Advertisement
1875 ಶಾಲೆ ಆರಂಭಶಾಲಾಭಿವೃದ್ಧಿ ಹಳೆ ವಿದ್ಯಾರ್ಥಿ ಸಂಘ, ಊರವರ ಸಹಕಾರ
ಕಿರಿಯ ಪ್ರಾಥಮಿಕ ಶಾಲೆಯಾಗಿದ್ದದ್ದು ಮುಂದೆ ಹಿರಿಯ ಪ್ರಾಥಮಿಕ ಅನಂತರ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದೆ. ಕೊಣಾಜೆ ಚಂದಯ್ಯ ಅವರು ಶಾಲೆಯ ಮೊದಲ ಮುಖ್ಯೋಪಾಧ್ಯಾಯರೆನ್ನಲಾಗುತ್ತಿದೆ. ಪ್ರಸಕ್ತವಾಗಿ ಯಮುನಾ ಅವರು ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇಶವ ಆಚಾರ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು. ಮುಖ್ಯೋಪಾಧ್ಯಾಯಿನಿ ಸಹಿತ 5 ಮಂದಿ ಶಿಕ್ಷಕರು, ಓರ್ವ ಗೌರವ ಶಿಕ್ಷಕ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ. ಒಟ್ಟು 62 ಮಂದಿ ಮಕ್ಕಳಿದ್ದಾರೆ.ಅನಂತರಾಜ ಇಂದ್ರರು ಖ್ಯೋಪಾಧ್ಯಾಯರಾಗಿದ್ದಾಗ, ಹೊಸಂಗಡಿ ಅರಮನೆ ಕೃಷ್ಣರಾಜ ಶೆಟ್ಟಿ ಅವರ ಹಿರಿತನದಲ್ಲಿ ಶಾಲೆಯ ಸೂರು ದುರಸ್ತಿ ಸಹಿತ ಅಭಿವೃದ್ಧಿ ಕಾರ್ಯ ನಡೆಸಲಾಗಿತ್ತು ಎಂದು ಹಳೆ ವಿದ್ಯಾರ್ಥಿ ಬಾಲಚಂದ್ರ ಭಂಡಾರಿ ನೆನಪಿಸಿಕೊಳ್ಳುತ್ತಾರೆ.
Related Articles
Advertisement
ನೆನಪಲ್ಲಿ ಉಳಿವ ಶಿಕ್ಷಕರು, ಮುಖ್ಯಶಿಕ್ಷಕರುಪೆರಿಂಜೆ ರಾಮಯ್ಯ ಮಾಸ್ಟ್ರೆ, ಅನಂತರಾಜ ಇಂದ್ರ, ಹೆಸರಾಂತ ಅರ್ಥಧಾರಿ ಮಾರೂರು ಮಂಜುನಾಥ ಭಂಡಾರಿ, ಪಕ್ಕಳ ಮಾಸ್ಟ್ರೆ, ನಾಗರಾಜ ಇಂದ್ರ, ಸ್ಟೆಲ್ಲ ಟೀಚರ್, ವಿನಯಚಂದ್ರ ಅವರು ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಾಗಿದ್ದಾರೆ. ಹೆಮ್ಮೆಯ ಹಳೆ ವಿದ್ಯಾರ್ಥಿಗಳು
ಈ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದ ನಾಗರಾಜ ಇಂದ್ರರೂ ಅವರ ತಾಯಿ ದಿ| ಧನವತಿ ಅಮ್ಮ (ಕೊಣಾಜೆ ಚಂದಯ್ಯ ಅವರ ಶಿಷ್ಯೆ), ದ.ಕ. ಜಿ.ಪಂ. ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಮಜೆಮನೆ, ಹೊಸಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹರಿಪ್ರಸಾದ್ ಹೊಸಂಗಡಿ, ಗ್ರಾ.ಪಂ. ಮಾಜಿ ಸದಸ್ಯ ಶ್ರೀಪತಿ ಭಟ್ ಸಂಪಿಗೆದಡಿ ಮನೆ ಬಡೆಕೋಡಿ, ಸಿಂಡಿಕೇಟ್ ಬ್ಯಾಂಕ್‌ನಲ್ಲಿ ವಸೂಲಾತಿ ಅಧಿಕಾರಿಯಾಗಿದ್ದ ಎಂ.ಕೆ. ಭಂಡಾರಿ, ಮೋಹನದಾಸ ಭಂಡಾರ್ಕರ್, ಗೇರುಕಟ್ಟೆಯ ಉಪನ್ಯಾಸಕ ಮೋಹನ ಉಪಾಧ್ಯಾಯ, ಮೂಡುಬಿದಿರೆ ಪುರಸಭಾ ಮಾಜಿ ಸದಸ್ಯ ದಿನೇಶ್ ಕುಮಾರ್ ಹೊಸಮನೆ, ಉದ್ಯಮಿಗಳಾದ ಸುಶಾಂತ್ ಕರ್ಕೇರ, ಜಾವೇದ್ ಹೈದ್ರೋಸ್, ಹಮೀದ್ ಮಲ್ಲಾರ್ ಮನೆ, ರಾಘು ಪೂಜಾರಿ ಬೆಂಗಳೂರು, ಮಾಜಿ ಸೈನಿಕ ಡೆನಿಲ್ ಡಿ’ಸಿಲ್ವ, ವೇ|ಮೂ| ರಾಮದಾಸ ಆಸ್ರಣ್ಣ, ರಾಘವೇಂದ್ರ ಆಸ್ರಣ್ಣ ನಾಳ, ಮೀನುಗಾರಿಕೆ ಇಲಾಖೆಯಲ್ಲಿರುವ ಲಿಂಗಪ್ಪ ನಾಯ್ಕ ಬಡೆಕೋಡಿ, ಶ್ರೀಧರ ಪೇರಿಮನೆ ಮೊದಲಾದವರು ಈ ಶಾಲೆಯ ಹೆಮ್ಮೆಯ ವಿದ್ಯಾರ್ಥಿಗಳು. - ಧನಂಜಯ ಮೂಡುಬಿದಿರೆ