Advertisement
ದೇವಾಲಯದ ವೈವಿಧ್ಯ, ವಿಶೇಷತೆಗಳು ವಾಸ್ತು ವಿಶೇಷಜ್ಞರಾದ ವರಾಹಮಿಹಿರರ ಪ್ರಕಾರ ದೇವಾಲಯಗಳಲ್ಲಿ ಸುಮಾರು ಇಪ್ಪತ್ತು ಪ್ರಕಾರದ ವೈವಿಧ್ಯ ವಿಶೇಷಗಳಿವೆ. ವರಾಹ ಮಿಹಿರಾಚಾರ್ಯರು ಈ ಎಲ್ಲಾ ಪ್ರಭೇದಗಳನ್ನು ಒಟ್ಟಂದದಲ್ಲಿ ಜೀವ ಜೀವದ ಪೋಷಣೆಗೆ, ಉತ್ಸಾಹ ಚೈತನ್ಯಗಳಿಗೆ ಕಾರಣವಾಗುವ ಹಾಗೆ ವಿಂಗಡಿಸುತ್ತಾರೆ. ಪ್ರತಿ ಊರಿನ ಮಣ್ಣು ,ನೀರು, ಹವಾಮಾನಗಳನ್ನು ಅನುಸರಿಸಿ ಆಚಾರ್ಯರು ಈ ವಿಂಗಡಣೆ ಮಾಡಿದ್ದಾರೆ. ದೇವಾಲಯಗಳಲ್ಲಿ ಮೇರು, ಮಂದರ, ಕೈಲಾಸ, ವಿಮಾನ ಛಂದ, ನಂದನ, ಸಮುದ್ರ, ಪದ್ಮ, ಗರುಡ, ನಂದಿ ವರ್ಧನ, ಕುಂಜರ, ಗುಹರಾಜ, ವೃಕ್ಷ, ಹಂಸ, ಸರ್ವತೋಭದ್ಯ, ಘಟ, ಸಿಂಹ, ವೃತ್ತ, ಚತುಷೊRàಣ, ಷೋಡಶಾಸಿŒ, ಅಷ್ಟಾಸ್ತಿ ಎಂದು ವಿಂಗಡಣೆ ಮಾಡಿದ್ದಾರೆ.
ಸಮುದ್ರ ಕಿನಾರೆಯ ಗುಂಟವನ್ನು ಕಲ್ಪಿಸಿಕೊಳ್ಳಿ. ಹೊಳೆಯ ದಡ ಎಂದೂ ತಿಳಿದುಕೊಳ್ಳಿ. ಈ ಕಡಲ ಅಥವಾ ಹೊಳೆಯ ದಕ್ಷಿಣಭಾಗದಲ್ಲಿ ಭತ್ತ ಮತ್ತು ಧಾನ್ಯಗಳನ್ನು ಬೆಳೆಯುವ ವಿಶೇಷತೆ ಇರಬೇಕು. ಪಶ್ಚಿಮದಲ್ಲಿ ಯಜ್ಞ, ಹವನಾದಿಗಳಿಗೆ ಅವಶ್ಯವಾದ ಸಮೀರ, ಹುಲ್ಲು ದರ್ಬೆಗಳನ್ನು ಬೆಳೆಯುವ ಭೌಗೋಳಿಕ ಗುಣಗಳು ಅಡಕಗೊಂಡಿರಬೇಕು. ರಸವಂತಿಕೆಯ ಹೂ ಹಣ್ಣುಗಳು ಕೂಡಾ ಫಲ ಬಿಡುವಂತೆ ಇರಬೇಕು. ಇಂಥ ಭೂಮಿ “ಭದ್ರಾ’ ಎಂಬುದಾಗಿ ಗುರುತಿಸಲ್ಪಡುತ್ತದೆ. ಈ ರೀತಿಯ ಭೂಮಿಯಿದ್ದಾಗ ಪ್ರಾಕೃತಿಕವಾಗಿ ಒದಗುವ ಸಂಪನ್ನತೆಯನ್ನು ಗಮನಿಸಿ ಯಾವುದೇ ದೇವಾಲಯಗಳನ್ನು ಕಟ್ಟಲು ಅನುಕೂಲವಾಗುತ್ತದೆ. ಅಲೌಕಿಕತೆ ತಂತಾನೇ ತನ್ನ ನೆಲೆಯನ್ನು ಪಡೆಯುತ್ತದೆ. ಅರಳಿ, ಆಲ, ಮುತ್ತುಗ, ಹೊನ್ನೆ, ಅಶೋಕ, ಮಾವು, ಹಲಸು, ಮುಂತಾಗಿ ಹಲವು ಹತ್ತು ಹದಿನೆಂಟು ವಿಶಿಷ್ಟ ವೃಕ್ಷಗಳು, ಕರವೀರ, ಸಂಪಿಗೆ, ಜಾಜಿ, ಮಲ್ಲಿಗೆ, ಮುತ್ತುಗ, ದ್ರೋಣ ಪುಷ್ಪಗಳು ದೇವಾಲಯದ ನೆಲೆಗೆ, ಅವಶ್ಯವಾದ ಅಧ್ಯಾತ್ಮದ ಮೊಳಕೆಗಳಿಗೆ ಸೂಕ್ತ “ಪೂರ್ಣತೆ’ಯನ್ನು ಒದಗಿಸುವ ದಿವ್ಯ ಅಂಶಗಳಾಗುತ್ತವೆ. ಒಟ್ಟಿನಲ್ಲಿ ನೆಲದ ಫಲವಂತಿಕೆಯಿಂದ ದೈವತ್ವದ ಆವರಣಗಳಿಗೆ ಸಿದ್ಧಿ ಸಿಗುತ್ತದೆ.
Related Articles
Advertisement
ಮೊ: 8147824707– ಅನಂತಶಾಸ್ತ್ರಿ