Advertisement

ಸಿದ್ದು-ಡಿಕೆಶಿ ಬಣ ಇರೋದು ನಿಜ: ಸತೀಶ

10:58 PM Mar 13, 2020 | Lakshmi GovindaRaj |

ಬೆಳಗಾವಿ: ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಣ ಮತ್ತು ಡಿ.ಕೆ.ಶಿವಕುಮಾರ ಬಣ ಇರುವುದು ಸತ್ಯ. ಆದರೆ, ಪಕ್ಷದ ವಿಚಾರ ಬಂದಾಗ ಎಲ್ಲರೂ ಒಂದಾಗುತ್ತೇವೆ ಎಂದು ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ಬಣಗಳಿರುವುದು ಸತ್ಯ.

Advertisement

ಹಾಗೆಂದು ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ಇಬ್ಬರೂ ಪ್ರಭಾವಿ ನಾಯಕರು. ಅವರ ನಡುವೆ ಭಿನ್ನಾಭಿಪ್ರಾಯವಿಲ್ಲ. ಎಲ್ಲರ ಸಮ್ಮುಖದಲ್ಲಿಯೇ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಪಕ್ಷವನ್ನು ಮುನ್ನಡೆಸುತ್ತೇವೆ. ಮನೆ ಎಂದ ಮೇಲೆ ಕೆಲವರಲ್ಲಿ ವೈಮನಸ್ಸು ಇರುವುದು ಸಹಜ. ಚುನಾವಣೆ ಸಂದರ್ಭ ಟಿಕೆಟ್‌ಗಾಗಿ ಗುಂಪುಗಾರಿಕೆ ನಡೆಯುತ್ತದೆ.

ಇದು ಎಲ್ಲಾ ಪಕ್ಷದಲ್ಲೂ ಇದೆ. ವಿಧಾನಸಭೆ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಅಲ್ಲಿಯವರೆಗೆ ಪಕ್ಷವನ್ನು ಸಂಘಟಿಸಿ ಮರಳಿ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇವೆ ಎಂದರು.ಡಿ.ಕೆ.ಶಿವಕುಮಾರ ಅವರಲ್ಲಿ ಉತ್ಸಾಹ ಇದೆ. ಬರುವ ವಿಧಾನಸಭೆ ಚುನಾವಣೆ ಯನ್ನು ಗಮನದಲ್ಲಿಟ್ಟುಕೊಂಡು ಮೂವರು ಕಾರ್ಯಾಧ್ಯಕ್ಷರು ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ.

ದಲಿತ ಸಮುದಾಯದ ನಾಯಕರೊಬ್ಬರು ಕಾರ್ಯಾಧ್ಯಕ್ಷರಾಗ ಬೇಕು ಎಂಬ ಬೇಡಿಕೆ ಇದೆ. ಹೈಕಮಾಂಡ್‌ ಯಾವ ರೀತಿ ತೀರ್ಮಾನ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕು ಎಂದರು. ಇದೇ ವೇಳೆ, ತಮಗೆ ಈ ಹುದ್ದೆ ನೀಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಸಿದ್ದರಾಮಯ್ಯ ಅವರಿಗೆ ಅವರು ಧನ್ಯವಾದ ಅರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next