Advertisement
ಬೃಹತ್ ಮಾಲ್‌ಗಳಲ್ಲಿ ತಮ್ಮ ಅಂಗಡಿ, ಶೋ ರೂಮ್ ಆರಂಭಿಸಿರುವ ಹಾಗೂ ದೇಶಾದ್ಯಂತ ಸಾಕಷ್ಟು ಮಳಿಗೆಗಳನ್ನು ಹೊಂದಿರುವ ಕಂಪನಿಗಳು, ಲಾಕ್‌ಡೌನ್ ಅವಧಿ ಮುಗಿದ ತಕ್ಷಣ ಮಳಿಗೆ ಆರಂಭಿಸಲು ಸಜ್ಜಾಗಿವೆ. ಲಾಕ್‌ಡೌನ್ ಮುಗಿಯಿತು ಅಂದಾಕ್ಷಣ ಕೊರೊನಾ ಹೆಮ್ಮಾರಿ ದೂರವಾಗಿದೆ ಎಂದು ಅರ್ಥವಲ್ಲ, ಮುಂದಿನ ಕೆಲವು ತಿಂಗಳ ಕಾಲ ಎಲ್ಲರೂ ದೈಹಿಕ ಅಂತರ ಕಾಯ್ದುಕೊಳ್ಳಲೇಬೇಕು, ಇಲ್ಲವಾದರೆ, ಭಾರೀ ಅನಾಹುತ ಆಗಲಿದೆ ಎಂದು ಈಗಾಗಲೇ ವೈದ್ಯರು ಎಚ್ಚರಿಸಿದ್ದಾರೆ. ಇದನ್ನೆಲ್ಲಾ ಗಮನಿಸಿರುವ ಹಲವು ಕಂಪನಿಗಳು, ಸಾಕಷ್ಟು ಬದಲಾವಣೆಗಳೊಂದಿಗೆ ಕೆಲಸ ಆರಂಭಿಸಲು ಸಜ್ಜಾಗಿವೆ. ಅದರಂತೆ…
Related Articles
Advertisement
* ಬಟ್ಟೆ ಹಾಗೂ ಶೂ ಖರೀದಿಸಿದರೆ, ಅದು ಸರಿಹೊಂದುವುದೇ ಇಲ್ಲವೇ ಎಂದು ಟ್ರಯಲ್ ರೂಮ್ ನಲ್ಲಿ ಚೆಕ್ ಮಾಡಿ ನೋಡಬಹುದಿತ್ತು. ಇನ್ನು ಮುಂದೆ, ಟ್ರಯಲ್ ರೂಮ್ ಗಳನ್ನ ರದ್ದು ಪಡಿಸಿ, ಮನೆಗೇ ಒಯ್ದು ಚೆಕ್ ಮಾಡುವ ಅವಕಾಶ ದೊರೆಯಲಿದೆ.
* ಒಮ್ಮೆಗೇ ಹೆಚ್ಚು ಜನ ಬರದಂತೆ ತಡೆಯಲು, ಮೊದಲೇ ಅಪಾಯಿಂಟ್‌ಮೆಂಟ್ ಪಡೆದು ಬರುವಂತೆ, ಗ್ರಾಹಕರಿಗೇ ಫೋನ್ ಮಾಡಿ ತಿಳಿಸುವ ವ್ಯವಸ್ಥೆ ಆರಂಭಿಸಲೂ ಉದ್ದೇಶಿಸಲಾಗಿದೆ.
* ಕ್ಯಾಶ್ ಕೌಂಟರ್‌ನಲ್ಲಿ ಕುಳಿತವರು ಹೆಚ್ಚಾಗಿ ಗ್ರಾಹಕರ ಜೊತೆ ಮಾತಾಡಬೇಕಾದ ಅನಿವಾರ್ಯತೆ ಇರುತ್ತದೆ. ಅವರ ಸುರಕ್ಷತೆಯ ಉದ್ದೇಶದಿಂದ, ಗ್ರಾಹಕ ಮತ್ತು ಕ್ಯಾಶಿಯರ್ ಮಧ್ಯೆ ದಪ್ಪ ಗ್ಲಾಸ್ ಹಾಕಲೂ ಉದ್ದೇಶಿಸಲಾಗಿದೆ.
* ಮಾಲ್‌ಗಳಲ್ಲಿ ಮಳಿಗೆ ಹೊಂದಿರುವವರೇನೋ ಹೀಗೆ ಮಾಡುತ್ತಾರೆ ನಿಜ. ಆದರೆ, ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅಥವಾ ದಾವಣಗೆರೆ, ಗದಗ್‌ನಂಥ ಸಿಟಿಯಲ್ಲಿ ಅಂಗಡಿ ಹೊಂದಿರುವವರು ಏನು ಮಾಡುತ್ತಾರೆ ಎಂಬುದು ಸದ್ಯಕ್ಕೆ ಉತ್ತರವಿಲ್ಲದ ಪ್ರಶ್ನೆ.