ನ್ಯೂಯಾರ್ಕ್: ಹಾಲಿ ಚಾಂಪಿಯನ್ ಮತ್ತು ಅಗ್ರ ಶ್ರೇಯಾಂಕದ ನವೋಮಿ ಒಸಾಕಾ, ದ್ವಿತೀಯ ಶ್ರೇಯಾಂಕದ ಆ್ಯಶ್ಲೆ ಬಾರ್ಟಿ ಅವರು ಪ್ರೀ-ಕ್ವಾರ್ಟರ್‌ಫೈನಲ್ನಲ್ಲಿ ಆಘಾತಕಾರಿ ಸೋಲನ್ನು ಕಂಡಿದ್ದಾರೆ. ಇದೇ ವೇಳೆ ಆರು ಬಾರಿಯ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಸುಲಭ ಗೆಲುವಿನೊಂದಿಗೆ ಕ್ವಾರ್ಟರ್‌ಫೈನಲ್ ಹಂತಕ್ಕೇರಿದ್ದಾರೆ. ಅವರ ಜತೆ ಕ್ರೊವೇಶಿಯದ ಡೊನಾ ವೆಕಿಕ್, ಬೆಲಿಂಡಾ ಬೆನ್ಸಿಕ್, ಎಲಿನಾ ಸ್ವಿಟೋಲಿನಾ ತಮ್ಮ ಎದುರಾಳಿಯೆದುರು ಜಯ ಸಾಧಿಸಿ ಮುನ್ನಡೆದಿದ್ದಾರೆ.
ಈ ವರ್ಷ ಅಮೋಘ ಆಟದ ಪ್ರದರ್ಶನ ನೀಡುತ್ತ ಬಂದಿರುವ ಸ್ವಿಜರ್‌ಲ್ಯಾಂಡಿನ ಬೆಲಿಂಡಾ ಬೆನ್ಸಿಕ್ ಅವರು 21ರ ಹರೆಯದ ಜಪಾನಿನ ತಾರೆ ನವೋಮಿ ಒಸಾಕಾ ಅವರಿಗೆ ನೇರ ಸೆಟ್‌ಗಳ ಆಘಾತವಿಕ್ಕಿದರು. ಈ ಸೋಲಿನ ಆಘಾತದಿಂದ ಒಸಾಕಾ ಮುಂದಿನ ವಾರ ಪ್ರಕಟವಾಗುವ ನೂತನ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂಬರ್ ವನ್ ಸ್ಥಾನವನ್ನೂ ಕಳೆದುಕೊಳ್ಳಲಿದ್ದಾರೆ.
ಅಗ್ರ ಶ್ರೇಯಾಂಕದ ಒಸಾಕಾ ಅವರನ್ನು 7-5, 6-4 ಸೆಟ್‌ಗಳಿಂದ ಉರುಳಿಸಿದ ಬೆನ್ಸಿಕ್ ಕ್ವಾರ್ಟರ್‌ಫೈನಲ್ನಲ್ಲಿ ಡೊನಾ ವೆಕಿಕ್ ಅವರ ಸವಾಲನ್ನು ಎದುರಿಸಲಿದ್ದಾರೆ. ಈ ವರ್ಷ ಬೆನ್ಸಿಕ್ ಅವರು ಒಸಾಕಾ ಅವರನ್ನು ಮೂರನೇ ಬಾರಿ ಸೋಲಿಸಿ ತನ್ನ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸಿದ್ದಾರೆ.
ಒಸಾಕಾ ಅವರ ನಿರ್ಗಮನ ದಿಂದಾಗಿ ಸತತ ಮೂರನೇ ವರ್ಷ ಬೇರೆ ಬೇರೆ ವನಿತೆಯರು ವರ್ಷದ ನಾಲ್ಕು ಗ್ರ್ಯಾನ್ ಸ್ಲಾಮ್‌ಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
Advertisement
ಬೆನ್ಸಿಕ್ ಅದ್ಭುತ ಆಟ
Related Articles
Advertisement
ಬಾರ್ಟಿಗೆ ಸೋಲು
ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಆಗಿರುವ ಆಸ್ಟ್ರೇಲಿಯದ ಆ್ಯಶ್ಲೆ ಬಾರ್ಟಿ ಅವರು ಚೀನದ ವಾಂಗ್ ಕಿಯಾಂಗ್ ಕೈಯಲ್ಲಿ ಸೋತು ಆಘಾತಕ್ಕೆ ಒಳಗಾಗಿದ್ದಾರೆ. 23ರ ಹರೆಯದ ಬಾರ್ಟಿ ಹಲವು ತಪ್ಪುಗಳನ್ನು ಮಾಡಿ ಪಂದ್ಯವನ್ನು 2-6, 4-6 ಸೆಟ್‌ಗಳಿಂದ ಸೋತರು. ಬಾರ್ಟಿ ಇಲ್ಲಿ ಸೋತರೂ ಮುಂದಿನ ವಾರ ಪ್ರಕಟವಾಗುವ ನೂತನ ರ್‍ಯಾಂಕಿಂಗ್‌ನಲ್ಲಿ ನಂಬರ್ ವನ್ ಸ್ಥಾನಕ್ಕೇರಲಿದ್ದಾರೆ. ಕಳೆದ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ಬಾರ್ಟಿ ಫ್ರೆಂಚ್ ಓಪನ್ ಜಯಿಸಿದ್ದರು.
