ವಿಂಡ್ಹೊಕ್: ಆಫ್ರಿಕಾ ಖಂಡದ ನಮೀಬಿಯಾದ ನಮೀಬ್ ಮರುಭೂಮಿಯಲ್ಲಿರುವ “ಕೃತಕ ವೃತ್ತ’ಗಳು ಕಳೆದ 50 ವರ್ಷಗಳಿಂದ ಆಸಕ್ತಿದಾಯಕ ವಿಷಯವಾಗಿದೆ.
ಈ ನಿಗೂಢತೆಯನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಪರಿಸರ ತಜ್ಞರು ಅನೇಕ ಸಿದ್ಧಾಂತಗಳನ್ನು ಮುಂದಿಟ್ಟಿದ್ದಾರೆ. ಆದರೆ ಇದೀಗ ಜರ್ಮನಿಯ ಗಾಟಿಂಗನ್ ವಿಶ್ವವಿದ್ಯಾ ನಿಲಯದ ಪರಿಸರ ತಜ್ಞ ಸ್ಟೀಫನ್ ನೇತೃತ್ವದ ತಂಡ ನಡೆಸಿದ ಅಧ್ಯಯನವು ಕೃತಕ ವೃತ್ತಗಳ ಬಗ್ಗೆ ಸ್ಪಷ್ಟ ವಿವರಣೆ ನೀಡಿದೆ.
“ಸಸ್ಯದ ನೀರಿನ ಒತ್ತಡವು ಈ ಕೃತಕ ವೃತ್ತಗಳು ಉಂಟಾಗಲು ಕಾರಣವೇ ಹೊರತು ಗೆದ್ದಲು ಹುಳುಗಳು ಅಲ್ಲ’ ಎಂದು ಅಧ್ಯಯನವು ತಿಳಿಸಿದೆ.
ಈ ಕೃತಕ ವೃತ್ತಗಳು ದಕ್ಷಿಣ ಆಫ್ರಿಕಾದ ಶುಷ್ಕ ಹುಲ್ಲುಗಾವಲುಗಳ 1,770 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿವೆ. ಈ ನಿಗೂಢ ವೃತ್ತಗಳ ಬಗ್ಗೆ 2000 ಇಸವಿಯಿಂದ ಗೆಟಿನ್ ಅಧ್ಯಯನ ನಡೆಸುತ್ತಿದ್ದಾರೆ. ಇದರ ಬಗ್ಗೆ ಅನೇಕ ಸಂಶೋಧನ ಪ್ರಬಂಧಗಳನ್ನು ಅವರು ಮಂಡಿಸಿದ್ದಾರೆ.
2020ರ ಬರಗಾಲ ಮತ್ತು ಅನಂತ ರದ ಉತ್ತಮ ಮಳೆ ಸಮಯ ದಲ್ಲಿ ಇವರ ತಂಡ ಅಧ್ಯಯನ ನಡೆಸಿದೆ. ವೃತ್ತದ ಒಳಗಿನಿಂದ ನೀರು ವೇಗವಾಗಿ ಖಾಲಿಯಾಗುತ್ತಿದೆ. ಅದನ್ನು ಬಳಸಲು ಯಾವುದೇ ಹುಲ್ಲು ಇಲ್ಲದಿದ್ದರೂ, ಹೊರಗಿನ ಹುಲ್ಲು ಎಂದಿನಂತೆ ದೃಢವಾ ಗಿದೆ. ಚೆನ್ನಾಗಿ ಬೇರೂರಿರುವ ಹುಲ್ಲು, ತಮ್ಮ ಬೇರುಗಳ ಸುತ್ತಲೂ ನಿರ್ವಾತ ವ್ಯವಸ್ಥೆಯನ್ನು ಸೃಷ್ಟಿಸಿದ್ದು, ಇದು ಎಲ್ಲ ನೀರನ್ನು ತಮ್ಮ ಕಡೆಗೆ ಸೆಳೆಯುತ್ತದೆ ಎಂದು ಅಧ್ಯಯನವು ತಿಳಿಸಿದೆ.