Advertisement
“ಸ್ಥಾನಮಾನಗಳು ಬೇಕು ಎಂದು ಎಲ್ಲರೂ ಕೇಳುತ್ತಾರೆ. ಎಲ್ಲ ಪಕ್ಷಗಳಲ್ಲಿ ಇದು ಇದ್ದೇ ಇರುತ್ತದೆ. ಆಡಳಿತ ಪಕ್ಷ ವಾಗಿರುವುದರಿಂದ ನಮ್ಮ ಪಕ್ಷದಲ್ಲಿ ನಿರೀಕ್ಷೆಗಳು ಸಹಜ. ಹೆಚ್ಚುವರಿ ಡಿಸಿಎಂ ಹುದ್ದೆ ಅಗತ್ಯ ಇದೆಯೇ ಇಲ್ಲವೇ ಎಂಬಿ ತ್ಯಾದಿ ವಿಚಾರಗಳ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ನನಗೂ ಅದಕ್ಕೂ ಸಂಬಂಧವಿಲ್ಲ’ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
Related Articles
Advertisement
ಬೇಡ ಅನ್ನಲಾರೆ: ಆರ್.ಬಿ. ತಿಮ್ಮಾಪುರಬಾಗಲಕೋಟೆ: ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ಇದು ಸಿಎಂ, ಪಕ್ಷದ ಹೈಕಮಾಂಡ್ ಕೈಗೊಳ್ಳಬೇಕಾದ ನಿರ್ಧಾರ. ಯಾರಿಗೆ ಡಿಸಿಎಂ ಹುದ್ದೆ ಕೊಟ್ಟರೂ ಬೇಡ ಅನ್ನುವುದಿಲ್ಲ; ನಾನೂ ಕೂಡ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ, ಕೆಪಿಸಿಸಿ ಹಾಗೂ ಸಿಎಂ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಡಿಸಿಎಂ ಹುದ್ದೆ
ಯಿಂದಲೇ ಎಲ್ಲವೂ ಆಗುತ್ತದೆ ಎನ್ನುವು ದಾದರೆ ಸಿಎಂ ಬಿಟ್ಟು ಇಡೀ ಸಚಿವ ಸಂಪುಟ ಡಿಸಿಎಂ ಆಗಲಿ. ಪಕ್ಷದ ವರಿಷ್ಠರಿದ್ದಾರೆ, ಶಾಸಕಾಂಗ ಸಭೆ ಇರುತ್ತದೆ. ಸಿಎಂ ಹುದ್ದೆಯನ್ನೂ ಕೇಳಲಿ. ಎಲ್ಲಿ ಕೇಳಬೇಕೋ ಅಲ್ಲಿ ಮಾತನಾಡಲಿ
-ಪ್ರಿಯಾಂಕ್ ಖರ್ಗೆ, ಸಚಿವರು