ್ನಾದರೂ ಬದಲಿಸಿಕೊಂಡು ರಾಜೀನಾಮೆ ನೀಡಿ, ಜನರ ಮುಂದೆ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಶಿವರಾಮ ಕಾರಂತ ಬಡವಣೆಯೇ ಇಲ್ಲ ಎಂದು ಹೈ ಕೋರ್ಟ್ ದ್ವಿಸದಸ್ಯ ಪೀಠವೇ ಹೇಳಿದೆ. ಅರ್ಕಾವತಿ ಬಡವಾಣೆಗೆ 660 ಎಕರೆಗೆ ಸಿಎಂ ಸಿದ್ದರಾಮಯ್ಯ ಅವರೇ ಎನ್‌ಒಸಿ ನೀಡಿದ್ದಾರೆ. ಹಾಗೆಯೇ ಅವರ ಮೇಲೆ 16 ಕೇಸ್ ಇದೆ. ಕಾಂಗ್ರೆಸ್ ಪಟಾಲಂಗಳ ಮೇಲೆ ಇರುವ ಕೇಸ್ ಏನಾಯ್ತು? ಎಂದು ಪ್ರಶ್ನಿಸಿದರು. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶಾಸಕ ವೈ.ಎ.ನಾರಾಯಣ ಸ್ವಾಮಿ ಸೇರಿದಂತೆ ಬಿಜೆಪಿನಾಯಕರು ಉಪಸ್ಥಿತರಿದ್ದರು.