Advertisement

ಶಾಲೆಗೆ ಇನ್ನೂ ಸಮವಸ್ತ್ರ, ಪುಸ್ತಕ ಇಲ್ಲ

12:48 PM Jul 19, 2019 | Suhan S |

ಎಚ್.ಡಿ.ಕೋಟೆ: ಆಂಗ್ಲ ಮಾಧ್ಯಮ ಆದರ್ಶ ವಿದ್ಯಾಲಯ ಪ್ರಾರಂಭವಾಗಿ 9 ವರ್ಷ ಕಳೆದರೂ ಶಿಕ್ಷಕರ ಕೊರತೆ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳಿಂದ ವಂಚಿತ ವಾಗಿದೆ. ಶಾಲೆ ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ಸಮವಸ್ತ್ರ , ಶೂ ಹಾಗೂ ಪುಸ್ತಕಗಳನ್ನು ವಿತರಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

Advertisement

ಬಡ ಮಕ್ಕಳಿಗೂ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಯುಪಿಎ ಸರ್ಕಾರದ ಅವಧಿ ಯಲ್ಲಿ ಅರ್‌ಎಂಎಸ್‌ಎ ಯೋಜನೆಯಡಿ 400ಕ್ಕೂ ಹೆಚ್ಚು ಆದರ್ಶ ವಿದ್ಯಾಲಯಗಳನ್ನು ಮಂಜೂರು ಮಾಡಲಾಗಿತ್ತು. ಮಾಜಿ ಸಂಸದ ಆರ್‌. ಧ್ರುವನಾರಾಯಣ ಪರಿಶ್ರಮದ ಫಲವಾಗಿ ತಾಲೂಕಿನಲ್ಲೂ ಅದರ್ಶ ವಿದ್ಯಾಲಯ ಶಾಲೆ ಆರಂಭಗೊಂಡಿತ್ತು.

ಶಿಕ್ಷಕರ ಕೊರತೆ: ಶಾಲೆ ಪ್ರಾರಂಭಗೊಂಡು 9 ವರ್ಷ ಕಳೆದರೂ ಇದುವರೆಗೂ ಹಿಂದಿ ಮತ್ತು ಸಮಾನ್ಯ ವಿಜ್ಞಾನ ವಿಷಯಗಳಿಗೆ ಕಾಯಂ ಶಿಕ್ಷಕರಿಲ್ಲ, ಅಡಿಟೋರಿಯಂ ಇಲ್ಲ. ಸೈಕಲ್ ಸ್ಟಾಂಡ್‌ ಇಲ್ಲ. ಜೊತೆಗೆ ಇಲ್ಲಿ ಹೆಣ್ಣು ಮಕ್ಕಳು ಸೇರಿದಂತೆ 396 ಮಕ್ಕಳು ಕಲಿಯುತ್ತಿದ್ದರೂ ಸುರಕ್ಷತೆಗೆ ಕಾಂಪೌಂಡ್‌ ವ್ಯವಸ್ಥೆ ಕೂಡ ಇಲ್ಲ. ಹೀಗೆ ಹಲವು ಸಮಸ್ಯೆಗಳ ನಡುವೆ ಮಕ್ಕಳು ಕಲಿಯಬೇಕಾದ ಅನಿವಾರ್ಯತೆ ಎದುರಾಗಿದೆ.

ಅದರೆ ಸಮಸ್ಯೆಗಳನ್ನು ದೂರವಾಗಿಸುವ ನಿಟ್ಟಿನಲ್ಲಿ ತಾಲೂಕಿನ‌ ಜನಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲಿ ಶ್ರಮಸುತ್ತಿಲ್ಲ ಎಂದು ಶಾಲೆಯ ಎಸ್‌ಡಿಎಂಸಿ ಆಡಳಿತ ಮಂಡಳಿ ಆರೋಪಿಸಿದೆ.

ತಲುಪದ ಪಠ್ಯಪುಸ್ತಕ: ಶಾಲೆ ಪ್ರಾರಂಭವಾಗಿ ಎರಡು ತಿಂಗಳು ಕಳೆಯುತ್ತಿದ್ದರೂ ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆದಿರುವ 6ನೇ ತರಗತಿ ಹಾಗೂ 8ನೇ ತರಗತಿ ಮಕ್ಕಳಿಗೆ ಇನ್ನೂ ಪಠ್ಯ ಪುಸ್ತಕ ವಿತರಿಸಿಲ್ಲ. ಶೂ, ಸಮವಸ್ತ್ರ ಕೂಡ ದೊರೆತ್ತಿಲ್ಲ ಎಂಬ ತಿಳಿದು ಬಂದಿದೆ.

Advertisement

ಸಮಸ್ಯೆ ನಡುವೆ ಉತ್ತಮ ಫ‌ಲಿತಾಂಶ: ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಇರುವ ಕನಿಷ್ಠ ಸೌಲಭ್ಯಗಳನ್ನೇ ಬಳಸಿಕೊಂಡು ಇಲ್ಲಿ ಕಲಿತ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳು ಶಾಲೆ ಆರಂಭವಾಗಿದ್ದನಿಂದಲೂ ಇದುವರೆಗೂ ಶೇ.100 ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಕಳೆದ ವರ್ಷ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿ ಸುಪ್ರಿತ್‌ 625ಕ್ಕೆ 621 ಅಂಕ ಪಡೆದು ಜಿಲ್ಲೆಗೆ 2ನೇ ಮತ್ತು ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದನ್ನು ಸ್ಮರಿಸಬಹುದು.

ಕ್ಷೇತ್ರದ ಶಾಸಕರು, ಶಿಕ್ಷಣ ಇಲಾಖೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್‌ ಅಧ್ಯಕ್ಷರು ಹಾಗೂ ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತು ಪಟ್ಟಣದ ಆದರ್ಶ ವಿದ್ಯಾಲಯಕ್ಕೆ ಕೂಡಲೇ ಹಿಂದಿ ಮತ್ತು ಸಾಮಾನ್ಯ ವಿಜ್ಞಾನ ವಿಷಯದ ಕಾಯಂ ಶಿಕ್ಷಕರನ್ನು ನಿಯೋಜಿಸಬೇಕು. ಜೊತೆಗೆ ಕೂಡಲೇ ಪಠ್ಯ ಪುಸ್ತಕ, ಶೂ ವಿತರಿಸಿ, ಶಾಲೆಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಬೇಕಿದೆ ಎಂದು ಪೋಷಕರು ಆಗ್ರಹಿಸಿದ್ದಾರೆ.

 

● ಬಿ.ನಿಂಗಣ್ಣ ಕೋಟೆ

Advertisement

Udayavani is now on Telegram. Click here to join our channel and stay updated with the latest news.

Next