Advertisement

ಕೋವಿಡ್ ಸೇನಾನಿಗಳ ಸೇವೆ ಶ್ಲಾಘನೀಯ: ವಿರುಪಾಕ್ಷಪ್ಪ

02:02 PM Jul 02, 2020 | mahesh |

ರಾಣಿಬೆನ್ನೂರ: ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೊಂಕು ತಡೆಗಟ್ಟಲು ಮನೆ ಮನೆಗೆ ತೆರಳಿ ಸೋಂಕಿತರನ್ನು ಪತ್ತೆ ಹಚ್ಚಲು ಶ್ರಮಿಸುತ್ತಿರುವ ಆರೋಗ್ಯ ಇಲಾಖೆ
ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನೀಯವಾದದ್ದು ಎಂದು ಬ್ಯಾಡಗಿ ಕ್ಷೇತ್ರದ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.

Advertisement

ಅಸುಂಡಿ ಮತ್ತು ಹುಲಿಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ಸಂಘದಿಂದ ಹಮ್ಮಿಕೊಂಡಿದ್ದ ಕೊರೊನಾ ಸೇನಾನಿಗಳಾದ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ, ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಹಾಗೂ ಆಹಾರ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಈಶ್ವರಗೌಡ, ಉಪಾಧ್ಯಕ್ಷ ಕಾಂತೇಶ ಹಿತ್ತಲಮನಿ, ಕೆಸಿಸಿ ಬ್ಯಾಂಕ್‌ ನಿರ್ದೇಶಕ ಬಿ.ಐ. ಪಾಟೀಲ, ಸಹಕಾರಿ ಸಂಘದ ಅಭಿವೃದ್ಧಿ ಅಧಿ ಕಾರಿ ವಿಕ್ರಂ ಕುಲಕರ್ಣಿ, ಆರ್‌.ಜಿ. ಮಾಳಗುಡ್ಡಪ್ಪನವರ, ಬಿ.ಸಿ.ಪಾರ್ವತೇರ, ಎಂ.ಎಸ್‌. ಕುಸಗೂರ, ಎಚ್‌.ಎಸ್‌. ಸಿದ್ದಪ್ಪನವರ, ಎಚ್‌.ಪಿ. ಬೆಳವಿಗಿ, ಡಿ.ಎಸ್‌. ನೀಲಮಣಿ, ಬಿ.ಇ. ದೊಡ್ಡಬೂದಿಹಾಳ,  ಈ.ಆರ್‌. ಬಳಗಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next