Advertisement
1898 ಶಾಲೆ ಆರಂಭಸುಸಜ್ಜಿತ ಸೌಲಭ್ಯಗಳನ್ನು ಹೊಂದಿರುವ ಶಾಲೆ
Related Articles
1953ರಲ್ಲಿ ವಿದ್ಯಾ ಇಲಾಖೆಯ ಮಂಜೂರಾತಿ ಲಭಿಸಿ, ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು. 1956ರಲ್ಲಿ ಎಂಟನೇ ತರಗತಿಯ ಮೊದಲ ತಂಡ ಹೊರಬಿದ್ದಿತು. ವಂ| ಲೋರೆನ್ ಫೆರ್ನಾಂಡಿಸ್ “ಪೇರಿಷ್ ಹಾಲ್’ ನಿರ್ಮಿಸಿರುವುದರ ಜತೆಗೆ ಶಾಲೆಗೆ ಪೀಠೊಪಕರಣ ಒದಗಿಸಿಕೊಟ್ಟರು. ಮುಂದೆ ವಂ| ಲಾರೆನ್ಸ್ ಮಾರ್ಟಿಸ್ ಶಾಲಾ ಸಂಚಾಲಕರಾದಾಗ ಮಕ್ಕಳ ಸಂಖ್ಯೆ 620ರ ಮಟ್ಟಕ್ಕೇರಿತು. ಜೋನ್ ಮೆಂಡೋನ್ಸರು ಆಗ ಮುಖ್ಯೋಪಾಧ್ಯಾಯರಾಗಿ ಶಾಲಾ ಪ್ರಗತಿಗೆ ಪರಿಶ್ರಮಿಸಿದ್ದರು. 1998ರಲ್ಲಿ ಶಾಲಾ ಶತಮಾನೋತ್ಸವ ನೆರವೇರಿತು. 2004ರಲ್ಲಿ ಶತಮಾನೋತ್ಸವ ಸ್ಮಾರಕ ಕಟ್ಟಡವನ್ನು ಆಗಿನ ಬಿಷಪ್ ವಂ| ಡಾ| ಎ.ಎಫ್. ಡಿ’ಸೋಜಾ ಉದ್ಘಾಟಿಸಿದರು.
Advertisement
ಜೋನ್ ಮೆಂಡೋನ್ಸಾ, ಫ್ರೆಡ್ರಿಕ್ ಎಂ. ಪಾçಯಸ್, ಸಿ| ಕಾರ್ಮಿನ್ ಶಿಕ್ಷಕರಲ್ಲಿ ವೆಂಕಪ್ಪಯ್ಯ ಮಾಸ್ಟ್ರೆ, ಹರಿ ಮಾಸ್ಟ್ರೆ, ಬಿಬಿಯಾನ ಪಿಂಟೋ, ವಲೇರಿಯನ್ ಡಿ’ಸೋಜಾ, ಜೋಸೆಫ್ ಪಿಂಟೋ, ಸಿ| ಕಾರ್ಮಿನ್, ಸೆಲ್ಲಿ ಪಿಂಟೋ, ತೆರೆಸಾ, ಜೂಲಿಯನ್ ಪಿಂಟೋ, ಇಗ್ನೇಶಿಯಸ್ ಸೆರಾವೊ, ಸಿ| ಐರಿನ್, ಸಿ| ಈಮಾ, ಸಿ| ಪಾವನಾ ಇನ್ನೂ ಅನೇಕರು ಮುಖ್ಯ ಶಿಕ್ಷಕರು, ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ.ಡಾ| ಎ.ಎಫ್. ಪಿಂಟೋ (ರಾಯನ್ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಪ್ರವರ್ತಕ), ಗೋಡ್ವಿನ್ ಪಾçಸ್ (ವಿಜ್ಞಾನಿ), ಮಿಶಲ್ ಕ್ವೀನಿ ಡಿ’ಕೋಸ್ತ (ಜಿಎಸ್‌ಟಿ ಸ.ಆಯುಕ್ತೆ), ಮಾಜಿ ಗ್ರಾ.ಪಂ. ಅಧ್ಯಕ್ಷ ಲಾಝರಸ್ ಡಿ’ಕೋಸ್ತ, ಸಂತೋಷ್‌ಕುಮಾರ್ ಶೆಟ್ಟಿ ಮುಚ್ಚಾರು (ಗುತ್ತಿಗೆದಾರರು), ಡಾ| ವಾದೀಶ್ ಭಟ್ (ಪ್ರಾಧ್ಯಾಪಕ), ಐವನ್ ಲೋಬೋ (ಪ್ರಗತಿಪರ ಕೃಷಿಕ), ವಂ| ಎವುಜಿನ್ ಲೋಬೋ (ರೋಮ್ ವ್ಯಾಟಿಕನ್ ರೇಡಿಯೋ ನಿರ್ದೇಶಕ), ತಿರುಚಿರಪಳ್ಳಿಯಲ್ಲಿ ಬಿಷಪ್ ಆಗಿದ್ದ ವಂ| ಜೇಕಬ್ ಮಿನೇಜಸ್, ಜಗದೀಶ್ ಬಲ್ಲಾಳ್‌ಬೈಲು (ಇಂಡಿಯನ್ ನೇವಿ), ರೋಶನ್ ಪಾçಸ್ (ಎನ್‌ಐಟಿಕೆ ಪ್ರಾಧ್ಯಾಪಕ), ವಂ| ಮೆಲ್ವಿನ್ ಪಿಂಟೋ (ರೇಡಿಯೋ ಸಾರಂಗ್), ಮಾರ್ಕ್ ಡಿಸೋಜ ಬೆಂಗಳೂರು(ಸಿಎ), ಉದ್ಯಮಿಗಳಾದ ಲ್ಯಾನ್ಸಿ ವಾಸ್, ಓಸ್ವಾಲ್ಡ್ ಡಿ’ಸೋಜಾ, ಫೆಲಿಕ್ಸ್ ಪಿಂಟೋ, ನವ್ಯಜ್ಯೋತಿ ನೆಲ್ಲಿಜೆ(ಪತ್ರಕರ್ತೆ) ಶಾಲೆಯ ಹಳೆಯ ವಿದ್ಯಾರ್ಥಿಗಳು. ಸುಸಜ್ಜಿತ ಸೌಲಭ್ಯಗಳು
ಪ್ರಸ್ತುತ ಸಂಚಾಲಕರಾಗಿ ವಂ| ಅಸ್ಸಿಸಿ ರೆಬೆಲ್ಲೋ, ಮುಖ್ಯೋಪಾಧ್ಯಾಯರಾಗಿ ಫ್ಲೊಸ್ಸಿ ಜೆಸಿಂತಾ ಡಿ’ಸೋಜಾ ಜತೆಗೆ 4 ಮಂದಿ ಗೌರವ ಶಿಕ್ಷಕರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಒಟ್ಟು 92 ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಕಂಪ್ಯೂಟರ್ ಶಿಕ್ಷಣ, ರಂಗಮಂದಿರ, ವಿಶಾಲ ಆಟದ ಬಯಲು . ಕೈತೋಟ ಎಲ್ಲವೂ ಇಲ್ಲಿವೆ. ಶಾಲಾ ಸ್ವತ್ಛತೆ ಚೆನ್ನಾಗಿದೆ. ಅಗ್ರಸ್ಥಾನಿ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶಿಕ್ಷಕರು ಓದಿನಲ್ಲಿ ಹಿಂದೆ ಬಿದ್ದಿರುವ ಮಕ್ಕಳ ಶೈಕ್ಷಣಿಕ ಮಟ್ಟವನ್ನು ಎತ್ತರಿಸಲು ಸದಾ ಕಾಳಜಿ ತೋರುತ್ತಿದ್ದಾರೆ. ಶಾಲೆ ಯಲ್ಲಿ ಗೌರವ ಶಿಕ್ಷಕರನ್ನು ನೇಮಿಸಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಆಂಗ್ಲಭಾಷಾ ಪ್ರೌಢಿಮೆ ವೃದ್ಧಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕಲಿಕೆಯಲ್ಲಿ ಹಿಂದಿರುವವರನ್ನು ಮುಂದಕ್ಕೆ ತರಲು ವಿಶೇಷವಾಗಿ ಪ್ರಯತ್ನಿಸುತ್ತಿದ್ದೇವೆ.
-ಫ್ಲೊಸ್ಸಿ ಜೆಸಿಂತಾ ಡಿ’ಸೋಜಾ, ಮುಖ್ಯೋಪಾಧ್ಯಾಯಿನಿ ಶಿಕ್ಷಕರು, ಸಹಪಾಠಿ ಗಳೊಂದಿಗೆ ಮರೆಯಲಾಗದ ಸಂಬಂಧವಿದೆ. ಇಂದು ನಾನೇನಾದರೂ ಸಾಧಿಸಿದ್ದಲ್ಲಿ ಅದರ ಶ್ರೇಯಸ್ಸು ಶಾಲೆಗೆ ಸಲ್ಲುತ್ತದೆ. ನಮ್ಮ ಶಾಲೆ ನನ್ನಲ್ಲಿ ಬಿತ್ತಿದ ಮೌಲ್ಯ, ಸಹಬಾಳ್ವೆ ಹಾಗೂ ಸೇವೆಯ ಮನೋಭಾವಕ್ಕೆ ನಾನು ಎಂದೆಂದೂ ಋಣಿ.
– ಮಿಶಲ್ ಕ್ವೀನಿ ಡಿ’ಕೋಸ್ತ, ಹಳೆ ವಿದ್ಯಾರ್ಥಿನಿ – ಧನಂಜಯ ಮೂಡುಬಿದಿರೆ