Advertisement

ಸೆಮಿನಾರ್‌ ಸ್ವಾಮಿಗೆ ದೊಡ್‌ ನಮಸ್ಕಾರ!

04:47 PM Apr 04, 2017 | |

ನಾಳೆ ಸೆಮಿನಾರ್‌ ಅಂದ್ರೆ ಇವತ್‌ ಬೆಳಗಿನಿಂದ ಸಂಜೆಯವರೆಗೂ ಹುಡುಕಿ ಕೊನೆಗೆ ರಾತ್ರಿಯಿಡೀ ಕುಳಿತು ಪಿಪಿಟಿ ರೆಡಿಮಾಡಿ, ಸರಿಯಾಗಿ ಅದಕ್ಕೆ ತಯಾರಿನೂ ಮಾಡಿಕೊಳ್ಳದೇ ಕ್ಲಾಸ್‌ನಲ್ಲಿ ಬಂದು ಅದು ಹೇಗಿದೆಯೋ ಹಾಗೆ ಯಥಾಪ್ರಕಾರ ಬಾಯಿಪಾಠ ಮಾಡಿ ಒಪ್ಪಿಸುವ ಪುಣ್ಯಾತ್ಮರೂ ಇದ್ದಾರೆ!

Advertisement

ಅವರ ಪ್ರಶ್ನೆ; “ಯಾಕಪ್ಪಾ, ನಿದ್ದೆ ಮಾಡ್ತಿದ್ದೀಯಾ? ರಾತ್ರಿ ಮಲಗಿಲ್ವಾ? ಓ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿದ್ರೇನ ಅಲ್ವಾ? ಎಫ್ಬಿನಾ ಅಥವಾ ವಾಟ್ಸಾಪಾ, ಇಲ್ಲಾ ಇನ್‌ ಸ್ಟಗ್ರಾಮಾ?’.  “ಇಲ್ಲ ಮ್ಯಾಮ್‌, ಅದು ರಾತ್ರಿ ಪಿಪಿಟಿ ಮಾಡ್ತಿದ್ದೆ. ಅದಕ್ಕೆ ಮಲಗಿದ್ದು ಲೇಟಾಯ್ತು, ಸಾರಿ’! ಕ್ಲಾಸ್‌ರೂಮುಗಳಲ್ಲಿ ಈ ಉತ್ತರ ಕಾಮನ್‌. ಲೆಕ್ಚರರ್ ಪಾಠ ಮಾಡ್ತಿರ್ತಾರೆ. ಆದರೆ ವಿದ್ಯಾರ್ಥಿಗಳ ಗಮನ ಇನ್ನೆಲ್ಲೋ ಇರುತ್ತೆ. ಸೆಮಿನಾರ್‌ಗೆ ಪಿಪಿಟಿ ಮಾಡ್ಲಿಕ್ಕೆ, ಇನಾರ್‌ವೆುಶನ್‌ ಸಿಗುತ್ತಲೇ ಇಲ್ವಲ್ಲಪ್ಪಾ! ಏನ್‌ ಮಾಡೋದು? ಎಂದು ಹತ್ತಾರು ಸಲ ಯೋಚನೆ ಮಾಡಿ ಕೊನೆಗೆ ಯಾರೋ ಒಬ್ಬ ಗೆಳೆಯನ ಸಲಹೆ ಮೇರೆಗೆ ಇನ್ನಾರೋ ರಿಸರ್ಚರ್‌ ಮಾಡಿದ ಪಿಪಿಟಿಯನ್ನು ನೆಟ್‌ನಲ್ಲಿ ಹುಡುಕಿ, ಅದನ್ನೇ ಕಾಪಿ ಮಾಡಿ ತಾನೇ ಮಾಡಿದ್ದು ಎನ್ನುವ ಹಾಗೆ ಪೋಸು ಕೊಡೋದು ಬೇರೆ.

ಇನ್ನು ನಾಳೆ ಸೆಮಿನಾರ್‌ ಅಂದ್ರೆ ಇವತ್‌ ಬೆಳಗಿನಿಂದ ಸಂಜೆಯವರೆಗೂ ಹುಡುಕಿ ಕೊನೆಗೆ ರಾತ್ರಿಯಿಡೀ ಕುಳಿತು ಪಿಪಿಟಿ ರೆಡಿಮಾಡಿ ಸರಿಯಾಗಿ ಅದಕ್ಕೆ ತಯಾರಿನೂ ಮಾಡಿಕೊಳ್ಳದೇ ಕ್ಲಾಸ್‌ನಲ್ಲಿ ಬಂದು ಅದು ಹೇಗಿದೆಯೋ ಹಾಗೆ ಯಥಾಪ್ರಕಾರ ಬಾಯಿಪಾಠ ಮಾಡಿ ಒಪ್ಪಿಸಿ ಅಂತೂ ನಮ್ಮ ಕೆಲಸ ಆಯ್ತಪ್ಪಾ ಎಂದು ಕೈತೊಳೆದು ಬಿಡುವುದುಂಟು. ಮಾರ್ಕ್ಸ್ ಕೊಡೋದು ಬಿಡೋದು ಲೆಕ್ಚರರ್ಗೆ ಬಿಟ್ಟಿದ್ದು, ನಮ್ಮ ಕರ್ತವ್ಯ ನಾವ್‌ ಮಾಡಿದ್ದೇವೆ ಎಂದು ಸುಮ್ಮನಾಗಿ ಬಿಡುವುದು ಈಗಿನ ವಿದ್ಯಾರ್ಥಿಗಳ ಜಾಯಮಾನ. 

ಸೆಮಿನಾರ್‌ ಒಂದೇ ಅಲ್ಲ, ಯಾವುದೇ ಪ್ರಾಜೆಕ್ಟ್ ವರ್ಕ್‌ ಇರಲಿ, ಅಸೈನ್‌ಮೆಂಟ್‌ ಇರಲಿ. ಲಾಸ್ಟ್‌ ಡೇಟ್‌ ಬರುವವರೆಗೂ
ಏನೂ ತಯಾರಿ ಮಾಡದೇ ನಾಳೆ ಸಬಿಟ್‌ ಮಾಡುವುದು ಎಂದಾಗ ಹಿಂದಿನ ದಿನದಿಂದ ನಾಳೆ ಕೊಡುವ ಡೆಡ್‌ಲೈನ್‌ವರೆಗೂ ಬರಿತಾನೇ ಇರುವವರೂ ಇದ್ದಾರೆ. ಕೆಲವೊಬ್ಬ ಪುಣ್ಯಾತ್ಮರಿದ್ದಾರೆ. ಉಳಿದವರೆಲ್ಲ ಹಿಂದಿನ ದಿನವೇ ರೆಡಿ ಮಾಡಿ ಇಟ್ಟರೆ ಇವರು ಮಾತ್ರ ಅಸೈನ್‌ಮೆಂಟ್‌ ಸಬಿ¾ಟ್‌ ಮಾಡುವ ದಿನದ ಬೆಳಗ್ಗೆ ಕ್ಲಾಸ್‌ನಲ್ಲಿ ಲೆಕ್ಚರರ್ಸ್‌ ಪಾಠ ಮಾಡ್ತಿದ್ದರೂ ಅಲ್ಲೇ ಕುಳಿತು, ಬರೆಯುವುದುಂಟು ಅಥವಾ ಸಂಜೆ 5 ಗಂಟೆಯ ವರೆಗೆ ಡೆಡ್‌ಲೈನ್‌ ಇದ್ದರೆ ಮಧ್ಯಾಹ್ನ ಇನಾ#ರ್ಮೇಶನ್‌ ಕಲೆಕ್ಟ್ ಮಾಡಿ ಸಂಜೆ ಐದು ಗಂಟೆಗೆ ಇನ್ನೇನು ಐದು ನಿಮಿಷ ಅಥವಾ ಎರಡು ನಿಮಿಷ ಇದೆ ಅನ್ನುವಷ್ಟೊತ್ತಿಗೆ ಸಬಿ¾ಟ್‌ ಮಾಡ್ತಾರೆ.

