Advertisement

ರೈತರಿಂದ ಸಿಎಂಗೆ ಮುತ್ತಿಗೆ ಯತ್ನ

11:27 PM Oct 04, 2019 | Lakshmi GovindaRaju |

ಬೆಳಗಾವಿ: ನೆರೆ ಸಂತ್ರಸ್ತರ ನೋವು ಆಲಿಸಲು ಜಿಲ್ಲೆಗೆ ಬಂದಿರುವ ಮುಖ್ಯಮಂತ್ರಿಗಳ ಬೆಂಗಾವಲು ವಾಹನಕ್ಕೆ ಅಡ್ಡ ಮಲಗಲು ಮುಂದಾದ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಇಲ್ಲಿನ ಅತಿಥಿ ಗೃಹದಿಂದ ತೆರಳುತ್ತಿದ್ದ ಸಿಎಂ ಯಡಿಯೂರಪ್ಪ ವಿರುದ್ಧ ರೈತರು ಘೋಷಣೆ ಕೂಗುತ್ತಿದ್ದರು.

Advertisement

ತಮ್ಮ ಮನವಿ ಸ್ವೀಕರಿಸಲು ಮುಖ್ಯಮಂತ್ರಿ ಕೆಳಗೆ ಇಳಿದು ಬರಲಿಲ್ಲ ಎಂದು ಘೇರಾವ್‌ ಹಾಕಲು ಮುಂದಾದರು. ಅತಿಥಿ ಗೃಹದ ಗೇಟ್‌ ಬಳಿ ಬಂದ ರೈತರು ರಸ್ತೆ ಮೇಲೆ ಮಲಗಲು ಯತ್ನಿಸಿದರು. ಆಗ ಎಲ್ಲ ರೈತರನ್ನು ವಶಕ್ಕೆ ಪಡೆದುಕೊಂಡು ರಸ್ತೆ ಬದಿಗೆ ತಂದು ಬಿಟ್ಟರು. ರೈತ ಮಹಿಳೆ ಜಯಶ್ರೀ ಗುರವಣ್ಣವರ ಸೇರಿದಂತೆ ಇತರ ರೈತರನ್ನು ಎಳೆದುಕೊಂಡು ಬಂದು ಬಸ್‌ ಹತ್ತಿಸಲಾಯಿತು.

ಎಪಿಎಂಸಿ ಠಾಣೆಯಲ್ಲೂ ಪ್ರತಿಭಟನಾಕಾರರು ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಧಿಕ್ಕಾರ ಕೂಗಿದರು. ರೈತರ ಪರವಾಗಿದ್ದ 25 ಸಂಸದರು ನಮ್ಮ ಪಾಲಿಗೆ ಸತ್ತಿದ್ದಾರೆ. ಕೇಂದ್ರದಿಂದ ಪರಿಹಾರ ತರಲು ವಿಫಲರಾಗಿದ್ದಾರೆ. ಇಂಥ ಸರ್ಕಾರ ನಮಗೆ ಬೇಡ ಎಂದು ಬೊಬ್ಬೆ ಹಾಕುತ್ತ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಠಾಣೆಯಿಂದ 13 ರೈತರನ್ನು ಬಿಡುಗಡೆ ಮಾಡಲಾಯಿತು.

ಇದಕ್ಕೂ ಮುನ್ನ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿಗಳಿಗೆ ರೈತ ಮುಖಂಡರ ಇನ್ನೊಂದು ಗುಂಪು, ಬೆಳೆ ಹಾನಿ ಹಾಗೂ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿತು. ಉತ್ತರ ಕರ್ನಾಟಕದ ನಿರಾಶ್ರಿತರಿಗೆ ಸಮರ್ಪಕ ಪರಿಹಾರ ವಿತರಿಸುವ ಕಾರ್ಯ ಮಾಡುವಂತೆ ಆಗ್ರಹಿಸಿ ಘೋಷಣೆ ಕೂಗಿತು.

ಉರುಳಿ ಬಿದ್ದ ಸಿಎಂ ಭದ್ರತಾ ವಾಹನ: ಮೂವರಿಗೆ ಗಾಯ
ಬಾಗಲಕೋಟೆ: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ಸಿಎಂ ಯಡಿಯೂರಪ್ಪ ಅವರನ್ನು ಬೆಳಗಾವಿ-ಬಾಗಲಕೋಟೆ ಗಡಿಯಿಂದ ಜಿಲ್ಲೆಗೆ ಕರೆತರಲು ತೆರಳುತ್ತಿದ್ದ ಸಿಎಂ ಭದ್ರತಾ ವಾಹನ ಪಲ್ಟಿಯಾಗಿ ಪಿಎಸ್‌ಐ ಸೇರಿ ಮೂವರು ಗಾಯಗೊಂಡ ಘಟನೆ ಮುಧೋಳ ತಾಲೂಕಿನ ಸೈದಾಪುರ-ಕಪ್ಪಲಗುದ್ದಿ ಕ್ರಾಸ್‌ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಮುಖ್ಯಮಂತ್ರಿಗಳ ವಾಹನಕ್ಕೆ ಭದ್ರತೆ ನೀಡಲು ತೆರಳುತ್ತಿದ್ದ ಇಳಕಲ್ಲ ನಗರ ಠಾಣೆಯ ಪಿಎಸ್‌ಐ ಕುಮಾರ ಹಾಡಕರ, ಚಾಲಕ ಶಿವಾನಂದ ಕಟ್ಟಿಮನಿ ಹಾಗೂ ಮಹಾಲಿಂಗಪುರ ಠಾಣೆ ಪೇದೆ ಮಂಜುನಾಥ ರಾಠೊಡ ಗಾಯಗೊಂಡಿದ್ದು, ಅವರನ್ನು ಮಹಾಲಿಂಗಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next