Advertisement
ಮಂಗಳೂರಿನ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಮಂಗಳವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪ್ರಯೋಜನಗಳ ಜತೆಗಿನ ಮಣಿಪಾಲ್ ಆರೋಗ್ಯ ಕಾರ್ಡ್ (ಎಂಎಸಿ) ಬಿಡುಗಡೆ ಮಾಡಿ ಅವರು ಮಾತನಾಡಿದರು.
ನೆಲೆಯಲ್ಲಿ ಸಂಸ್ಥೆಯು ಹೊರತಂದಿ ರುವ ಮಣಿಪಾಲ್ ಆರೋಗ್ಯ ಕಾರ್ಡ್ ಅತ್ಯುತ್ತಮ ಯೋಜನೆ ಎಂದರು. ಮಣಿಪಾಲ್‌ನ ಉಪಕ್ರಮಗಳು ಅಸಾಧಾರಣವಾಗಿದ್ದು, ಕೆಲವು ತಿಂಗ ಳಿಂದ ಇದರ ಭಾಗವಾಗಿರುವುದು ಅನನ್ಯ ಅನುಭವ. ಎಂಎಎಚ್‌ಇನ ಮಣಿಪಾಲ್ ಆರೋಗ್ಯ ಕಾರ್ಡ್ ಪ್ರತಿ ಯೊಬ್ಬರಿಗೂ ವರವಾಗಿದೆ ಎಂದರು.
Related Articles
Advertisement
ಈಗ ರಾಹುಲ್ ದ್ರಾವಿಡ್ ಮುಖೇನ ಆರೋಗ್ಯ ಕಾರ್ಡ್ ವಿತರಣೆ ಮಾಡುತ್ತಿರುವುದು ಸಂತಸದ ವಿಚಾರ ಎಂದರು.
ಮಾಹೆ ವಿವಿ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮಾತ ನಾಡಿ, ಮಣಿಪಾಲ್ ಆರೋಗ್ಯ ಕಾರ್ಡ್ ಮೂಲಕ ಸರ್ವರಿಗೂ ಅತ್ಯುತ್ತಮ ಆರೋಗ್ಯ ಸೇವೆ ದೊರೆಯುವಂತಾ ಗಲಿ. ಕಾರ್ಡ್‌ನ ಆಧಾರವಾಗಿ ಜೀವನದಲ್ಲಿ ಆರೋಗ್ಯ ಭದ್ರತೆ ಮೂಡಿಬರಲಿ ಎಂದು ಹಾರೈಸಿದರು.
ಮಾಹೆ ವಿವಿ ಮಂಗಳೂರು ಕ್ಯಾಂಪಸ್‌ನ ಸಹಕುಲಪತಿ ಡಾ| ಸುರೇಂದ್ರ ವಿ. ಶೆಟ್ಟಿ, ಪ್ರಮುಖರಾದ ಡಾ| ದಿಲೀಪ್ ನಾೖಕ್, ವೈದ್ಯಕೀಯ ವಿಜ್ಞಾನ ಪ್ರಮುಖರಾದ ಡಾ| ವಸುಧಾ ಶೆಟ್ಟಿ, ಕೆಎಂಸಿ ಮಂಗಳೂರು ಡೀನ್ ಡಾ| ಎಂ.ವಿ. ಪ್ರಭು, ವೈದ್ಯಕೀಯ ಅಧೀಕ್ಷಕ ಡಾ| ಆನಂದ ವೇಣುಗೋಪಾಲ್, ಪ್ರಾದೇಶಿಕ ಸಿಒಒ ಸಾಗಿರ್ ಸಿದ್ದಿಕಿ, ಡಾ|ಅವಿನಾಶ್ ಶೆಟ್ಟಿ, ಸಿ.ಜಿ. ಮುತ್ತಣ್ಣ ಉಪಸ್ಥಿತರಿದ್ದರು.
ಮಕ್ಕಳ ಜತೆಗೆ ಬ್ಯಾಟ್ ಹಿಡಿದ ರಾಹುಲ್!ಆರೋಗ್ಯ ಕಾರ್ಡ್ ಬಿಡುಗಡೆಗೆ ಮುನ್ನ ದ್ರಾವಿಡ್ ನಗರದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಜತೆಗೆ ಸ್ವಲ್ಪ ಹೊತ್ತು ಆಟವಾಡಿದರು. ಟಿಎಂಎ ಪೈ ಸಭಾಂಗಣದ ಒಳಗೆ ಇದಕ್ಕಾಗಿ ಸಣ್ಣ ಪಿಚ್ ಸಿದ್ಧಗೊಳಿಸಲಾಗಿತ್ತು. ಪುಟಾಣಿಗಳು ಎಸೆದ ಚೆಂಡುಗಳಿಗೆ ಬ್ಯಾಟ್ ಬೀಸಿ ಹುರುಪು ತುಂಬಿದರು. ಬಾಲಕನೊಬ್ಬ ಬಾಲ್ ಎಸೆದಾಗ ರಾಹುಲ್ ಮೆಲ್ಲನೆ ಬ್ಯಾಟ್ ಬೀಸಿದರು. ಕ್ಯಾಚ್ ಹಿಡಿದು ತನ್ನನ್ನು ಔಟ್ ಮಾಡಿದ ಬಾಲಕನನ್ನು ರಾಹುಲ್ ಅಭಿನಂದಿಸಿದರು. ಬಳಿಕ ಮಕ್ಕಳ ಜತೆಗೆ ಸೆಲ್ಫಿ ತೆಗೆದರು. ಸಂವಾದದಲ್ಲಿ ರಾಹುಲ್ ದ್ರಾವಿಡ್ ಉವಾಚ
ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ರಾಹುಲ್ ದ್ರಾವಿಡ್ ಉತ್ತರಿಸಿದರು. ಅವರ ಮಾತುಗಳ ಕೆಲವು ಝಲಕ್ ಇಲ್ಲಿದೆ… - ಮಕ್ಕಳು ಕ್ರಿಕೆಟ್ ಅಥವಾ ಯಾವುದೇ ಕ್ರೀಡೆಯ ಬಗ್ಗೆ ಸ್ವಂತ ನಿಲುವಿನಿಂದ ಒತ್ತು ನೀಡಿ ಮುಂದೆ ಬರಬೇಕು; ಪೋಷಕರ ಒತ್ತಡದಿಂದಾಗಿ ಅಲ್ಲ. ಎಲ್ಲರೂ ಕ್ರೀಡೆಯನ್ನು ವೃತ್ತಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲ. – ನನ್ನ ಬದುಕಿನ ಯಶಸ್ಸಿಗೆ ಕಾರಣ: ಕಠಿನ ಪರಿಶ್ರಮ, ತಾಳ್ಮೆ, ಗೌರವಿಸುವ ಗುಣ. – ಹೆತ್ತವರೇ ನನಗೆ ಪ್ರೇರಣೆ. ಅವರು ನನ್ನ ರೋಲ್ ಮಾಡೆಲ್. ಜತೆಗೆ ನನ್ನ ಕೋಚ್ ಆಟದ ಜತೆ ಶಿಸ್ತು ಕಲಿಸಿದರು. ಕ್ರಿಕೆಟ್‌ನಲ್ಲಿ ಗಾವಸ್ಕರ್, ಜಿ.ಆರ್. ವಿಶ್ವನಾಥ್ ನನ್ನ ರೋಲ್ ಮಾಡೆಲ್.