Advertisement

ಅಧಿಕಾರಿಗಳಿಂದ ಅಂಗಡಿ ಮುಂಗಟ್ಟು ಬಂದ್‌

04:39 PM Apr 24, 2021 | Team Udayavani |

ಕಂಪ್ಲಿ: ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆ ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿದ ಹೊಸ ಮಾರ್ಗಸೂಚಿಯಂತೆ ಅಗತ್ಯ ಸೇವೆಯ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತಹಶೀಲ್ದಾರ್‌ ಗೌಸಿಯಾಬೇಗಂ ನೇತೃತ್ವದಲ್ಲಿ ಸಿಪಿಐ ಸುರೇಶ್‌ ಎಚ್‌. ತಳವಾರ್‌, ಪಿಎಸ್‌ಐ ವಿರೂಪಾಕ್ಷಪ್ಪ ಅವರ ಖಾಕಿ ಸರ್ಪ ಗಾವಲಿನಲ್ಲಿ ಶುಕ್ರವಾರ ಬಂದ್‌ ಮಾಡಿಸಲಾಯಿತು. ಬೆಳಗ್ಗೆ 11ಗಂಟೆ ಸುಮಾರಿಗೆ ತಹಶೀಲ್ದಾರ್‌ ಹಾಗೂ ಸಿಪಿಐ ಮತ್ತು ಪಿಎಸ್‌ಐ ಅವರು ಖಾಕಿ ಪಡೆಯ ನೇತೃತ್ವದಲ್ಲಿ ಕಂಪ್ಲಿಯ ಡಾ| ರಾಜಕುಮಾರ್‌ ಮುಖ್ಯರಸ್ತೆ, ನಡುವಲ ಮಸೀದಿ, ಅಂಬೇಡ್ಕರ್‌ ವೃತ್ತ, ಕೊಟ್ಟಾಲ್‌ ರಸ್ತೆ ಸೇರಿದಂತೆ ಇನ್ನಿತರ ಕಡೆಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ, ಅಂಗಡಿಗಳನ್ನು ಬಂದ್‌ ಮಾಡಿಸಿದರು.

Advertisement

ಸರ್ಕಾರದ ನಿಯಮವನ್ನು ಲೆಕ್ಕಿಸದೇ ತೆರೆದಿದ್ದ ಅಂಗಡಿಗಳ ಮಾಲೀಕರಿಗೆ ದಂಡ ಹಾಕಲಾಗಿದೆ. ವಾರಾಂತ್ಯದ ಶನಿವಾರ ಮತ್ತು ಭಾನುವಾರ ಸಂಪೂರ್ಣವಾಗಿ ಕೊರೊನಾ ಕರ್ಫ್ಯೂ ಜಾರಿಯಲ್ಲಿರುತ್ತದೆ. ಶುಕ್ರವಾರ ರಾತ್ರಿ 9ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗಿನ ಕರ್ಫ್ಯೂ ಮಧ್ಯದಲ್ಲಿ ಸಾರ್ವಜನಿಕರ ಓಡಾಟ ನಿಷೇಧಿ  ಸಿದೆ. ಎರಡು ದಿನ ಬೆಳಿಗ್ಗೆ 6ರಿಂದ 10ಗಂಟೆವರೆಗೆ ಅಗತ್ಯ ಅಂಗಡಿಗಳು ತೆರೆದಿರುತ್ತವೆ. ನಂತರ ಎಲ್ಲ ಅಂಗಡಿಗಳನ್ನು ಬಂದ್‌ ಮಾಡಲಾಗುತ್ತದೆ. ಹೀಗಾಗಿ ಕಂಪ್ಲಿಯ ಜನರು ಕೊರೊನಾ ನಿಯಂತ್ರಣಕ್ಕಾಗಿ ಸಹಕಾರ ನೀಡಬೇಕು.

ಕೊರೋನಾ ನಿಯಮಗಳನ್ನು ಪಾಲಿಸಬೇಕು ಎಂದರು. ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್‌ ಬಿ. ರವೀಂದ್ರಕುಮಾರ್‌, ಕಂದಾಯ ಅ ಧಿಕಾರಿ ಎ. ಗಣೇಶ್‌, ಕ್ರೈಂ ಪಿಎಸ್‌ಐ ಬಸಪ್ಪ ಲಮಾಣಿ, ಎಎಸ್‌ಐಗಳಾದ ಸಿ.ಪರಶುರಾಮ, ಹಗರಪ್ಪ, ತ್ಯಾಗರಾಜ, ಮಾರೇಶ ಸೇರಿ ಖಾಕಿ ಪಡೆಯ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next