Advertisement
ನಗರದಲ್ಲಿ ಸದ್ಯ ನೀರು ರೇಷನಿಂಗ್ ಜಾರಿಯಲ್ಲಿದೆ. ಇದರಂತೆ ಮೂರು ದಿನ ನೀರು ಸ್ಥಗಿತ ಮಾಡಿ ನಾಲ್ಕು ದಿನ ನೀರು ಪೂರೈಕೆ ಮಾಡಲಾಗುತ್ತದೆ. ನೀರು ಪೂರೈಸುವ ನಾಲ್ಕು ದಿನಗಳ ಅವಧಿಯಲ್ಲಿ ದಿನವಿಡೀ ನೀರು ಬರುವುದಿಲ್ಲ. ಪ್ರತಿಯೊಂದು ಪ್ರದೇಶಕ್ಕೂ ಗಂಟೆಯ ಆಧಾರದಲ್ಲಿ ನೀರು ನೀಡಲಾಗುತ್ತದೆ. ಆಯಾಯ ಪ್ರದೇಶಗಳ ಜನರು ಈ ಅವಧಿಯಲ್ಲಿ ನೀರು ಸಂಗ್ರಹಿಸಿಡಬೇಕು.
Related Articles
ನೀರಿನ ಪ್ರಶರ್ ಇಲ್ಲದಿರುವುದರಿಂದ ಒವರ್ ಹೆಡ್ ಟ್ಯಾಂಕಿಗಳಿಗೆ ನೀರು ಹೋಗುವುದಿಲ್ಲ. ಅದುದರಿಂದ ಡ್ರಮ್‌ಗಳಲ್ಲಿ, ಬಕೇಟು ಇತ್ಯಾದಿಗಳಲ್ಲಿ ಸಂಗ್ರಹಿಸಿಡಬೇಕಾಗುತ್ತದೆ. ಗಂಡ ಹೆಂಡತಿ ಇಬ್ಬರೇ ಇರುವ ಮತ್ತು ಇಬ್ಬರೂ ಉದ್ಯೋಗದಲ್ಲಿರುವ ಮನೆಗಳಲ್ಲಿ ಹಗಲು ಹೊತ್ತು ಅಂದರೆ ಸಾಮಾನ್ಯವಾಗಿ ಬೆಳಗ್ಗೆ 8.30ರಿಂದ ಸಂಜೆ 6 ಗಂಟೆಯ ಅವಧಿಯಲ್ಲಿ ನೀರು ಬಂದರೆ ಆ ವೇಳೆ ಅವರು ಕಚೇರಿಗಳಲ್ಲಿ ಅಥವಾ ಕೆಲಸದ ತಾಣಗಳಲ್ಲಿರುವುದರಿಂದ ಅದನ್ನು ಸಂಗ್ರಹಿಸಿಡಲು ಸಾಧ್ಯವಾಗುವುದಿಲ್ಲ. ಸಂಗ್ರಹಿಸಿಡದಿದ್ದರೆ ಮತ್ತೆ ಮೂರು ದಿನ ನೀರು ಇರುವುದಿಲ್ಲ. ಆದುದರಿಂದ ಗಂಡ ಅಥವಾ ಹೆಂಡತಿಯ ಪೈಕಿ ಯಾರಾದರೊಬ್ಬರು ನೀರು ಹಿಡಿದಿಡಲು ಕೆಲಸಕ್ಕೆ ರಜೆ ಮಾಡಲೇ ಬೇಕು.
Advertisement
ಟ್ಯಾಂಕರ್ ನೀರಿನಲ್ಲೂ ಇದೇ ಸಮಸ್ಯೆನೀರು ಪೂರೈಕೆ ಅವಧಿಯಲ್ಲೂ ನೀರು ಹೋಗದ ಎತ್ತರದ ಪ್ರದೇಶಗಳು ಸಹಿತ ಕೆಲವು ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಇಲ್ಲೂ ಟ್ಯಾಂಕರ್‌ಗಳು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯೊಳಗೆ ನೀರು ಸರಬರಾಜು ಮಾಡುತ್ತವೆ. ಈ ಅವಧಿಯಲ್ಲಿ ಉದ್ಯೋಗಸ್ಥ ಕುಟುಂಬಗಳ ಸದಸ್ಯರು ಕಚೇರಿಯಲ್ಲಿರುತ್ತಾರೆ. ಅದುದರಿಂದ ಈ ನೀರು ಅವರಿಗೆ ಪ್ರಯೋಜನಕ್ಕೆ ಬರುವುದಿಲ್ಲ. ಸಮಸ್ಯೆಗೆ ಪರಿಹಾರ ಎಂದರೆ ಬೆಳಗಿನ ಜಾವದಿಂದ ಆರಂಭಿಸಿ 8 ಗಂಟೆಯವರೆಗೆ ಹಾಗೂ ಸಂಜೆ 6 ಗಂಟೆಯಿಂದ ರಾತ್ರಿವರೆಗೆ ನೀರು ಪೂರೈಕೆಯಾದರೆ ಉದ್ಯೋಗಸ್ಥ ಕುಟುಂಬಗಳಿಗೂ ನೀರು ಲಭ್ಯವಾಗುತ್ತದೆ. ಒಟ್ಟಾರೆಯಾಗಿ ನೀರಿನ ಸರಬರಾಜು ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆ ಮಾಡಿದರೆ ಸಮಸ್ಯೆ ಪರಿಹರಿಸಲು ಸಾಧ್ಯ