Advertisement

ಭಾರತದ ವೇಗದ ಓಟಗಾರ್ತಿ ದ್ಯುತಿ ಚಾಂದ್‌ಗೆ ಆಘಾತಕಾರಿ ಸುದ್ದಿ

10:22 AM Jul 05, 2017 | Team Udayavani |

ನವದೆಹಲಿ: ಭಾರತದ ಖ್ಯಾತ ವೇಗದ ಓಟಗಾರ್ತಿ ದ್ಯುತಿ ಚಾಂದ್‌ಗೆ ಮತ್ತೂಂದು ಆಘಾತಕಾರಿ ಸುದ್ದಿ. ಅವರ ಶರೀರದಲ್ಲಿ ಪುರುಷರ ಶರೀರದಲ್ಲಿರುವಂತಹ ಆಂಡ್ರೋಜನ್‌ ಹಾರ್ಮೋನ್‌ ಪ್ರಮಾಣ ಹೆಚ್ಚಿದೆ ಎಂದು ಆರೋಪಿಸಿರುವ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಸಮಿತಿ (ಐಎಎಎಫ್), ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದೆ. ಇದೇ ಕಾರಣಕ್ಕೆ 2014ರಲ್ಲಿ ಅವರನ್ನು ಭಾರತದ ಕಾಮನ್‌ವೆಲ್ತ್‌ ತಂಡದಿಂದ ಕೈಬಿಡಲಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

ಕಾಮನ್‌ವೆಲ್ತ್‌ ತಂಡದಿಂದ ಕೈಬಿಟ್ಟ ನಂತರ ದೀರ್ಘ‌ಕಾಲ ದ್ಯುತಿ ವೇಗದ ಓಟದಿಂದ ಹೊರಗುಳಿಯುವಂತಾಗಿತ್ತು.
ಆದ್ದರಿಂದ ಅವರು ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯದ ಮೆಟ್ಟಿಲೇರಿದ್ದರು. 2015, ಜು.27ರಂದು ತೀರ್ಪು ನೀಡಿದ್ದ ನ್ಯಾಯಾಲಯ 2 ವರ್ಷಗಳ ಮಟ್ಟಿಗೆ ದ್ಯುತಿ ಮೇಲಿನ ನಿಷೇಧವನ್ನು ತೆರವು ಮಾಡಿತ್ತು. ಇದೀಗ ದ್ಯುತಿ ಭುವನೇಶ್ವರದಲ್ಲಿ ಜು.6ರಿಂದ ನಡೆಯಲಿರುವ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌ಗೆ ಸಿದ್ಧವಾಗುತ್ತಿದ್ದಾರೆ. ಈ ಸಂತಸದ ನಡುವೆಯೇ ಹಲವು ಸಾಕ್ಷಿಗಳನ್ನು ಸಿದ್ಧ ಮಾಡಿಕೊಂಡು ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಸಂಸ್ಥೆ ಕ್ರೀಡಾ ನ್ಯಾಯಾಲಯದಲ್ಲಿ ತೀರ್ಪನ್ನು ಪ್ರಶ್ನಿಸಲು ನಿರ್ಧರಿಸಿದೆ.

ಆಂಡ್ರೋಜನ್‌ನಿಂದೇನು ಸಮಸ್ಯೆ?: ದ್ಯುತಿ ಶರೀರದಲ್ಲಿ ಪುರುಷರ ಶರೀರದಲ್ಲಿರುವ ಆಂಡ್ರೋಜನ್‌ ಹಾರ್ಮೋನ್‌
ಪ್ರಮಾಣ ಹೆಚ್ಚಿದೆ. ಇದರಿಂದ ಆಕೆ ಮಾಮೂಲಿ ಮಹಿಳೆಗಿಂತ ಉತ್ತಮವಾಗಿ ಓಡಲು ಸಾಧ್ಯವಾಗುತ್ತದೆ. ಸಾಮಾನ್ಯ
ಮಹಿಳೆಯರಲ್ಲಿ ಕಂಡುಬರುವ ಟೆಸ್ಟೊಸ್ಟೆರನ್‌ಗಿಂತ ಆಂಡ್ರೋಜನ್‌ ಇರುವವರು ಮೇಲುಗೈ ಸಾಧಿಸುತ್ತಾರೆಂದು
ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಸಂಸ್ಥೆ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next