Advertisement

ಎಚ್‌1 ಎನ್‌1 ರೋಗ  ಹಾವಳಿ ಜಿಲ್ಲೆಯಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ

01:00 AM Feb 27, 2019 | Harsha Rao |

ಕಾಸರಗೋಡು: ಜಿಲ್ಲೆಯಲ್ಲಿ ಎಚ್‌1ಎನ್‌1 ನಿಯಂತ್ರಣದಲ್ಲಿದೆ ಎಂದು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್‌ ತಿಳಿಸಿದರು.

Advertisement

ಪೆರಿಯ ನವೋದಯ ವಿದ್ಯಾಲಯದ ಕೆಲವು ವಿದ್ಯಾರ್ಥಿಗಳಲ್ಲಿ ಈ ರೋಗದ ಲಕ್ಷಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಾಂಞಂಗಾಡ್‌ ಜಿಲ್ಲಾ ಧಿಕಾರಿ ಕಚೇರಿ ಮಿನಿ ಸಭಾಂಗಣದಲ್ಲಿ ನಡೆದ ವಿದ್ಯಾಲಯದ ಮಕ್ಕಳ ಹೆತ್ತವರ, ಶಿಕ್ಷಕರ ಅವಲೋಕನ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಆರೋಗ್ಯ ಇಲಾಖೆ ನಡೆಸುತ್ತಿರುವ ಪ್ರತಿರೋಧ ಚಟುವಟಿಕೆಗಳು ಚುರುಕಾ ಗಿವೆ. ಹೆಚ್ಚುವರಿ ಪರಿಣತ ಚಿಕಿತ್ಸೆ ಅಗತ್ಯ ವಿದ್ದರೆ ಪ್ರತ್ಯೇಕ ವೈದ್ಯಕೀಯ ತಂಡ ವನ್ನು ರವಾನಿಸಲಾಗುವುದು ಎಂದು ಮುಖ್ಯ ಮಂತ್ರಿ ಮತ್ತು ಆರೋಗ್ಯ ಸಚಿವ ಭರವಸೆ ನೀಡಿರುವುದಾಗಿ ಸಚಿವ ಹೇಳಿದರು.

ಸಭೆಯಲ್ಲಿ ಜಿಲ್ಲಾ ಧಿಕಾರಿ ಡಾ| ಡಿ.ಸಜಿತ್‌ ಬಾಬು, ಉಪಜಿಲ್ಲಾ ಧಿಕಾರಿ ಅರುಣ್‌ ಕೆ. ವಿಜಯನ್‌, ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ಪಿ.ದಿನೇಶ್‌ ಕುಮಾರ್‌, ಡಿ.ಎಸ್‌.ಎಂ.ಒ. ಡಾ| ರಿಜಿತ್‌ ಕೃಷ್ಣನ್‌, ಡಾ.ಅಮರ್‌ ಸೆಟಿಲ್‌ ಮೊದಲಾದವರು ಉಪಸ್ಥಿತರಿದ್ದರು.

ಜ್ವರ, ಕೆಮ್ಮು ಸಹಿತ ಲಕ್ಷಣ ಗಳಿರುವವರಿಗೆ ಔಷಧ ನೀಡಲಾಗುತ್ತಿದೆ. ಜ್ವರದ ಲಕ್ಷಣ ಹೊಂದಿರುವ ಮಕ್ಕಳನ್ನು ಶಾಲೆಯಿಂದ ದೂರ ಇರಿಸಲಾಗುತ್ತಿದೆ. ಎಲ್ಲ ಮಕ್ಕಳಿಗೂ ಸಿಬಂದಿಗೂ ಮಾಸ್ಕ್ ವಿತರಿಸಲಾಗಿದೆ. ಇವುಗಳನ್ನು ಬಳಕೆಯ ನಂತರ ಇಲಾಖೆ ನೌಕರರೇ ಸಂಗ್ರಹಿಸಿ ನಾಶಗೊಳಿಸುವರು. 

Advertisement

ವಿಶೇಷ ರೀತಿ ಸಿದ್ಧಪಡಿಸಿದ ರೋಗನಾಶಕ ಬಳಸಿ ಶುಚೀಕರಣ ನಡೆಸಲೂ ಕ್ರಮಕೈಗೊಳ್ಳಲಾಗಿದೆ. 
ಓರ್ವ ಮಹಿಳಾ ವೈದ್ಯೆಯ ಸೇವೆಯೂ ಇಲ್ಲಿದೆ.

ಮಕ್ಕಳ ಹೆತ್ತವರಿಗೆ ಈ ಸಂಬಂಧ ಜಾಗೃತಿ ನಿಡುವ ಕಾಯಕವೂ ನಡೆದಿದೆ. ಹೆತ್ತವರಿಗಾಗಿ ಆರೋಗ್ಯ ಇಲಾಖೆಯ ಹೆಲ್ಪ್ಲೈನ್‌ ಆರಂಭಿಸಲಾಗಿದೆ. ನಂಬ್ರ: 0467-2234057.

Advertisement

Udayavani is now on Telegram. Click here to join our channel and stay updated with the latest news.

Next