“ಯಾಕಪ್ಪಾ, ಹೀಗೆ ಮಾಡ್ತೀರಾ?’ ಅಂದ್ರೆ “ನಮ್ಮ ಸಂಪ್ರದಾಯ ಮ್ಯಾಮ್‌. ಹಿಂದಿನಿಂದ ನಡೆದುಕೊಂಡು ಬಂದಿರೋದು. ನಮ್‌ ಸೀನಿಯರ್ ಕೂಡ ಹೀಗೆ ಮಾಡ್ತಿದ್ರು. ನಾವೇನ್‌ ಅವರಿಗಿಂತ ಕಮ್ಮಿಯೇನಿಲ್ಲ’ ಅನ್ನುವ ಹಾಗಿರುತ್ತದೆ ಅವರ ಉತ್ತರ.
ಯಾರನ್ನೇ “ಏನ್ಮಾಡ್ತಿದ್ದೀಯಾಪ್ಪಾ?’ ಅಂತ ಕೇಳಿದ್ರೂ, “ಪಿಪಿಟಿ ಕಣೋ, ನಿಂದಾಯ್ತಾ?’. “ನಂದಿನ್ನೂ ಲೇಟ್‌. ಲಾಸ್ಟ್‌
ಇರೋದು. ನಿಧಾನಕ್ಕೆ ಮಾಡಿದ್ರಾಯ್ತು, ಬಿಡು’ ಎನ್ನುವವರೇ ಹೆಚ್ಚು.

Advertisement

“ಇವತ್ತು ಸೆಮಿನಾರ್‌. ಸರಿ ಬಿಡು ಅವರ ಪಾಡಿಗೆ ಅವರು ಓದ್ತಾರೆ. ನಮ್‌ ಪಾಡಿಗೆ ನಾವ್‌ ಇರೋಣ ಬಿಡು’ ಎನ್ನುವವರೇ ಬಹಳ ಮಂದಿ. ಸೆಮಿನಾರ್‌ ಮುಗಿದ್‌ ಮೇಲೆ ಕ್ವೆಶ್ಚನ್‌ ಬೇರೆ ಕೇಳಬೇಕು. ನಮ್ಮಲ್ಲೋ ಅವರು ಪ್ರಸೆಂಟ್‌ ಮಾಡಿದ ಸಬೆjಕ್ಟೇ ಒಂದಾದ್ರೆ
ಇವರು ಕೇಳ್ಳೋ ಪ್ರಶ್ನೆ ಇನ್ನೊಂದಾಗಿರುತ್ತದೆ. ಪಾಪ ಅವರು ತಮ್ಮ ಸೆಮಿನಾರ್‌ ಟಾಪಿಕ್‌ಗೆ ಸಂಬಂಧಪಟ್ಟಂತೆ ಮಾತ್ರ ಓದಿಕೊಂಡು
ಬಂದಿರುತ್ತಾರೆ. ಇವರು ಕೇಳ್ಳೋ ಪ್ರಶ್ನೆಗೆ ತಬ್ಬಿಬ್ಟಾಗುತ್ತಾರೆ. ಕೆಲವೊಂದು ಬಾರಿ ಲೆಕ್ಚರರ್ಗಳೇ ಇವರುಗಳ ಪ್ರಶ್ನೆಗಳಿಗೆ
ಉತ್ತರಿಸುವುದುಂಟು! ಹೀಗೆ ಕ್ಲಾಸ್‌ರೂಮ್‌ಗಳೆಲ್ಲಾ ಕೇವಲ ಪಿಪಿಟಿ ಪ್ರಸೆಂಟೆಶನ್‌ಗಳಿಗೆ ಸಿಮೀತವಾಗಿ ಬಿಟ್ಟಿವೆ ಎಂದೆನಿಸುತ್ತದೆ. ಇವಿದ್ದರೂ ಟಾಪಿಕ್‌ಗೆ ತಕ್ಕಂತೆ ಉತ್ತಮವಾದ ಚರ್ಚೆಗಳು ಇನ್ನಾದರೂ ನಡೆಯುವುದು ಅಗತ್ಯವಾಗಿದೆ.

ಮಮತ ಕೆ. ಕೆ, ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next