Advertisement

ಎರಡನೇ ಮನೆಗೆ ಇನ್ನು ಸಿಗಲ್ಲ ತೆರಿಗೆ ವಿನಾಯ್ತಿ!

03:45 AM Feb 05, 2017 | |

ನವದೆಹಲಿ: ಈಗಾಗಲೇ ಒಂದು ಮನೆ ಇದೆ.. ಇನ್ನೊಂದು ಮನೆ ಖರೀದಿಗೆ ಹೊರಟಿದ್ದೀರಿ.. ಆದರೆ ಜೋಕೆ ಅದಕ್ಕೂ ಇನ್ನು ತೆರಿಗೆ ವಿನಾಯಿತಿ ಸಿಗಲಾರದು!

Advertisement

ಇಂತಹದ್ದೊಂದು ನೂತನ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಮಂಡಿಸಿದ್ದು, ಅದನ್ನು ಯಾವುದೇ ಕಾರಣಕ‌ೂ ವಾಪಸ್‌ ಪಡೆವ ಪ್ರಶ್ನೆಯೇ ಇಲ್ಲ ಎಂದೂ ಅದು ಹೇಳಿದೆ. 

2 ಲಕ್ಷ ಮೇಲ್ಪಟ್ಟು ಆದಾಯ ಹೊಂದಿದವರಿಗೆ ಎರಡನೇ ಮನೆ ಖರೀದಿ ವೇಳೆ ತೆರಿಗೆ ವಿನಾಯ್ತಿ ನೀಡುವುದಿಲ್ಲ. ಈ ವಿನಾಯ್ತಿಯನ್ನು ವಾಪಸ್‌ ಪಡೆವ ಪ್ರಸ್ತಾಪವೂ ಇಲ್ಲ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಹಸು¾ಖ್‌ ಅಧಿಯಾ ಸ್ಪಷ್ಟಪಡಿಸಿದ್ದಾರೆ. 

ಎರಡನೇ ಮನೆ ಖರೀದಿ ವೇಳೆ ತೆರಿಗೆ ವಿನಾಯ್ತಿಯನ್ನು ಸಾಲಗಾರರು ಬಹುತೇಕ ದುರುಪಯೋಗ ಪಡಿಸಿಕೊಳ್ಳುತ್ತಾರೆ. ಈ ತೆರಿಗೆ ವಿನಾಯ್ತಿ ಮೊದಲ ಬಾರಿ ಮನೆ ಖರೀದಿದಾರರಿಗೆ ಸೀಮಿತವಾಗಿದೆ ಎಂದವರು ಹೇಳಿದ್ದಾರೆ. 

2017ರ ಹಣಕಾಸು ಮಸೂದೆಯಡಿ ಹೊಸ ಶಿಫಾರಸು ಮಂಡಿಸಲು ಯೋಜಿಸಲಾಗಿದೆ. ಆದಾಯ ತೆರಿಗೆ ಸೆ.71ರ ಅನ್ವಯ 2 ಲಕ್ಷ ಮೇಲ್ಪಟ್ಟು ಆದಾಯ ಹೊಂದಿದವರು ಎರಡನೇ ಮನೆ ಖರೀದಿ ವೇಳೆ ತೆರಿಗೆ ವಿನಾಯ್ತಿ ನೀಡುವುದನ್ನು ನಿಷೇಧಿಸಲಾಗುತ್ತದೆ ಎಂದವರು ಹೇಳಿದ್ದಾರೆ. 

Advertisement

ಸರ್ಕಾರದ ಬಳಿ ಸಂಪನ್ಮೂಲಗಳು ಕಡಿಮೆ ಇವೆ. ಸರ್ಕಾರ ಮೊದಲ ಬಾರಿಗೆ ಮನೆ ಖರೀದಿದಾರರಿಗೆ ಮಾತ್ರ ತೆರಿಗೆ ವಿನಾಯ್ತಿ ನೀಡುತ್ತದೆ. ಎರಡನೇ ಬಾರಿ ಮನೆ ಖರೀದಿ ಮಾಡುವವರು ಅಗತ್ಯಕ್ಕೆ ಮಾಡುವುದರ ಹೊರತಾಗಿ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ಉದ್ದೇಶಕ್ಕೇ ಮಾಡಿರುತ್ತಾರೆ ಎಂದು ಬೊಟ್ಟು ಮಾಡಿದ್ದಾರೆ. 

ಪ್ರಸ್ತುತ ಎರಡನೇ ಮನೆ ಖರೀದಿದಾರರಿಗೆ ತೆರಿಗೆ ವಿನಾಯ್ತಿ ನೀಡಲಾಗುತ್ತಿಲ್ಲ. ಇದರಿಂದ ವ್ಯಕ್ತಿ ತೆರಿಗೆ ವಿನಾಯ್ತಿಯೊಂದಿಗೆ, ಮನೆಯನ್ನು ಬಾಡಿಗೆ ನೀಡಿ ಸಾಲದ ಮೇಲಿನ ಬಡ್ಡಿಯನ್ನು ಚುಕ್ತಾಮಾಡಿ ಕೆಲಸವನ್ನು ಸುಲಭ ಮಾಡಿಕೊಳ್ಳಬಹುದು. ಇದರಿಂದಾಗಿ ಪರೋಕ್ಷವಾಗಿ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಈ ಪ್ರಮಾಣ ಮೂರನೇ ಒಂದರಷ್ಟು ಆಗುತ್ತದೆ ಎಂದು ಅಧಿಯಾ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next