ಬೆಲಿಂಡಾ ಬೆನ್ಸಿಕ್
ಆರು ಬಾರಿಯ ಚಾಂಪಿಯನ್ ಆತಿಥೇಯ ನಾಡಿನ ಸೆರೆನಾ ವಿಲಿಯಮ್ಸ್ ಅವರು ಕ್ರೊವೇಶಿಯದ ಪೆಟ್ರಾ ಮಾರ್ಟಿಕ್ ಅವರನ್ನು 6-3, 6-4 ನೇರ ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ಕ್ವಾರ್ಟರ್‌ಫೈನಲ್ನಲ್ಲಿ 37ರ ಹರೆಯದ ಸೆರೆನಾ ಅವರು ವಾಂಗ್ ಕಿಯಾಂಗ್ ಅವರನ್ನು ಎದುರಿಸಲಿದ್ದಾರೆ. ವಾಂಗ್ ಈ ಹಿಂದಿನ ಪಂದ್ಯದಲ್ಲಿ ಬಾರ್ಟಿ ಅವರನ್ನು ಸೋಲಿಸಿದ ಸಾಧನೆ ಮಾಡಿದ್ದಾರೆ. ತನ್ನ ಬಾಳ್ವೆಯಲ್ಲಿ 24ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿರುವ ಸೆರೆನಾ ಅವರಿಗೆ ವಾಂಗ್ ಯಾವ ರೀತಿಯ ಉತ್ತರ ನೀಡುತ್ತಾರೆಂದು ಕಾದು ನೋಡಬೇಕಾಗಿದೆ.
ಇನ್ನೊಂದು ಪಂದ್ಯದಲ್ಲಿ 23ರ ಹರೆಯದ ಡೊನಾ ವೆಟಿಕ್ ಅವರು ಜರ್ಮನಿಯ ಜೂಲಿಯಾ ಜಾರ್ಜಸ್ ಅವರನ್ನು 6-7 (5-7), 7-5, 6-3 ಸೆಟ್‌ಗಳಿಂದ ಸೋಲಿಸಿ ಅಂತಿಮ ಎಂಟರ ಸುತ್ತಿಗೆ ತಲುಪಿದ್ದಾರೆ. ಅಲ್ಲಿ ಅವರು ಒಸಾಕಾ ಅವರನ್ನು ಕೆಡಹಿದ ಬೆನ್ಸಿಕ್ ಅವರ ಸವಾಲನ್ನು ಎದುರಿಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಎಲಿನಾ ಸ್ವಿಟೋಲಿನಾ ಅವರು ಅಮೆರಿಕದ ಮ್ಯಾಡಿಸನ್ ಕೀಸ್ ಅವರನ್ನು 7-5, 6-4 ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿದರು.
ಸೆರೆನಾ ಕ್ವಾರ್ಟರ್‌ಫೈನಲಿಗೆ
ಆರು ಬಾರಿಯ ಚಾಂಪಿಯನ್ ಆತಿಥೇಯ ನಾಡಿನ ಸೆರೆನಾ ವಿಲಿಯಮ್ಸ್ ಅವರು ಕ್ರೊವೇಶಿಯದ ಪೆಟ್ರಾ ಮಾರ್ಟಿಕ್ ಅವರನ್ನು 6-3, 6-4 ನೇರ ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಕ್ವಾರ್ಟರ್‌ಫೈನಲ್ನಲ್ಲಿ 37ರ ಹರೆಯದ ಸೆರೆನಾ ಅವರು ವಾಂಗ್ ಕಿಯಾಂಗ್ ಅವರನ್ನು ಎದುರಿಸಲಿದ್ದಾರೆ. ವಾಂಗ್ ಈ ಹಿಂದಿನ ಪಂದ್ಯದಲ್ಲಿ ಬಾರ್ಟಿ ಅವರನ್ನು ಸೋಲಿಸಿದ ಸಾಧನೆ ಮಾಡಿದ್ದಾರೆ. ತನ್ನ ಬಾಳ್ವೆಯಲ್ಲಿ 24ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿರುವ ಸೆರೆನಾ ಅವರಿಗೆ ವಾಂಗ್ ಯಾವ ರೀತಿಯ ಉತ್ತರ ನೀಡುತ್ತಾರೆಂದು ಕಾದು ನೋಡಬೇಕಾಗಿದೆ. ಇನ್ನೊಂದು ಪಂದ್ಯದಲ್ಲಿ 23ರ ಹರೆಯದ ಡೊನಾ ವೆಟಿಕ್ ಅವರು ಜರ್ಮನಿಯ ಜೂಲಿಯಾ ಜಾರ್ಜಸ್ ಅವರನ್ನು 6-7 (5-7), 7-5, 6-3 ಸೆಟ್‌ಗಳಿಂದ ಸೋಲಿಸಿ ಅಂತಿಮ ಎಂಟರ ಸುತ್ತಿಗೆ ತಲುಪಿದ್ದಾರೆ. ಅಲ್ಲಿ ಅವರು ಒಸಾಕಾ ಅವರನ್ನು ಕೆಡಹಿದ ಬೆನ್ಸಿಕ್ ಅವರ ಸವಾಲನ್ನು ಎದುರಿಸಲಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ಎಲಿನಾ ಸ್ವಿಟೋಲಿನಾ ಅವರು ಅಮೆರಿಕದ ಮ್ಯಾಡಿಸನ್ ಕೀಸ್ ಅವರನ್ನು 7-5, 6-4 ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿದರು.