Advertisement

ಪೌರ ಕಾರ್ಮಿಕರ ಸೇವೆ ಅತ್ಯಮೂಲ್ಯ

05:55 PM Jun 25, 2022 | Team Udayavani |

ಲಕ್ಷ್ಮೇಶ್ವರ: ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಮೂಲ್ಯವಾಗಿದೆ. ಪೌರ ಕಾರ್ಮಿಕರು ಕೆಲಸದ ವೇಳೆ ಸುರಕ್ಷತಾ ಪರಿಕರಗಳನ್ನು ಧರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಸೂಚಿಸಿದರು.

Advertisement

ಶುಕ್ರವಾರ ಪಟ್ಟಣದ ಪುರಸಭೆ ಸಭಾಭವನದಲ್ಲಿ ನಡೆದ ಪೌರ ಕಾರ್ಮಿಕರ ಕುಂದುಕೊರತೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಪೌರಕಾರ್ಮಿಕರು ಸ್ಥಳೀಯ ಸಂಸ್ಥೆಗಳ ಆಧಾರ ಸ್ತಂಭ ಮತ್ತು ಭೂಸೇನಾ ಸೈನಿಕರಿದ್ದಂತೆ. ಕೊರೊನಾ, ಮಳೆ, ಚಳಿ, ಗಾಳಿ, ಗಲೀಜು ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಆರೋಗ್ಯ ಬದಿಗೊತ್ತಿ ಸ್ವಚ್ಛತಾ ಕಾರ್ಯ ಮಾಡುತ್ತೀರಿ. ನಿಮ್ಮ ಆರೋಗ್ಯ ಕಾಪಾಡುವ ಜವಾಬ್ದಾರಿ ಸ್ಥಳೀಯ ಆಡಳಿತ ಮತ್ತು ಸರ್ಕಾರಕ್ಕಿರುತ್ತದೆ.

ಪೌರ ಕಾರ್ಮಿಕರು ನಿತ್ಯ ಪುರಸಭೆಯಿಂದ ನೀಡಲಾದ ಆರೋಗ್ಯ ಸುರಕ್ಷಾ ಕವಚಗಳನ್ನು ಧರಿಸಿ ಕೆಲಸ ನಿರ್ವಹಿಸಬೇಕು. ಮಕ್ಕಳ ಉತ್ತಮ ಶಿಕ್ಷಣ, ಆರೋಗ್ಯದತ್ತ ಚಿತ್ತ ಹರಿಸಬೇಕು. ಜೂ.28ರಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ(ಕೋಟೆ) ಅವರು ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಅ ಧಿಕಾರಿಗಳು ಮತ್ತು ಜನ ಪ್ರತಿನಿಧಿಗಳನ್ನೊಳಗೊಂಡ ಸಂವಾದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರೆಲ್ಲರೂ ತಮ್ಮ ಬೇಕು-ಬೇಡಿಕೆ, ಅಹವಾಲು, ಕುಂದುಕೊರತೆಗಳ ಬಗ್ಗೆ ಚರ್ಚಿಸಬಹುದು ಎಂದರು.

ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಬಸವಣ್ಣೆಪ್ಪ ನಂದೆಣ್ಣವರ ಮಾತನಾಡಿ, ಲಕ್ಷ್ಮೇಶ್ವರ ಪುರಸಭೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಪೌರಕಾರ್ಮಿಕರಿಗೆ ಸಲ್ಲಬೇಕಾದ ಎಲ್ಲ ಸೌಲತ್ತುಗಳನ್ನು ಸಹಕಾರದಿಂದ ಕಲ್ಪಿಸುತ್ತಾರೆ.

ಕೋವಿಡ್‌ ಸಂದರ್ಭದಲ್ಲಿ ಕಾರ್ಮಿಕರ ಆರೋಗ್ಯದ ಕಾಳಜಿ ವಹಿಸಿರುವುದು ಶ್ಲಾಘನೀಯ. ಆಗಾಗ್ಗೆ ಗುಣಮಟ್ಟದ ಆರೋಗ್ಯ ಸುರಕ್ಷಾ ಕವಚ, ಆರೋಗ್ಯ ಸೇವೆ, ಉಪಾಹಾರ ವ್ಯವಸ್ಥೆ, ತಿಂಗಳ ಮೊದಲ ವಾರ ಸಂಬಳ ಸೇರಿ ಎಲ್ಲ ಸೌಲತ್ತುಗಳನ್ನು ಕಲ್ಪಿಸಿದ್ದಾರೆ. ಅದಕ್ಕೆ ತಕ್ಕಂತೆ ಕಡಿಮೆ ಸಿಬ್ಬಂದಿ ನಡುವೆಯೂ ಪಟ್ಟಣದ ಸ್ವತ್ಛತೆ ಕಾಪಾಡುವ ಪ್ರಾಮಾಣಿಕ ಸೇವೆ ಮಾಡಿದ್ದೇವೆ. ಇದಕ್ಕೆ ಪಟ್ಟಣದ ಜನರ, ವ್ಯಾಪಾರಸ್ಥರ ಸಹಕಾರವೂ ಮುಖ್ಯವಾಗಿದೆ.ಪೌರ ಕಾರ್ಮಿಕರ ಹಲವಾರುಗಳನ್ನು ಜೂ. 28 ರಂದು ನಡೆಯುವ ಸಭೆಯಲ್ಲಿ ಮಂಡಿಸುತ್ತೇವೆ ಎಂದರು.

Advertisement

ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಪೌರ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿದರು. ಈ ವೇಳೆ ಪುರಸಭೆ ಅ ಧಿಕಾರಿಗಳಾದ ಮಂಜುಳಾ ಹೂಗಾರ, ನೇತ್ರಾ ಹೊಸಮನಿ, ಪೌರಕಾರ್ಮಿಕ ಮುಖಂಡ ದೇವಪ್ಪ ನಂದೆಣ್ಣವರ, ಪರಶುರಾಮ ಹಿತ್ತಲಮನಿ, ಪೌರಕಾರ್ಮಿಕರು ಪಾಲ್ಗೊಂಡಿದ್ದರು. ಸಿಬ್ಬಂದಿ ಹನುಮಂತಪ್ಪ ನಂದೆಣ್ಣವರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next