Advertisement

ಕಾವ್ಯಾಸಕ್ತರ ಹುಡುಕುವ ಸ್ಥಿತಿ: ಚಂಪಾ ಬೇಸರ

12:15 PM Jul 30, 2018 | |

ಬೆಂಗಳೂರು: ಪುಸ್ತಕ ಓದುವ ಹವ್ಯಾಸ ಕಣ್ಮರೆಯಾಗುತ್ತಿದ್ದು, ಕಾವ್ಯಾಸಕ್ತರನ್ನು ಹುಡುಕಾಟ ನಡೆಸುವ ಪರಿಸ್ಥಿತಿಗೆ ತಲುಪಿದ್ದೇವೆ ಎಂದು ಹಿರಿಯ ಸಾಹಿತಿ ಪೊ›.ಚಂದ್ರಶೇಖರ ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ತೆಲುಗು ಜಂಗಮ ವಿದ್ಯಾಭಿವೃದ್ಧಿ ಟ್ರಸ್ಟ್‌ ಹಮ್ಮಿಕೊಂಡಿದ್ದ “ಡಾ.ಎಚ್‌.ನರಸಿಂಹಯ್ಯ ಪ್ರಶಸ್ತಿ’ ಪ್ರದಾನ ಮತ್ತು ಎಸ್‌.ಆರ್‌.ವನಜಾಕ್ಷಮ್ಮ ಅವರ “ಕಾವ್ಯ ಕುಸುಮಾಂಜಲಿ’ ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಘ -ಸಂಸ್ಥೆಗಳು ಓದುಗರನ್ನು ಹುಟ್ಟು ಹಾಕುವ ಚಟುವಟಿಕೆಗಳನ್ನು ಮತ್ತಷ್ಟು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕವಿ ಹಾಗೂ ಸಂಸ್ಕೃತಕ ಚಿಂತಕ ಪ್ರೊ.ನಾರಾಯಣ ಘಟ್ಟ (ನಾಹೊ)ಅವರಿಗೆ 2018ನೇ ಸಾಲಿನ ಡಾ.ಎಚ್‌.ನರಸಿಂಹಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಮಾಜಿಕ ಕಾರ್ಯಕರ್ತರಾದ ಟಿ.ಆರ್‌.ಲೋಕೇಶ್‌, ಎನ್‌.ವಿಜಯಲಕ್ಷಿ, ಎಸ್‌.ಆರ್‌.ವನಜಾಕ್ಷಮ್ಮ ಮತ್ತು ಶಂಕರ್‌ಹೂಗಾರ್‌ ಅವರಿಗೆ ನರಸಿಂಹಯ್ಯ ಪುರಸ್ಕಾರ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next