Advertisement

ರಹಸ್ಯವಾಗಿತ್ತು ಸೋಂಕು ಹಬ್ಬುವ ವಿಚಾರ

01:10 AM May 03, 2020 | Sriram |

ಕೋವಿಡ್-19 ವೈರಸ್‌ನ ಬಗ್ಗೆ ಚೀನ ರವೆಯಷ್ಟೂ ಗುಟ್ಟುಬಿಟ್ಟುಕೊಡದೆ, ಜಗತ್ತಿಗೆಲ್ಲ ಚಳ್ಳೇಹಣ್ಣು ತಿನ್ನಿಸಿದೆ ಎಂದು ಆರೋಪಿಸಿದ ಗುಪ್ತಚರ ವರದಿ ಇದೀಗ ಸೋರಿಕೆ ಆಗಿದೆ.

Advertisement

ಅಮೆರಿಕ,ಇಂಗ್ಲೆಂಡ್‌,ಕೆನಡಾ,ಆಸ್ಟ್ರೇಲಿಯಾ, ನ್ಯೂಜಿಲೆಂಡ್‌-ರಾಷ್ಟ್ರಗಳು ನಿಯೋಜಿಸಿದ್ದ “ಫೈವ್‌ ಐಸ್‌’ ಗುಪ್ತಚರ ಸಂಸ್ಥೆಯಿಂದ ಸೋರಿಕೆಯಾದ 15 ಪುಟಗಳ ವರದಿಯನ್ನು “ಟೆಲಿಗ್ರಾಫ್’ ಪತ್ರಿಕೆ ವರದಿ ಮಾಡಿದೆ.”ಕೋವಿಡ್-19 ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ ಎಂಬ ಪ್ರಾಥಮಿಕ ಸತ್ಯವನ್ನೇ ಚೀನ ಮುಚ್ಚಿಟ್ಟಿತ್ತು. ಈ ಬಗ್ಗೆ ಮಾತನಾಡಲು ಸಿದ್ಧರಿದ್ದ ಅಲ್ಲಿನ ವೈದ್ಯರನ್ನೇ ಚೀನ ಹತ್ತಿಕ್ಕಿದೆ ಅಥವಾ ಅಪಹರಿಸಿದೆ. ತನ್ನ ದೇಶದೊಳಗೆ ಪ್ರಯಾಣ ನಿರ್ಬಂಧ ಹೇರಿ, ಇತರ ದೇಶಗಳಿಗೆ ಲಾಕ್‌ಡೌನ್‌ ಅಗತ್ಯವಿಲ್ಲ ಎಂದು ಸುಳ್ಳು ಹೇಳಿತ್ತು.

ವುಹಾನ್‌ನ ಪ್ರಯೋಗಾಲಯದಲ್ಲಿ ಕೋವಿಡ್-19 ವೈರಸ್‌ನಿಂದ ಮೃತಪಟ್ಟ ಬಾವಲಿಗಳ ಸಂಶೋಧನೆಯನ್ನು ನಿರಂತ ರವಾಗಿ ನಡೆಸಲಾಗಿತ್ತು. ವುಹಾನ್‌ ಲ್ಯಾಬ್‌ನ ವರದಿಗಳನ್ನೂ ಚೀನ ನಾಶಪಡಿಸಿದೆ. ಅಲ್ಲದೆ, ಕೋವಿಡ್-19 ಗೆ ಸೂಕ್ತ ಔಷಧ ಕಂಡುಕೊಳ್ಳಲು ಜಗತ್ತಿನ ದೇಶಗಳೆಲ್ಲ ಅಂಗಲಾಚುವಾಗ, ಅತ್ತ ಚೀನ ಮೌನವಾಗಿದ್ದುಕೊಂಡು ತನ್ನ ದಾಖಲೆ ಗಳನ್ನೆಲ್ಲ ನಾಶಪಡಿಸುತ್ತಿತ್ತು’ ಎಂದು ಆರೋಪಿಸಲಾಗಿದೆ.

ಚೀನಕ್ಕೆ ಡಬ್ಲ್ಯೂಎಚ್‌ಒ ಶ್ಲಾಘನೆ: ಕೋವಿಡ್-19 ಬಿಕ್ಕಟ್ಟನ್ನು ಚೀನ ನಿರ್ವಹಿಸಿದ ರೀತಿಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಶ್ಲಾಘನೆ ವ್ಯಕ್ತಪಡಿಸಿದೆ. ಚೀನದ ಸಾರ್ವಜನಿಕ ಸಂಪರ್ಕ ಏಜೆನ್ಸಿಯಂತೆ ಕೆಲಸ ನಿರ್ವಹಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟೀಕಿಸಿದ ಮರುದಿನವೇ ಆರೋಗ್ಯ ಸಂಸ್ಥೆಯ ಈ ಶ್ಲಾಘನೆ ಹೊರಬಿದ್ದಿದೆ.

ಮತ್ತಷ್ಟು ಸಡಿಲ:ಈ ಮಧ್ಯೆ,ಅಮೆರಿಕದಲ್ಲಿ 12ಕ್ಕೂ ಹೆಚ್ಚು ರಾಜ್ಯಗಳು ಲಾಕ್‌ಡೌನ್‌ ಸಡಿಲಿಸಿದ್ದು,ರೆಸ್ಟೋರೆಂಟ್‌ಗಳು, ಅಂಗಡಿಗಳು, ಇನ್ನಿತರ ವಾಣಿಜ್ಯ ಮಳಿಗೆಗಳು ಬಾಗಿಲು ತೆರೆದಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next