Advertisement

ಸೊರಬ: ಹೊಸ ಮುಖಗಳಿಗೆ ಮಣೆ

04:33 PM Dec 31, 2020 | Adarsha |

ಸೊರಬ: ತಾಲೂಕಿನ 27 ಗ್ರಾಮ ಪಂಚಾಯ್ತಿಗಳಿಗೆ ಎರಡನೇ ಹಂತದಲ್ಲಿ ಡಿ.27ರಂದು ನಡೆದ ಚುನಾವಣೆಯ ಮತ ಏಣಿಕೆ ಪ್ರಕ್ರಿಯೆ ಬುಧವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ನಡೆಯಿತು.

Advertisement

ಮತ ಏಣಿಕೆಗಾಗಿ 45 ಟೇಬಲ್‌ಗ‌ಳ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಟೇಬಲ್‌ಗೆ ಒಬ್ಬರು ಏಣಿಕೆ ಮೇಲ್ವಿಚಾರಕರು, ಇಬ್ಬರು ಏಣಿಕೆ ಸಹಾಯಕರು ಹಾಗೂ ಒಬ್ಬರು ಡಿ ಗ್ರೂಪ್‌ ನೌಕರರು ಕಾರ್ಯನಿರ್ವಹಿಸಿದರು. ಮೊದಲುಮ ಅಂಚೆ ಮತದ ಏಣಿಕೆ ನಂತರ ಬ್ಯಾಲೇಟ್‌ ಏಣಿಕೆ ನಡೆಯಿತು. ಮೊದಲ ಮತ್ತು ಎರಡನೇ ಹಂತದ ಮತ ಏಣಿಕೆ ಪೂರ್ಣಗೊಂಡು ಮಧ್ಯಾಹ್ನ 3ರ ಸುಮಾರಿಗೆ ಮೂರನೇ ಹಂತದ ಏಣಿಕೆ ಪ್ರಕ್ರಿಯೆ ಆರಂಭಗೊಂಡಿತು.

ಮತ ಏಣಿಕೆ ನಡೆದ ಕಾಲೇಜಿನ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು. ವಿವಿಧೆಡೆಗಳಿಂದ ಆಗಮಿಸುವ ವಾಹನಗಳ ನಿಲುಗಡೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅವಕಾಶ ಮಾಡಿದ್ದರಿಂದ ಸಂಚಾರ ದಟ್ಟಣೆ ಎದುರಾಗಲಿಲ್ಲ.

ಇದನ್ನೂ ಓದಿ:ಸಿಡ್ನಿ ಟೆಸ್ಟ್‌: ಉಮೇಶ್ ಬದಲಿಗೆ ಶಾರ್ದೂಲ್ ಠಾಕೂರ್‌ಗೆ ಹೆಚ್ಚಿನ ಅವಕಾಶ

ಕಾರ್ಯಕರ್ತರ ಸಂಭ್ರಮ: ಕಾಲೇಜು ಮುಂಭಾಗ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರು ಚುನಾವಣಾ ಫಲಿತಾಂಶ ಬರುತ್ತಿದ್ದಂತೆ ವಿಜೇತ ಅಭ್ಯರ್ಥಿಗಳಿಗೆ ಹಾರ ಹಾಕುವ ಮೂಲಕ ಶುಭ ಕೋರಿ ಸಂಭ್ರಮಿಸಿದರು. ಒಗ್ಗಟ್ಟಾಗಿ ಚುನಾವಣೆ ಎದುರಿಸುವುದಾಗಿ ಹೇಳಿದ್ದ ಬಿಜೆಪಿ ಪಕ್ಷದಲ್ಲಿ ಫಲಿತಾಂಶ ಹೊರ ಬೀಳುತ್ತಿದ್ದಂತೆ ಎರಡು ಬಣಗಳಿರುವುದು ಸ್ಪಷ್ಟವಾಗಿ ಗೋಚರಿಸಿತು. ಸಂಸದ ಹಾಗೂ ಶಾಸಕ ಬಿಜೆಪಿಯವರೇ ಆಗಿರುವ ಕಾರಣ ಹೆಚ್ಚಿನ ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರೇ ಆಯ್ಕೆಯಾಗುತ್ತಿದ್ದಾರೆ.

Advertisement

ಹೊಸಬರಿಗೆ ಮಣೆ ಹಾಕಿದ ಮತದಾರ: ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮತದಾರರು ಹೊಸ ಮುಖಗಳು ಹಾಗೂ ವಿದ್ಯಾವಂತರಿಗೆ ಮಣೆ ಹಾಕುವ ಜೊತೆಗೆ ಹಳಬರನ್ನು ಮಣಿಸಿದ್ದಾರೆ. ತಾಲೂಕಿನ ತಲಗುಂದ ಗ್ರಾಪಂನ ಸೂರಣಗಿ ಮತಕ್ಷೇತ್ರದಲ್ಲಿ ಹೈಕೋರ್ಟ್‌ನ ಯುವ ವಕೀಲ ವಿ.ರವಿ ಗೆಲುವು ಸಾಧಿ ಸಿರುವುದು ವಿಶೇಷವಾಗಿದ್ದರೆ, ಬೆನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಮಾರ್ಯಪ್ಪ, ಹೆಗ್ಗೂಡು ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ್‌ ಕುಪ್ಪೆ, ಹರೀಶಿ ಗ್ರಾಪಂ ಮಾಜಿ ಅಧ್ಯಕ್ಷ ಉಮಾಪತಿ ಪತ್ನಿ ಗೌರಮ್ಮ ಪರಾಭವಗೊಂಡ ಹಿರಿಯರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next