Advertisement
ಕೃಷಿಕರಿಗೆ ಹರ್ಷ..!ಈ ಬಾರಿ ಉತ್ತಮ ಮಳೆಯಾದ್ದರಿಂದ ಶಾಂಭವಿ ನದಿಯಲ್ಲಿ ನೀರಿನ ಪ್ರಮಾಣ ಈ ಹಿಂದಿನ ವರ್ಷಗಳಿಗಿಂತ ಅಧಿಕವಾಗಿದೆ. ಸಚ್ಚೇರಿಪೇಟೆ, ಕಡಂದಲೆಯವರೆಗೂ ನೀರು ಏರಿದ್ದು ಮುಂಡ್ಕೂರು, ಸಂಕಲಕರಿಯ, ಏಳಿಂಜೆ, ಐಕಳ,ಪೊಸ್ರಾಲು, ಕೊಟ್ರಪಾಡಿ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಆಧಿಕವಾಗಿದೆ, ಈ ಭಾಗದ ಮನೆಯ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗಿದ್ದು ಜನರಲ್ಲಿ ಸಂತಸಕ್ಕೆ ಕಾರಣವಾಗಿದೆ. ಇದೇ ರೀತಿಯ ನೀರಿನ ಒರತೆ ಉಳಿದಲ್ಲಿ ಮುಂದಿನ ಬೆಳೆಗೆ ನೇಜಿ ಹಾಕಲು ಇದು ಪೂರಕವಾಗಲಿದೆ. ಸಂಕಲಕರಿಯದ ಸಾಮಾಜಿಕ ಕಳಕಳಿಯ ಸುಧಾಕರ ಸಾಲ್ಯಾನ್ ಎಂಬುವವರು ಇದರ ನಿರ್ವಹಣೆ ಮಾಡುತ್ತಿದ್ದು, ನೀರಿನ ಕೊರತೆ ನೀಗಿಸುವಲ್ಲಿ ಶ್ರಮವಹಿಸಿದ್ದಾರೆ.