Advertisement

ಅತ್ಯಾಚಾರ ಖಂಡಿಸಿ ಮೌನ ಮೆರವಣಿಗೆ

03:47 PM Apr 23, 2018 | Team Udayavani |

ಚಿಂಚೋಳಿ: ಜಮ್ಮು ಕಾಶ್ಮೀರ ರಾಜ್ಯದ ಕಣಿವೆಯಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದ  ಆರೋಪಿಗಳನ್ನು ಬಂಧಿಸಿ ಗಲ್ಲುಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಡಾ| ಅಬ್ದುಲ್‌ ಕಲಾಂ ವೆಲಫೇರ್‌ ಟಸ್ಟ್‌ ಮುಖಂಡರು ಹಾಗೂ ಗ್ರಾಮಸ್ಥರು ಮೇಣಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸಿ ಕೇಂದ್ರ ಸರಕಾರ ವಿರುದ್ಧ ಪ್ರತಿಭಟನೆ ನಡೆಸಿದರು. 

Advertisement

ರಾಜ್ಯಮುಕ್ತಿ  ಮೋರ್ಚಾ ಹಿರಿಯ ಮುಖಂಡ ಮಾರುತಿ ಗಂಜಗಿರಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ದೇಶದಲ್ಲಿ ಅನೇಕ ಕಡೆ ಬಾಲಕಿಯರ ಮೇಲೆ ಕಾಮುಕರು  ಅಟ್ಟಹಾಸ ನಡೆಸಿ ಅತ್ಯಾಚಾರ ನಡೆಸುತ್ತಿರುವುದು ಸಮಾಜ ತಲೆತಗ್ಗಿಸುವಂತೆ ಆಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 

ಪ್ರತಿಭಟನೆಯಲ್ಲಿ ತಾಪಂ ಮಾಜಿ ಸದಸ್ಯ ತಾಹೇರ ಪಟೇಲ, ಮೋಯಿಜ ಪಟೇಲ್‌, ಜಹಿರುದ್ದೀನ್‌ ಪಟೇಲ್‌, ರಜಾಕ ಪಟೇಲ್‌, ನಾಸೀರ ಮದರಗಿ, ಸುಲ್ತಾನ ಪಟೇಲ್‌  ಕೋಹಿರ,ಲಾಡಲೇಸಾಬ ತಾಂಡೂರ, ನಸೀರ ನಮಾಜಗಿ, ಆಶೀಫ ಬಾಗವಾನ, ಪ್ರವೀಣ ಕೋರಿ, ನವೀನಕುಮಾರ ಸಜ್ಜನ, ರಾಧಾಕೃಷ್ಣ, ಬಾಬು ಬುಗಡಿ,  ಸುರೇಶ, ಅಮೀರ ಕೋಹಿರ, ತೌಸೀಫ ಅಹ್ಮದ ಮೋಮಿನ ಇನ್ನಿತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next