Advertisement

ಗುಜರಾತ್‌, ಮಹಾರಾಷ್ಟ್ರ ಪರಿಸ್ಥಿತಿ ಕಳವಳಕಾರಿ: ಸಚಿವ

01:40 AM May 07, 2020 | Sriram |

ಗುಜರಾತ್‌ ಹಾಗೂ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಕೋವಿಡ್‌ 19 ಸೋಂಕಿತರು ಅತ್ಯಧಿಕ ಪ್ರಮಾಣದಲ್ಲಿ ಮರಣ ಹೊಂದುತ್ತಿರುವುದು ಕಳವಳಕಾರಿ ವಿಚಾರ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹೇಳಿದ್ದಾರೆ. ಈ ಎರಡೂ ರಾಜ್ಯಗಳು ಸೋಂಕಿತರ ಪತ್ತೆ, ಸಂಪರ್ಕಿತರ ಪತ್ತೆ ತ್ವರಿತಗೊಳಿಸುವ ಮೂಲಕ ಹೆಚ್ಚಿನ ಸಾವು ಸಂಭವಿಸದಂತೆ ತಡೆಯಬೇಕಿದೆ ಎಂದಿದ್ದಾರೆ.

Advertisement

ಬುಧವಾರ ಗುಜರಾತ್‌ ಡಿಸಿಎಂ ನಿತಿನ್‌ ಭಾಯಿ ಪಟೇಲ್‌, ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್‌ ಟೋಪೆ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಚರ್ಚಿಸಿದ ಹರ್ಷವರ್ಧನ್‌, ಉಸಿರಾಟದ ಸಮಸ್ಯೆ ಹಾಗೂ ಜ್ವರ ಇರುವವರನ್ನು ತ್ವರಿತವಾಗಿ ಸ್ಕ್ರೀನಿಂಗ್‌ ಪರೀಕ್ಷೆಗೆ ಒಳಪಡಿಸಬೇಕು. ಆಗ ಕೋವಿಡ್‌ 19 ವ್ಯಾಪಿಸುವುದನ್ನು ತಡೆ ಯಲು ಸಾಧ್ಯ. ಮರಣ ಪ್ರಮಾಣ ತಗ್ಗಿಸಬೇಕೆಂದರೆ, ರಾಜ್ಯಗಳು ಪರಿಣಾಮಕಾರಿ ಕಾರ್ಯತಂತ್ರಗಳನ್ನು ಅನುಷ್ಠಾನ ಮಾಡಬೇಕು. ಕೇಂದ್ರದ ಮಾರ್ಗ ಸೂಚಿಗಳನ್ನು ಪಾಲಿಸಿ ಹೊಸ ಪ್ರಕರಣ ಗಳು ಮರುಕಳಿಸದಂತೆ ತಡೆಯಬೇಕು. ವಾರ್ಡ್‌ ಮಟ್ಟದಲ್ಲಿ ಸಾಮುದಾಯಿಕ ಪ್ರತಿನಿಧಿಗಳನ್ನು ನೇಮಕ ಮಾಡಿ, ಕೋವಿಡ್‌ 19ನಿಯಂತ್ರಿ ಸುವ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next