Advertisement
ಕರ್ನಾಟಕದ ಪ್ರಮುಖ ಮಠವೊಂದರ ಸ್ವಾಮೀಜಿ ಸುಮಾರು 50 ವರ್ಷಗಳ ಹಿಂದಿನ ಮಾತಿದು. ಮಠದ ಅನುಯಾಯಿಗಳಿಂದ ಸುತ್ತುವರೆದಿದ್ದರು. ಅವರ ಭೇಟಿಗಾಗಿ ಬೆಂಗಳೂರಿನಿಂದ ಪ್ರಮುಖ ವಾಣಿಜ್ಯೋದ್ಯಮಿಯೊಬ್ಬರು ಬಂದು ತಮ್ಮ ಪರಿಚಯವನ್ನು ಸ್ವಾಮೀಜಿಯವರ ಆಪ್ತ ವಲಯದವರಿಗೆ ತಿಳಿಸದೆ ಸರತಿ ಸಾಲಿನಲ್ಲಿ ಸ್ವಾಮೀಜಿಯವರಿಗಾಗಿ ಕಾದಿದ್ದರು.ಅಷ್ಟು ದೊಡ್ಡ ವಾಣಿಜ್ಯೋದ್ಯಮಿಗಳ ವಿನಯ ಪ್ರಶಂಸನೀಯವೇ ಸರಿ. ಆದರೆ ಇವರು ಬಂದಿದ್ದನ್ನು ತಿಳಿದಿರದ ಸ್ವಾಮೀಜಿ ಮತ್ತೂಂದು ಕೊಠಡಿಯಲ್ಲಿದ್ದರು. ತನ್ನನ್ನು ಕಂಡು ಭಕ್ತಿ ಗೌರವ ಅರ್ಪಿಸುತ್ತಿದ್ದ ಭಕ್ತರ ಬಳಿ ಮಾತನಾಡುತ್ತಿದ್ದಾಗಲೇ ಅವರು ಸರ್ರನೆ ಸೆಕೆಂಡುಗಳ ಕಾಲ ಕಣ್ಣು ಮುಚ್ಚಿದರು. ಕಣ್ಣು ತೆರೆದಾಗ ಸ್ವಾಮೀಜಿ ತಮ್ಮ ಆಪ್ತರ ಬಳಿ ಹೊರಗೆ ಬೆಂಗಳೂರಿನ ಇಂಥವರು (ಹೆಸರು ಬೇಡ) ನಮಗಾಗಿ ಕಾಯುತ್ತಿದ್ದಾರೆ. ಅವರನ್ನು ಒಳಗೆ ಕರೆತನ್ನಿ ಎಂದು ಆದೇಶಿಸಿದರು.
Related Articles
Advertisement
ನಮ್ಮ ದೇಹದ ವಿಚಾರಗಳನ್ನೇ ತೆಗೆದುಕೊಳ್ಳಿ, ರಕ್ತ, ಮಜ್ಜನ, ಮಾಂಸ, ಮೂಳೆ, ಸ್ನಾಯು, ಕರುಳು, ಪಿತ್ಥಕೋಶ ಮಿದುಳು, ಮೂಗು ಕಿವಿ, ಬಾಯಿ, ನಾಲಿಗೆ ಇತ್ಯಾದಿ ಎಲ್ಲವೂ ಹೇಗೆ ಎಷ್ಟು ಏಕೆ ಯಾವಾಗ ಹಾಳಾಗಬಲ್ಲವು ಎಂಬುದನ್ನು ನಿವೀಗ ತಿಳಿದು ಬಿಟ್ಟಿದ್ದೇವೆ. ಹೀಗಾಗಿ ನಮಗೆ ಬೇಕಾದಷ್ಟು ಮೃಷ್ಟಾನ್ನ ಊಟವನ್ನು ಮಾಡಲು ನಾವು ಹೆದರುತ್ತೇವೆ. ನಮ್ಮ ಪಚನ ಕ್ರಿಯೆ ತಗ್ಗಿದೆ. ಶ್ರಮಕ್ಕೆ ಅವಕಾಶವಿಲ್ಲ. ಶ್ರಮಕ್ಕೆ ಅವಕಾಶ ಬೇಕು ಎಂದರೆ ನಾವು ಆಧುನಿಕತೆಯನ್ನು ತಬ್ಬಿಕೊಳ್ಳಬಾರದು. ಆಧುನಿಕತೆಯು ವಿನಯವನ್ನು ಸಂಪಾದಿಸಿಕೊಡಲು ಶಕ್ತಿ ಹೊಂದಿದೆಯೇ? ಒಂದೂ ಮಾತ್ರೆಯನ್ನು ನುಂಗದೆ ಜೀವನವನ್ನು ಮುಂದುವರೆಸಲು ಸಾಧ್ಯವಿಲ್ಲವೇ? ಡಯಾಲಿಸೀಸ್ ತನಕ ಮುಂದುವರೆಯದ ಹಾಗೆ ಹೇಗೆ ಆರೋಗ್ಯವನ್ನು ಸಂಭಾಳಿಸಿಕೊಳ್ಳು ಸಾಧ್ಯ. ಸೊಂಟ, ಬೆನ್ನು, ಪಾದ, ಮಂಡಿ ಹಾಗೂ ಸಂಧಿಗಳ ನೋವಿರದೆ ಅಸ್ಥಿಮಂಡಲವನ್ನು ಸಂಭಾಳಿಸಿಕೊಂಡು ವೃದ್ಧಾಪ್ಯವನ್ನು ಶಿಕ್ಷೆಯಾಗದಂತೆ ನೋಡಿ ಕೊಳ್ಳಲು ಸಾಧ್ಯವೇ? ಇದು ಸಾಧುವಲ್ಲ ಎಂಬುದು ಹಲವರ ಉತ್ತರ. ಆದರೆ ಸಾಧ್ಯ ಎಂದು ಕೆಲವರು ಹೇಳುತ್ತಾರೆ. ಶಾಕ್ತರಿಗೆ ದೇವಿ ಶಕ್ತಿಯನ್ನು ಕೊಡುತ್ತಾಳೆ. ವೈಷ್ಣವರಿಗೆ ಹರಿ ಸರ್ವೋತ್ತಮ. ಸ್ಮಾರ್ಥರಿಗೆ ಶಿವ ವಿಷನಿವಾರಕ. ನಮ್ಮ ಭಾರತೀಯ ಪರಂಪರೆಯು ಯೋಗವನ್ನು ಧ್ಯಾನ, ಜಪ ತಪಗಳನ್ನು ಮಂತ್ರ ತಂತ್ರಾದಿ ವಿಷಯಗಳ ಕುರಿತಾಗಿ ಸುದೀರ್ಘವಾಗಿ ವ್ಯಾಖ್ಯಾನಗಳನ್ನು ಕಟ್ಟಿಕೊಟ್ಟಿದೆ. ಕುಂಡಲಿನಿಯ ಜಾಗ್ರತ ಸಿದ್ಧಿಯು ನಮ್ಮ ಅನುಭವವನ್ನು ಲೌಕಿಕದಿಂದ ಅಲೌಕಿಕಕ್ಕೆ ಸಂಯೋಜಿಸಿ ಮನುಷ್ಯರಿಗೆ ಮೀರಿದ ಅತಿಮಾನುಷ ಶಕ್ತಿ ಘಟಕಗಳನ್ನು ಒದಗಿಸುತ್ತದೆ. ಸಾಧಕರು ಯೋಗದ ಮೂಲಕ ಶಕ್ತಿ ಪೂಜೆಯ ಮೂಲಕ, ಅನುಷ್ಠಾನಗಳ ಮೂಲಕ ಲೌಕಿಕಗಳ ಕಗ್ಗಂಟುಗಳನ್ನು ನಿವಾರಿಸುತ್ತಾರೆ. ಅದರಲ್ಲೂ ಅನುಷ್ಠಾನಾದಿ ಜಪಗಳಿಂದ ಭೂತ ಭವಿಷ್ಯತ್ತು ಮತ್ತು ವರ್ತಮಾನಗಳನ್ನು ಭಿನ್ನ ರೀತಿಯಲ್ಲಿ ಅರಿಯಲು ಶಕ್ತಿ ಹೊಂದಿರುತ್ತಾರೆ. ಮಾನಸಿಕ ವಲಯದ ಆಳ ಹಾಗೂ ವಿಸ್ತಾರಗಳು ಪರರು ನೋಡದ್ದನ್ನು ಅವರು ಊಹಿಸುತ್ತಾರೆ. ಅತಿಮಾನುಷ ಅತೀಂದ್ರಿಯ ಅನುಭವಗಳನ್ನು ಹೇಳುವ ಜನ ಒಂದೇ ಏಟಿಗೆ ಅರೆ ಹುಚ್ಚರಂತೆ ಕಾಣಿಸಿಕೊಂಡರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಧಾರ್ಮಿಕವಾದ ಭ್ರಮೆ ಮತ್ತು ವಾಸ್ತವಗಳ ಮಿಶ್ರಣದಲ್ಲಿ ತೇಲಾಡುವ ಜನರ ಅಪಲಾಪ ಎಂದು ಕೆಲವರು ಗುರುತಿಸುತ್ತಾರೆ.
ಆದರೆ ಅತೀಂದ್ರಿಯ ಶಕ್ತಿಗಳು ಪಂಚೇಂದ್ರಿಯಗಳು ಗಟ್ಟಿಯಾಗಿಯೇ ಬೆಸೆದುಕೊಂಡು ಇದು ಬೇರೆಯದೇ ಆದ ಲಿಂಗ ಇಂದ್ರಿಯ ಎಂದು ಗುರುತಿಸಲಾಗದ ಭವಿಷ್ಯವನ್ನು ಬಗೆದು ಇಣುಕುವ ಶಕ್ತಿ ಮನದಲ್ಲಿ ಜಾಗ್ರತವಾಗಿರುತ್ತದೆ. ಇದು ಎಲ್ಲಿ ಅಡಕವಾಗಿದೆ ಎಂದು ಗುರುತಿಸಿ ಹೇಳುವುದು ಮನದಲ್ಲಿ ಜಾಗ್ರತವಾಗಿರುತ್ತದೆ. ಇದು ಎಲ್ಲಿ ಅಡಕವಾಗಿದೆ ಎಂದು ಗುರುತಿಸಿ ಹೇಳುವುದು ಕಷ್ಟ. ಸ್ಕಿ$›ಜೋಫೋನಿಯಾ ಇರುವ ಜನರನ್ನು ಅವಸರ ಅವಸರವಾಗಿ ನಾವು ಮನೋರೋಗಿಗಳನ್ನಾಗಿ ಗುರುತಿಸುತ್ತೇವೆ. ಒಂದು ಉದಾಹರಣೆ ಗಮನಿಸಿ. ಒಬ್ಬ ಅಗೃಹಸ್ಥನ ಮಗಳು ಅಪರೂಪಕ್ಕೆ ಸೀರೆ ಉಟ್ಟುಕೊಂಡು ಒಂದು ಸಮಾರಂಭಕ್ಕೆ ಹೊರಟಿದ್ದಳು. ಅವಳ ಜೊತೆ ಅವಳ ಗೆಳತಿ ಅದೇ ವಯಸ್ಸಿನವಳು ಒಬ್ಬಳು ಸೇರಿಕೊಂಡಳು. ಈ ಗೃಹಸ್ಥರಿಗೆ ಏನನಿಸಿತೋ ತನ್ನ ಮಗಳನ್ನು ಜೊತೆಯಾದ ಹುಡಿಗಿಯ ಬಳಿ ನಿನ್ನ ಸೀರೆ ಸೆರಗಿನ ಬಗ್ಗೆ ಜಾಗ್ರತೆ ಇರಲಮ್ಮಾ ಎಂದು ಒಮ್ಮೆಗೇ ಎಚ್ಚರಿಕೆ ನೀಡಿದರು. ಗೃಹಸ್ಥರ ಹೆಂಡತಿ ಇದನ್ನು ಕೇಳಿಸಿಕೊಂಂಡು ಒಳಗಿನಿಂದ ಓಡಿ ಬಂದು ರೀ ಸುಮ್ಮನಿರ್ರೀ ನಿಮ್ಮದೊಂದು ಅನಿಷ್ಠ ಎಂದು ಸಿಡಿಸಿಡಿಯಿಂದ ನುಡಿದಳು. ಆ ರಾತ್ರಿ ದುರ್ದೈವ ಎಂದರೆ ಸಮಾರಂಭದಲ್ಲಿ ಆರತಿ ಬೆಳಗುವಾಗ ಗೃಹಸ್ಥರ ಮಗಳ ಸೆರಗಿಗೆ ಆರತಿ ಸಿಡಿದು ಎತ್ತುವಾಗ ಬೆಂಕಿ ಹತ್ತಿತು.
ಅನಂತಶಾಸ್ತ್ರಿ